JANANUDI.COM NETWORK
ಕುಂದಾಪುರ,ಸೆ.5: ಕುಂದಾಪುರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಗ್ರಾಮ ಪಂಚಾಯತಗಳಿಗೆ ‘ಆರೋಗ್ಯ ಹಸ್ತ ಕಿಟ್’ ವಿತರಣೆ ಕಾರ್ಯಕ್ರಮ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಸೆ. 4ರಂದು ನಡೆಯಿತು.ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ ಜಿಲ್ಲಾ ಅಧ್ಯಕ್ಷ ಅಶೋಕ ಕುಮಾರ ಕೊಡವೂರು ‘ರಾಜ್ಯದ ಜನತೆ ಕೊರೊನಾ ಸಂಕಷ್ಟದಲ್ಲಿರುವಾಗ ಸರಕಾರ ಜನತೆಯ ಕಷ್ಟಗಳಿಗೆ ಸ್ಪಂದಿಸದೆ ಆಕ್ರಮಗಳ ದಂದೆಯನ್ನು ನಡೆಸುತ್ತಿದೆ. ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದಲ್ಲಿದ್ದರೂ ಜನರಿಗೆ ಸಾಂತ್ವಾನ ಹೇಳಿ ಪ್ರತಿ ಮನೆಗೂ ವೈಧ್ಯಕೀಯ ಮಾರ್ಗದರ್ಶನ ನೀಡುವ ಕೆಲಸವನ್ನು “ಆರೋಗ್ಯ ಹಸ್ತದ” ಕಾರ್ಯಕ್ರಮದ ಮೂಲಕ ಮುಂದಿನ ದಿನಗಳಲ್ಲಿ ನಡೆಸಲಾಗುವುದು’ ಎಂದರು.
ಆರೋಗ್ಯ ಹಸ್ತದ ಸಂಚಾಲಕರಾದ ಡಾ|ಸಂದೀಪಮಾತನಾಡಿ ಈ ಕಾರ್ಯಕ್ರಮದಿಂದ ಪ್ರತಿ ಮನೆಯಲ್ಲಿ ಮುಂಜಾಗ್ರತೆಯ ಕನಿಷ್ಟ ವೈಧ್ಯಕೀಯ ತಪಾಸಣೆಯನ್ನು ನೆಡೆಸುವ ಕ್ರಮದ ಬಗ್ಗೆ ಮಾರ್ಗದರ್ಶನ ನೀಡಿದರು.
ಕುಂದಾಪುರ ಬ್ಲಾಕಿನ ಪ್ರತಿ ಗ್ರಾಮಪಂಚಾಯತ್ ಮುಖಂಡರುಗಳಿಗೆ ‘ಆರೋಗ್ಯ ಹಸ್ತ ಕಿಟ್’ ಗಳನ್ನು ಈ ಸಂದರ್ಭದಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ಮಲ್ಯಾಡಿ ಶಿವರಾಮ ಶೆಟ್ಟಿ ಪಿ.ಎಲ್.ಡಿ.ಬ್ಯಾಂಕಿನ ಅಧ್ಯಕ್ಷರು ಈಕಾರ್ಯಕ್ರಮದಿಂದ ಕಾಂಗ್ರೆಸ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಮನೆಯ ಸದಸ್ಯರೊಂದಿಗೆ ಉತ್ತಮ ಭಾಂದವ್ಯ ಹೊಂದಲು ಸಾಧ್ಯವಾಗುವುದೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಕ್ರಷ್ಣದೇವ ಕಾರಂತ, ರಾಜ್ಯ ಐ.ಟಿ.ಸೆಲ್ ಪ್ರಧಾನಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ಪುರಸಭಾ ಸದಸ್ಯೆ ದೇವಕಿ ಸಣ್ಣಯ್ಯ, ಪ್ರಭಾವತಿ ಶೆಟ್ಟಿ, ಲಕ್ಷ್ಮಿ ಭಾಯಿ, ಅಶ್ಪಕ್ ಕೋಟಿ, ಡಿಜಿಟಲ್ ಯೂತ್ ಕಾಂಗ್ರೆಸ್ ಸಂಯೋಜಕರು ರೋಶನ್ ಶೆಟ್ಟಿ, ಟ್ಯಾಕ್ಷಿ ಡ್ರೈವರ್ ಎಸೊಷಿಯನ್ ಅಧ್ಯಕ್ಷ ಲಕ್ಷ್ಮಣ ಶೆಟ್ಟಿ, ಬ್ಲಾಕ್ ಐ.ಟಿ.ಶೆಲ್ ಅಧ್ಯಕ್ಷ ಕೆ.ಶಿವಕುಮಾರ, ಗಣಪತಿ ಶೇಟ್,ಅನಿಲ್ ಕುಮಾರ್, ಕೆ.ಸುರೆಶ್, ರೋೀಶನ್ ಬಾರೆಟ್ಟೊ, ಶಸಿರಾಜ್.ಎಮ್, ಆಶಾ ಕರ್ವಾಲ್ಲೊ, ಸುಭಾಶ್ ಪೂಜಾರಿ, ದೀಪಕ್ಕುಮಾರ್ಶೆಟ್ಟಿ ಕಾಳಾವರ, ಬಾಬು ಪೂಜಾರಿ ಕೋಣಿ, ಅಶೋಕ ಸುವರ್ಣ, ಜಯಶೀಲಶೆಟ್ಟಿ ಬೆಲೂರು, ರಾಜೇಂದ್ರ ಶೆಟ್ಟಿ, ಸೂರ್ಯ ಪ್ರಕಾಶ್ ದಾಂಬ್ಲೆ, ಅಣ್ಣಪ್ಪ ಹಾಲಾಡಿ, ಆರೀಫ್ ಹುಸೇನ್, ಸಂತೋಷ್ ಸಾಲಿಯಾನ್, ಅಣ್ಣಯ್ಯ ಪುತ್ರನ್ ಕುಂಬಾಶಿ, ಚಂದ್ರಶೇಖರ ಶೆಟ್ಟಿ, ದಿನೇಶ್ ಮೊಗವೀರ, ಕ್ರಷ್ಣಬೆಳ್ವೆ, ಸೂರ್ಯ ಪೂಜಾರಿ ಹೆಂಗವಳ್ಳಿ, ನವೀನ್ ಚಂದ್ರ ಶೆಟ್ಟಿ, ಜ್ಯೋತಿ ಡಿ.ನಾಯ್ಕ್, ವಿಜಯದರ್ ಕೆ.ವಿ., ಸಂತೋಷ್ ಮೊಗವೀರ, ವಿಠಲ ಕಾಂಚನ್, ಶಶಿ ಬರ್ಕೂರು, ಧರ್ಮ ಪ್ರಕಾಶ್, ಅಶೋಕ ಸುವರ್ಣ, ಸದಾನಂದ ಖಾರ್ವಿ, ಎಚ್.ರಾಜಶೇಖರ ಶೆಟ್ಟಿ, ರಾಘವೇಂದ್ರ ಪೂಜಾರಿ, ಪಲ್ಲವಿ ಇನ್ನಿತರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ನಾರಾಯಣ ಆಚಾರಿ ವಂದಿಸಿದರು.