ಇವಿಎಂ ಸಾಗಾಟದ ಜಿಪಿಎಸ್ ಟ್ರ್ಯಾಕಿಂಗ್ ವಿವರ ಚುನಾವಣಾ ಆಯೋಗದ ಬಳಿ ಇಲ್ಲದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ; ಕಾಂಗ್ರೆಸ್ ಐ.ಟಿ ಸೆಲ್.

ಲೇಖನ: ಚಂದ್ರಶೇಖರ ಶೆಟ್ಟಿ

ಇವಿಎಂ ಸಾಗಾಟದ ಜಿಪಿಎಸ್ ಟ್ರ್ಯಾಕಿಂಗ್ ವಿವರ ಚುನಾವಣಾ ಆಯೋಗದ ಬಳಿ ಇಲ್ಲದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ; ಕಾಂಗ್ರೆಸ್ ಐ.ಟಿ ಸೆಲ್.

ಇವಿಎಂ ಮೆಪಿನ್ ಸಾಗಾಟದ ಜಿಪಿಎಸ್ ಟ್ರ್ಯಾಕಿಂಗ್ ಅಳವಡಿಕೆ ಕಡ್ಡಾಯ ಎಂಬ ನಿಯಮದ ಹೊರತಾಗಿಯೂ ಇದೀಗ ಚುನಾವಣಾ ಆಯೋಗ ತನ್ನ ಬಳಿ ಆ ಕುರಿತಾದ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಹೇಳಿರುವುದು ನಿಜಕ್ಕೂ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.  2019ರ ಲೋಕಸಭಾ ಚುನಾವಣೆಯಲ್ಲಿ ಖಚಿತವಾಗಿಯೂ ಇವಿಎಂ ಮೆಷಿನ್ ತಿರುಚುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಗಿತ್ತು ಎಂಬುವುದಕ್ಕೆ ಇದು ಪುರಾವೆ ಒದಗಿಸಿದೆ ಮತ್ತು ಈ ಪ್ರಕರಣದಲ್ಲಿ ಚುನಾವಣಾ ಆಯೋಗ ನೇರ ಬಾಗಿಯಾಗಿತ್ತು ಮತ್ತು ಅದರ ಭಾಗವಾಗಿಯೇ ಜಿಪಿಎಸ್ ಅಳವಡಿಕೆ ಮಾಡಲಾಗಿರಲಿಲ್ಲ ಅಥವಾ ಅಳವಡಿಕೆ ಮಾಡಿಯೂ  ಅದು ತನ್ನ ಬಳಿ  ಆ ವಿವರಗಳು ಲಭ್ಯವಿಲ್ಲ ಎಂದು ಹೇಳಲು ಕಾರಣವಾಗಿದೆ ಎಂದು ಕಾಂಗ್ರೆಸ್ ಐ.ಟಿ ಸೆಲ್ ರಾಜ್ಯ ಪ್ರದಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಆರೋಪಿಸಿದ್ದಾರೆ.

ಇವಿಎಂ ಮೆಷಿನ್‌ಗಳನ್ನು ಸಾಗಾಟ ಮಾಡುವ ವಾಹನಗಳಿಗೆ  ನೈಜ ಸಮಯದ ಜಿಪಿಎಸ್ ಟ್ರ್ಯಾಕಿಂಗನ್ನು ಬಾರತೀಯ ಚುನಾವಣಾ ಆಯೋಗ ಕಡ್ಡಾಯಗೊಳಿಸಿತ್ತು ಈ ಕುರಿತಾಗಿ  2019ರ ಲೋಕಸಭಾ ಚುನಾವಣೆ ದಿನಾಂಕ ಘೋಷಿಸಲು ಮಾರ್ಚ್ 10ರಂದು ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಸ್ವತಃ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಆರೋರಾ ಪ್ರಕಟಿಸಿದ್ದರು. ಆದರೆ 2019ರ ಲೋಕಸಭಾ ಚುನಾವಣಾ ಫಲಿತಾಂಶ ಘೋಷಣೆಗೆ ಮುನ್ನ ಆರ್‌ಟಿಐ ಕಾಯ್ದೆಯ ಅಡಿಯಲ್ಲಿ ಜಿಪಿಎಸ್ ಟ್ರ್ಯಾಕಿಂಗ್ ಕುರಿತಾದ ವಿವರ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗೆ ಉತ್ತರಿಸಿರುವ ಅದೇ ಚುನಾವಣಾ ಆಯೋಗ “ಆ ಕುರಿತಾದ ಜಿಪಿಎಸ್ ದತ್ತಾಂಶ ಹಾಗೂ ಆ ವಾಹನಗಳ ಓಡಾಟಕ್ಕೆ ಸಂಬಂಧಿಸಿದ ಯಾವುದೇ ಬೌತಿಕ ರೂಪದ ಮಾಹಿತಿ ನಮ್ಮ ಬಳಿ ಲಭ್ಯವಿಲ್ಲ” ಎಂದು ಹೇಳಿರುವುದಾಗಿ ವರದಿಯಾಗಿದೆ. 
ಇಷ್ಟಾಗಿಯೂ, ಇವಿಎಂ ತಿರುಚುವಿಕೆ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಮೋದಿ ಪಡೆಯ ಪರವಾಗಿ ಬಿಜೆಪಿಯೇತರ ಪಕ್ಷಗಳಲ್ಲಿ ವಾದಿಸುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವುದು ಇಂತಹ ನಗ್ನ ಸತ್ಯಗಳನ್ನು ಕೂಡಾ ವಿಶ್ಲೇಷಣೆಗೆ  ಒಳಪಡಿಸಲು ಹಿಂಜರಿಯುತ್ತಿರುವುದು ಇದು ನಿಜಕ್ಕೂ ಪ್ರಜಾಪ್ರಭುತ್ವದ ಅಣಕವೆ ಆಗಿದೆ ಮತ್ತು ಇವಿಎಂ ತಿರುಚುವಿಕೆ ಸಾಧ್ಯವಿಲ್ಲ ಎಂದು ಮಹಾನ್ ತಜ್ಞರಂತೆ ಬಡಬಡಿಸಿವವರು ಅದೇಕೆ ಈ ಕುರಿತಾಗಿ ಬೇರೆಬೇರೆ ಆಯಾಮಗಳಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡುತ್ತಿಲ್ಲ ಎಂಬುವುದು ನಿಜಕ್ಕೂ ಆಶ್ಚರ್ಯಕರವಾದ ವಿಚಾರವಾಗಿದೆ ಎಂದವರು ಪತ್ರಿಕಾ ಪ್ರಕಟಣೆಯಲ್ಲಿ ಖೇದ ವ್ಯಕ್ತಪಡಿಸಿದ್ದಾರೆ.