ಎ.ಪಿ.ಎಂ.ಸಿ ಯಲ್ಲಿ ಸೋಂಕು ನಿವಾರಣ ಯಂತ್ರ ಸ್ಥಾಪನೆ

 

 

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಎ.ಪಿ.ಎಂ.ಸಿ ಯಲ್ಲಿ ಸೋಂಕು ನಿವಾರಣ ಯಂತ್ರ ಸ್ಥಾಪನೆ

 

 

ಶ್ರೀನಿವಾಸಪುರ:- ಮಾವು ಸುಗ್ಗಿ ಮೇ 15 ರಿಂದ ಪ್ರಾರಂಭವಾಗಲಿದೆ ಇದಕ್ಕಾಗಿ ಶ್ರೀನಿವಾಸಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ(ಎ.ಪಿ.ಎಂ.ಸಿ) ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಎ.ಪಿ.ಎಂ.ಸಿ ಅಧ್ಯಕ್ಷ ರಾಜೇಂದ್ರಪ್ರಸಾದ್ ಹೇಳಿದರು.ಅವರು ಇಂದು ಮಾರುಕಟ್ಟೆಯಲ್ಲಿ ಸೊಂಕು ನಿವಾರಕ ಸುರಂಗ ಉದ್ಘಾಟನೆ ಮಾಡಿದ ಅವರು ಈ ಸಂದರ್ಭದಲ್ಲಿ ಮಾತನಾಡಿ ಕೊರೋನಾ ಸೋಂಕು ಹರಡದಂತೆ ಅವಶ್ಯ ಕ್ರಮಗಳನ್ನು ಈಗಿನಿಂದಲೆ ತಗೆದುಕೊಳ್ಳುತ್ತಿದ್ದು ಇದಕ್ಕೆ ಸಂಬಂದಿಸಿದ ಇಲಾಖೆ ಅಧಹಿಕಾರಿಗಳೊಂದಿಗೆ ಕಾರ್ಯನಿರ್ವಹಿಸಲು ತಯಾರು ಇರುವುದಾಗಿ ಹೇಳಿದರು.ತೋಟಗಳಿಂದ ಮಾವು ತರುವಂತ ವಾಹನದ ಚಾಲಕ ಮತ್ತು ಮಾವಿನ ಮಾಲಿಕನಿಗೆ ಮಾತ್ರ ಮಾರುಕಟ್ಟೆ ಆವರಣದಲ್ಲಿ ಬರಲು ಅವಕಾಶ ಕಲ್ಪಿಸಲಾಗುವುದು ಎಂದ ಅವರು ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಪ್ರತಿ ಮಂಡಿಗೂ ನಡುವೆ ಅಂತರ ಇಡಲು ನಿರ್ಧರಿಸಲಾಗಿದೆ ಇದಕ್ಕಾಗಿ ಅವಶ್ಯ ಬಿದ್ದರೆ ಖಾಸಗಿ ಜಮೀನು ಪಡೆದು ನೋಂದಾಯಿತ ದಲ್ಲಾಲರಿಗೆ ಮಾವು ವಹಿವಾಟು ನಡೆಸಲು ಅವಕಾಶ ಕಲ್ಪಸಲಾಗಿವುದು ಎಂದರು.
ಮಾವು ರವಾಣೆಗೆ ಸಂಬಂದಪಟ್ಟಂತೆ ಹೊರರಾಜ್ಯಗಳಿಂದ ಆಗಮಿಸುವ ಕೂಲಿಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಲು ವಿಶೇಷ ಕ್ರಮ ತಗೆದುಕೊಂಡು ನಂತರ ಅವರಿಗೆ ಕೆಲಸ ಮಾಡಲು ಅವಕಾಶ ನೀಡಲಾಗುವುದು. ಮಾವು ಬೆಳೆಗಾರರು ತಮ್ಮ ಫಸಲನ್ನು ನೇರವಾಗಿ ಮಾರುಕಟ್ಟೆ ಮಾಡಲು ತೋಟಗಾರಿಕೆ ಇಲಾಖೆ ಸಹಕಾರದೊಂದಿಗೆ ಬೆಂಗಳೂರಿನ ಅಪಾರ್ಟಮೆಂಟ್ ಗಳ ಬಳಿ ಮಾರಾಟ ಮಾಡಲು ಅನಕೂಲ ಮಾಡಿಕೊಡಲಿದೆ ಹಾಗು ಮ್ಯಾಂಗೋ ಬೋರ್ಡ ವತಿಯಿಂದ ಬೆಳೆಗಾರರಿಗೆ ರಟ್ಟು ಪೆಟ್ಟಿಗೆಗಳನ್ನು ಮತ್ತು ಪ್ಲಾಸ್ಟಿಕ್ ಕ್ರೆಟ್ ಗಳನ್ನು ರಿಯಾತಿ ಧರದಲ್ಲಿ ನೀಡಲು ಒಪ್ಪಿಗೆ ನೀಡಿದೆ ಈ ಎಲ್ಲಾ ಸೌಲಭ್ಯಗಳನ್ನು ಮಾವು ಬೆಳೆಗಾರರು ಬಳಸಿಕೊಳ್ಳುವಂತೆ ಹೇಳಿದರು.
ಪುರಸಭೆ ಮುಖ್ಯಾಧಿüಕಾರಿ ಮೋಹನ್ ಕುಮಾರ್ ಮಾತನಾಡಿ ಹೊರರಾಜ್ಯದಿಂದ ಬರುವಂತ ಕೂಲಿಕಾರ್ಮಿಕರ ಅರೋಗ್ಯದ ಬಗ್ಗೆ ಹೆಚ್ಚು ನೀಗಾ ವಹಿಸಬೇಕು ಜೊತೆಗೆ ಹೊರರಾಜ್ಯದಿಂದ ಮಾವು ಸಾಗಿಸಲು ಬರುವಂತ ವಾಹನಗಳ ವಿಚಾರವಾಗಿ ಅಗತ್ಯ ಕ್ರಮ ತಗೆದುಕೊಂಡು ಪ್ರತಿ ವಾಹನಕ್ಕೂ ಸೊಂಕು ನಿವಾರಣೆ ಸಿಂಪಡಿಸಿ ಪಟ್ಟಣಕ್ಕೆ ಆಗಮಿಸಲು ಅವಕಾಶ ನೀಡುವಂತಾಗಬೇಕು ಎಂದರು. ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ವಿಜಯ,ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಶ್ರೀನಿವಾಸ್,ಎ.ಪಿ.ಎಂ.ಸಿ ಕಾರ್ಯದರ್ಶಿ ವೇಣುಗೋಪಾಲ್, ನಿದೇಶಕರಾದ ನಾರಯಣಸ್ಡಾಮಿ, ರಾಜಣ್ಣ, ಯೋಗೇಂದ್ರಗೌಡ ಪುರಸಭೆ ಸದಸ್ಯ ಡಿಜೆಪಾಷ ಇದ್ದರು.