ಉಡುಪಿ ಧರ್ಮಪ್ರಾಂತ್ಯದ ಎಲ್ಲಾ ಧರ್ಮಕೇಂದ್ರಗಳ ಸಾಮಾಜಿಕ ಸಂಪರ್ಕ ಸಾಧನ ಆಯೋಗಗಳ ಸಂಚಾಲಕರ ಸಭೆ

JANANUDI.COM NETWORK

ಉಡುಪಿ,ಅ.24: ಉಡುಪಿ ಧರ್ಮಪ್ರಾಂತ್ಯದ ಎಲ್ಲಾ ಧರ್ಮಕೇಂದ್ರಗಳ ಸಾಮಾಜಿಕ ಸಂಪರ್ಕ ಆಯೋಗಗಳ ಸಂಚಾಲಕರ  ಸಭೆ ಉಡುಪಿ ಧರ್ಮಪ್ರಾಂತ್ಯದ ಬಿಶಪ್ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಇವರ ಮಾರ್ಗದರ್ಶನದಲ್ಲಿ, ಉಡುಪಿಯ ಬಿಶಪರ ಸಭಾಭವನದಲ್ಲಿ ನಡೆಯಿತು. ೧೮ ಆಯೋಗಗಳ ಮಾರ್ಗದರ್ಶಕರಾಗಿರುವ ಬಿಶಪ್ ಸ್ವಾಮಿಯವರು ’ನಾವು ಕಳೆದ ಹಲವಾರು ವರ್ಷಗಳಿಂದ ಆಯೋಗಗಳನ್ನು ರಚಿಸಿದ್ದೆವೆ. ಆಯ್ಯಾಯ ಆಯೋಗಳ ಯೋಜನೆಯಂತ್ತೆ, ಹಲವಾರು ಯೋಜನೆಗಳು ತ್ರಪ್ತಿದಾಯಕವಾಗಿ ಯಶಸ್ಸನ್ನು ಪಡೆದಿವೆ, ಯಾವುದು ಪೂರ್ಣಗೊಂಡಿವೆ ಹಾಗೇ ಇವತ್ತಿನ ಪರಿಸ್ಥಿಯಲ್ಲಿ ಸೂಕ್ತವಲ್ಲದ ಯೋಜನೆಗಳನ್ನು ಬಿಟ್ಟು ಇವತ್ತಿನ ಅಗತ್ಯೆಗಳಿಗೆ ಪ್ರಾಶಸ್ಥ್ಯನೀಡಿ ಮುಂದಿನ ಐದು ವರ್ಷಗಳಿಗೆ ಯೋಜನೆಗಳನ್ನು ಹಮ್ಮಿಕೊಳ್ಳೋಣ, ಶಾಲ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಮಾಧ್ಯಮದ ಬಗ್ಗೆ ಸೆಮಿನಾರಗಳನ್ನು ನೀವು ಆಯೋಜಿಸಬೇಕು  ಸಾಮಾಜಿಕ ಸಂಪರ್ಕ ಸಾಧನ ಸಂಚಾಲಕರ ಜವಾಬ್ದಾರಿಯನ್ನು ವಿವರಿಸಿದರು’

     ‘ಹಾಗೇ ರೇಡಿಯೊ ಟಿ.ವಿ.ಗಳಲ್ಲಿ ಬೈಬಲ್ ಗೆ ಸಂಬಂಧ್ದ ಪಟ್ಟ ಹಾಡು, ಗೀತೆ, ಪ್ರಹಸನಗಳನ್ನು ಪ್ರದರ್ಶಿಸುವ ಅವಕಾಶಗಳಿವೆ, ಇದನ್ನು ಚರ್ಚ್ ಘಟಕಗಳಿಂದ ಸಾಧರ ಪಡಿಸಬಹುದು, ಇದಕ್ಕಾಗಿ ನೀವು ಶ್ರಮಿಸಬೇಕು, ಇದಕ್ಕಾಗಿ ಬೇಕಾಗುವಂತ  ಸಹಕಾರ ಮಾರ್ಗದರ್ಶನ, ಸಾಮಾಜಿಕ ಸಂಪರ್ಕ ಸಾಧನ ಆಯೋಗ ನೀಡುತ್ತದೆ’ ಎಂದು ಬಿಶಪ್ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ತಿಳಿಸಿದರು.

