ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಆಲಿಕಲ್ಲು ಮಳೆಗೆ ನಷ್ಠವಾಗಿರುವ ಮಾವುಗೆ ಬೆಂಬಲ ಬೆಲೆ ಕೊಡಬೇಕೆಂದು ಒತ್ತಾಹಿಸಿ ರೈತ ಸಂಘ ತಹಶೀಲ್ದಾರ್ಗೆ ಮನವಿ.
ಶ್ರೀನಿವಾಸಪುರ ಇತ್ತೀಚಿಗೆ ತಾಲ್ಲೂಕು ವ್ಯಾಪ್ತಿಯಲ್ಲಿ ಸುರಿದ ಅಲಿಕಲ್ಲು ಮಳೆಗೆ ಮಾವು ಬೆಳೆ ಹಾನಿಯಾಗಿದ್ದು, ರೈತರಿಗೆ ನಷ್ಟ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಹಾಗೂ ಮಾವು ಬೆಳೆಗಾರರು ಗುರುವಾರ ತಹಶೀಲ್ದಾರ್ ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ತಾಲ್ಲೂಕಿನಲ್ಲಿ ಬಹುತೇಕ ರೈತರು ಮಾವು ಬೆಳೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ, ಇತ್ತೀಚಿಗೆ ಸುರಿದ ಅಲ್ಲಿಕಲ್ಲು ಮಳೆಗೆ ಮಾವು ನೆಲಕಚ್ಚಿದ್ದು ನಷ್ಟಕ್ಕೆ ಒಳಗಾಗಿದ್ದಾರೆ, ಅಧಿಕಾರಿಗಳು ಕೂಡಲೇ ಬೆಳೆ ನಷ್ಟ ಸರ್ವೇ ಮಾಡಿಸಿ ರೈತರಿಗೆ ಪರಿಹಾರ ಕಲ್ಪಿಸಲು ಬೇಕು ಎಂದು ಒತ್ತಾಯಿಸಿದರು.
ಈ ವರ್ಷ ಫಸಲು ಕಡಿಮೆಯಾಗಿದ್ದು, ಬೆಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು, ಆದರೆ ಈಗ ಕೊರೊನ ವೈರಸ್ ನಿಯಂತ್ರಣಕ್ಕೆ ಲಾಕ್ಡೌನ್ ಜಾರಿಯಲ್ಲಿದ್ದು, ರೈತರು ಅತಂಕಕ್ಕೆ ಒಳಗಾಗಿದ್ದಾರೆ, ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು, ಇದಕ್ಕೆ ಪೂರಕವಾಗಿ ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ತಾಲ್ಲೂಕು ಆಡಳಿತ ಮತ್ತು ತೋಟಗಾರಿಕೆ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಚಿನ್ನಪ್ಪ ರೆಡ್ಡಿ ಮಾತನಾಡಿ, ಜನ ಎಲ್ಲ ಕೊರೊನ ಭೀತಿಯಲ್ಲಿದ್ದಾರೆ, ಮಾವು ಮಾರಾಟವಾಗಬೇಕಾದರೆ ಹೊರ ರಾಜ್ಯಗಳ ಮಾವು ವ್ಯಾಪಾರಸ್ಥರು ಬರಬೇಕು, 1 ಸಾವಿರಕ್ಕೂ ಹೆಚ್ಚು ಲಾರಿಗಳು ಬರಬೇಕು, ಟ್ರಾನ್ಸ್ ಪೋರ್ಟ್ ಮಾಲೀಕರನ್ನು ಸಂಪರ್ಕಿಸಿ ಇಲ್ಲಿಗೆ ಬರುವ ಲಾರಿ ಚಾಲಕ ಮತ್ತು ಸಹಾಯಕನ್ನು ಕ್ವಾರಂಟೈನ್ ಮಾಡಿಸಬೇಕು, ಹೊರ ರಾಜ್ಯದಿಂದ ಬರುವ ಕೂಲಿ ಕಾರ್ಮಿಕರನ್ನು ತಡೆಯಬೇಕು ಎಂದು ಸಲಹೆ ನೀಡಿದರು.
ಇತ್ತೀಚಿಗೆ ಸುರಿದ ಅಲ್ಲಿಕಲ್ಲು ಮಳೆಯಿಂದ ಮಾವು ಹಾನಿಯಾಗಿದೆ, ಕಳೆದ ವರ್ಷಗಿಂತ ಈ ವರ್ಷ ಮಾವಿ ಫಸಲು ಕಡಿಮೆಯಾಗಿದೆ, ಹೀಗೆ ಒಂದಲ್ಲ ಒಂದು ರೀತಿ ರೈತರು ಸಮಸ್ಯೆಗೆ ಸಿಕ್ಕಾಕಿಕೊಳ್ಳುತ್ತಿದ್ದಾರೆ, ಪಲ್ಪ್ ಪ್ಯಾಕ್ಟರಿಗಳಿಗೆ ಬೇಕಾದಷ್ಟು ಮಾವನ್ನು ಇಲ್ಲಿ ಖರೀದಿ ಮಾಡಲು ಸೂಚನೆ ನೀಡಬೇಕು, ಹೊರ ರಾಜ್ಯದ ಮಾರುಕಟ್ಟೆ ಮಾವು ಮಾರಾಟ ಮಾಡಲು ಅವಕಾಶ ನೀಡಿದಾಗ ಮಾತ್ರ ಮಾವು ಬೆಳೆಗಾರರು ಸುಧಾರಣೆಯಾಗಲು ಸಾಧ್ಯವಾಗುತ್ತದೆ, ಇದಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕೋರಿದರು. ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಶೇಕ್ಶಫೀವುಲ್ಲಾ ಹಾಜರಿದ್ದರು.