ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಉತ್ತಮ ತನಿಖೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್. ಜಾಹ್ನವಿ ಹಾಗೂ ಮಾಲೂರು ವೃತ್ತದ ವೃತ್ತ ನಿರೀಕ್ಷಕರಾದ ಬಿ.ಎಸ್.ಸತೀಶ್ ಇವರಿಗೆ ಕೇಂದ್ರ ಗೃಹ ಮಂತ್ರಿಗಳ ಪದಕ
ಕೋಲಾರ: ಕೋಲಾರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್. ಜಾಹ್ನವಿ ಹಾಗೂ ಮಾಲೂರು ವೃತ್ತದ ವೃತ್ತ ನಿರೀಕ್ಷಕರಾದ ಬಿ.ಎಸ್.ಸತೀಶ್ ಅವರು ಶ್ರೇಷ್ಠ ಮಟ್ಟದ ತನಿಖೆಯನ್ನು ಕೈಗೊಂಡಿರುವುದಕ್ಕಾಗಿ ಭಾರತ ಸರ್ಕಾರದ ಕೇಂದ್ರ ಗೃಹ ಮಂತ್ರಿಗಳ ಪದಕಕ್ಕೆ ಭಾಜನರಾಗಿರುತ್ತಾರೆ.
ಪ್ರಸ್ತುತ ಕೋಲಾರ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಸ್. ಜಾಹ್ನವಿ ಅವರು ಸಿಐಡಿ ವಿಭಾಗದಲ್ಲಿ ನಿರ್ವಹಿಸಿದ ತನಿಖೆಯನ್ನು ಆಧರಿಸಿ ಪದಕ ಪ್ರಧಾನ ಮಾಡಲಾಗಿರುತ್ತದೆ.
ಬಿ.ಎಸ್. ಸತೀಶ್ ಅವರು 2018 ನೇ ಸಾಲಿನಲ್ಲಿ ಮಾಲೂರು ಪೊಲೀಸ್ ಠಾಣೆಯಲ್ಲಿ 6 ಪೋಕ್ಸೋ ಆಕ್ಟ್ ಪ್ರಕರಣದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಆರೋಪಿಯನ್ನು 2 ದಿನಗಳಲ್ಲಿ ಬಂಧಿಸಿ, 16 ದಿನಗಳಲ್ಲಿ ತನಿಖೆಯನ್ನು ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಹಣ ಪಟ್ಟಿಯನ್ನು ಸಲ್ಲಿಸಿರುತ್ತಾರೆ. ನಂತರ ಕೇವಲ 18 ದಿನಗಳಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಯನ್ನು ಮುಗಿಸಿ 19ನೇ ದಿನದಂದು ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿರುತ್ತದೆ. ಈ ಹಿನ್ನೆಲೆಯಲ್ಲಿ ಉತ್ತಮ ತನಿಖೆಗಾಗಿ ಬಿ.ಎಸ್.ಸತೀಶ್ ಅವರಿಗೆ ಕೇಂದ್ರದ ಗೃಹ ಮಂತ್ರಿಗಳ ಪದಕ ದೊರಕಿರುತ್ತದೆ.
ಪದಕ ಪುರಸ್ಕøತ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕಾರ್ತಿಕ್ ರೆಡ್ಡಿ ಅವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.