JANANUDI.COM NETWORK
ಉಡುಪಿ ಜಿಲ್ಲೆಯಲ್ಲಿ ನಿನ್ನೆ 150ಪಾಸಿಟಿವ್ ಬಂದಿದೆ ಆದರೆ ಭಯಪಡುವ ಅಗತ್ಯವಿಲ್ಲ: ಡಿಸಿ ಜಗದೀಶ್
ಮೊದಲು ಪರೀಕ್ಷೆಗಳು ಕಡಿಮೆ ನಿಧಾನವಾಗಿರುತಿದ್ದವು. ಈಗ ಪರೀಕ್ಷೆಗಳ ವೇಗ ಹೆಚ್ಚುತಿದ್ದು. ಫಲಿತಾಂಶಗಳು ಹೆಚ್ಚುತ್ತಿವೆ
ಉಡುಪಿ ಜಿಲ್ಲೆಯಲ್ಲಿ ಒಂದೇ ದಿನ 150ಪ್ರಕರಣಗಳಲ್ಲಿ ಕೋವಿಡ್ ಸೋಂಕು ದೃಢವಾಗಿದೆ ಎಂಬ ಕಾರಣಕ್ಕೆ ಯಾರೂ ಭಯ ಪಡುವ ಅಗತ್ಯ ಇಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಡಿಸಿ ಜಗದೀಶ್ ಜನರಿಗೆ ತಿಳಿಸಿದ್ದಾರೆ
ಈ ಮೊದಲು ಕೊರೊನಾ ಟೆಸ್ಟ್ಗಳು ನಿಧಾನವಾಗಿ ಆಗುತ್ತಿದ್ದು. ಇನ್ನೂರು ಮುನ್ನೂರು ಟೆಸ್ಟ್ ಆಗುತ್ತಿದ್ದವು, ಹಾಗಾಗಿ ದಿನಕ್ಕೆ ಕೆಲವು ಮಂದಿ ಮಾತ್ರ ಕೋವಿಡ್ ಪಾಸಿಟಿವ್ ಎಂದು ಧ್ರಡ ಪಡುತಿದ್ದರು. ಈಗ ಪರೀಕ್ಷೆಗಳ ಕೀಟ್ ಗಳು ಹೆಚ್ಚಿದ್ದು, ಪರೀಕ್ಷೆಗಳ ವೇಗ ಹೆಚ್ಚಿದೆ. ಆದರಿಂದ ಫಲಿತಾಂಶಗಳು ಬೇಗನೆ ಬರುತ್ತಿವೆ. ಒಂದೇ ಸಾರಿ ಎರಡು ಸಾವಿರ ಜನರ ಪರೀಕ್ಷಾ ವರದಿ ಬಂದಿದ್ದು, ಒಂದೇ ಸಲ ಏರಿಕೆಗೆ ಕಾರಣಾವಾಗಿದೆ.
ಹೆಚ್ಚಿನ ಕೊರೋನಾ ಸೋಂಕು ದೃಢಪಟ್ಟ ವ್ಯಕ್ತಿಗಳು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಆದರೆ ಜನ ಭಯ ಪಡಬೇಕಾಗಿಲ್ಲ. ಅವರನ್ನು ಎಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಇದುವರೆಗೆ ಸೋಂಕಿತರಾದ ಒಟ್ಟು 410 ಮಂದಿಯಲ್ಲಿ ಇಬ್ಬರು ಮಾತ್ರ ಐಸಿಯುನಲ್ಲಿದ್ದು ಅವರು ಕೂಡ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಯಾರಿಗೀ ಅಪಾಯವಿಲ್ಲ. ಎಲ್ಲರಿಗೂ ಚಿಕಿತ್ಸೆಗೆ ಅವಕಾಶ ಹಾಸಿಗೆ ಲಭ್ಯತೆ ಇದ್ದು. ಯಾರೂ ಚಿಂತೆ ಮಾಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