ಉಡುಪಿ – ಚಿಕ್ಕಮಗಳೂರು ಕ್ಷೇತ್ರದ 119 ನೇ ವಿಧಾನ ಸಭಾ ಕ್ಷೇತ್ರದ ಮಸ್ಟರಿಂಗ್ ಕೇಂದ್ರ ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನಲ್ಲಿ ಆರಂಭ – ಕುಂದಾಪುರ ಸೆಕ್ಷನ್ 144 ಜಾರಿ.
ಕುಂದಾಪುರ, ಎ.17:ಈ ಸಾಲಿನ ಲೋಕ ಸಭಾ ಚುನಾವಣೆಯ ಪ್ರಥಮ ಹಂತದ ಬಹಿರಂಗ ಪ್ರಚಾರ ನಿನ್ನೆ ಅಂತ್ಯಗೊಂಡಿದ್ದು. ಎಪ್ರಿಲ್ 18 ರಂದು ಮೊದಲ ಹಂತದ ಮತದಾನದ 14 ಲೋಕ ಸಭಾ ಕ್ಷೇತ್ರಗಳಲ್ಲಿ ನೆಡೆಯಲಿರುವುದರಿಂದ ಉಡುಪಿ – ಚಿಕ್ಕಮಗಳೂರು ಕ್ಷೇತ್ರದ 119 ನೇ ವಿಧಾನ ಸಭಾ ಕ್ಷೇತ್ರ (ಕುಂದಾಪುರ) ಮಸ್ಟರಿಂಗ್ ಕೇಂದ್ರ ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನಲ್ಲಿ ಬೆಳಿಗ್ಗೆ 8.30 ಕ್ಕೆ ಆರಂಭಗೊಂಡಿತು.
ಮೊದಲ, ದ್ವೀತಿಯ, ತ್ರತೀಯ ಪೆÇೀಲಿಂಗ್ ಅಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಹಾಜರಾಗಿ, ತಮ್ಮ ಮತದಾನ ಕೇಂದ್ರಗಳನ್ನು ತಿಳಿದುಕೊಂಡು, ಮತದಾನಕ್ಕೆ ಬೇಕಾದಂತಹ ವಿ.ವಿ ಪ್ಯಾಟ್, ಇಂಕ್ ಇನ್ನಿತರ ಪರಿಕರಗಳನ್ನು ತೆಗೆದುಕೊಂಡು ತಮ್ಮ ತಮ್ಮ ಮತದಾನ ಕೇಂದ್ರಕ್ಕೆ ತೆರಳುವಲ್ಲಿ ಕಾರ್ಯಪ್ರವತ್ತರಾದರು.
ಈ ಬಗ್ಗೆ ಕುಂದಾಪುರದಲ್ಲಿ ಬಿಗಿಯಾದ ಪೆÇಲೀಸ್ ಭಂದ್ ಭಸ್ತ್ ಮಾಡಲಾಗಿದ್ದು, ಭಂಡಾರ್ಕಾರ್ಸ್ ಕಾಲೇಜು ರಸ್ತೆಯಲ್ಲಿ ಇಕ್ಕೆಲಗಳಲ್ಲಿ ಪೆÇಲೀಸರು ಬ್ಯಾರಿಕೇಡಗಳನ್ನು ಹಾಕಿ ಕಾವಲನ್ನು ಕಾಯುತಿದ್ದಾರೆ. ಸಂಭಂದ್ದ ಪಟ್ಟವರಿಗೆ ಮಾತ್ರ ಬಿಡಲಾಗುತಿತ್ತು, ಇತರರಿಗೆ ಪ್ರವೇಶ ಮಾಡಲು ಅನುಮತಿ ನಿರಾಕರಿಸಲಾಗುತ್ತದೆ. ಕುಂದಾಪುರದಲ್ಲಿ ಮತದಾನದ ಪ್ರಕ್ರಿಯೆಗಾಗಿ ಪ್ರಜಾಪ್ರಾತಿನಿಧ್ಯ ಕಾಯ್ದೆ ಅನುಸಾರ ಇವತ್ತಿನಿಂದ ನಾಳೆ ತನಕ 48 ಗಂಟೆ ಕಾಲ ಸೆಕ್ಷನ್ 144 ಜಾರಿ ಮಾಡಲಾಗಿದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಚುನಾವಣೆಯು ಸಾಂಗಾವಾಗಿ ನೆರವೇರಲು ಡಾ|ಎಸ್.ಎಸ್. ಮಧುಕೇಶ್ವರ್ ಈ ಕ್ರಮವವನ್ನು ಕೈಗೊಂಡಿದ್ದಾರೆ