      ಉಡುಪಿ ಧರ್ಮಪ್ರಾಂತ್ಯದ ಸಾಮಾಜಿಕ ಸಂಪರ್ಕ ಸಾಧನ ಆಯೋಗದ ನಿರ್ದೇಶಕರಾದ ವಂ| ಧರ್ಮಗುರು ಚೇತನ್ ಲೋಬೊ, ಸ್ವಾಗತಿಸಿ ಕಳೆದ ವರ್ಷಗಳಲ್ಲಿ ಆದ ಕಾರ್ಯ ಯೋಜನೆಗಳ ವಿವರವನ್ನು ವಿವರಿಸಿ, ಮುಂದಿನ ವರ್ಷಗಳ ಯೋಜನೆಗಳನ್ನು ವಿವರಿಸಿ, ಮಾಧ್ಯಮಗಳಿಂದ ಆಗುವ ಅನಾಹುತಗಳ ಬಗ್ಗೆ ಚಿಂತೆ ಮಾಡಬೇಕಿದೆ.  ಇವತ್ತು ಜನರು ಹೆಚ್ಚಿನ ಸಮಯ ಮೊಬಾಯ್ಲನಲ್ಲಿ ವ್ಯಸ್ತರಾಗುತ್ತಾರೆ, ಈ ಪರಿಯಾಗಿ ನಾವು ಮೊಬಾಯ್ಲ್ ಗೀಳು ಹಚ್ಚಿಕೊಂಡ ನಾವು ಈ ವಿಷಯದಲ್ಲಿ ಹಿಂದಕ್ಕೆ ಸರಿಯದಿದ್ದರೆ, ನಮ್ಮ ಮಕ್ಕಳ ಮತ್ತು ದೇಶದ ಭವಿಸ್ಯ ಕರಾಳವಾಗುವುದು ಸತ್ಯ. ಫೇಕ್ ನ್ಯೂಸ್  ಹಂಚಿಕೊಳ್ಳುವುದು ಹಿರಿಯರೇ ಹೆಚ್ಚೆಂದು ಸಮೀಕ್ಷೆಯಿಂದ ತಿಳಿದು ಬಂದಿದೆ,ಹಾಗಾಗಿ ಹಿರಿಯರಿಗೆ ಫೇಕ್ ನ್ಯೂಸ್ ಕುರಿತು ಅರಿತುಕೊಳ್ಳುವ  ಬಗ್ಗೆ ಸೆಮಿನಾರ್ ಮಾಡುವ ಅಗತ್ಯವಿದೆ’ ಎಂದು ತಿಳಿಸಿದರು.

 ಹಿರಿಯ ಸಾಹಿತಿ ಪತ್ರಕರ್ತ ಬರ್ನಾಡ್ ಡಿಕೋಸ್ತಾ ’ಚರ್ಚಿನ ಸಾಮಾಜಿಕ ಸಂಪರ್ಕ ಸಾಧನ ಆಯೋಗದ ಸಂಚಾಲಕರಿಗೆ,  ಚರ್ಚ ಸುದ್ದಿಗಳನ್ನು ತಯಾರಿಸಿ ಬೇರೆ ಬೇರೆ ವೇಬ್ ಸಾಯ್ಟ್, ಪತ್ರಿಕೆಗಳಿಗೆ ಕಳುಹಿಸಿದರೆ ಪತ್ರಕರ್ತರಾಗುವ ಅವಕಾಶಗಳಿವೆ, ಈ ಅವಕಾಶವನ್ನು ಸಂಚಾಲಕರು ಸದುಪಯೋಗಗೊಳಿಸಿ ಕೊಳ್ಳಬೇಕು’ ಎಂದು ಸಲಹೆ ನೀಡಿದರು.

   ಉಡುಪಿ ಧರ್ಮಪ್ರಾಂತ್ಯದ ಎಲ್ಲಾ 18 ಆಯೋಗಗಳ ಸಂಚಾಲಕರಾದ ವಂ|ಧರ್ಮಗುರು ಹೇರಾಲ್ಡ್ ಪೀರೆರಾ ಪ್ರಾರ್ಥನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರಸ್ತಾವಿಕ ಮಾತುಗಳನ್ನಾಡಿದರು. ವಂ| ಧರ್ಮಗುರು ಚೇತನ್ ವಂದಿಸಿದರು.