ಆಪರೇಷನ್ ಕಮಲಕ್ಕೆ ಮೋದಿಯ ಕುಮ್ಮಕ್ಕು ಇದೆ : ಜಿಟಿ ದೇವೇಗೌಡ
ಫೆ:7: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ರಚಿಸಲು ಪ್ರಯತ್ನ ಮಾಡಿ, ಬಹುಮತ ಇಲ್ಲದೇ ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಉರುಳಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಚಿವ ಜಿ.ಟಿ. ದೇವೇಗೌಡ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿ ದೇವೇಗೌಡ ‘ಆಪರೇಷನ್ ಕಮಲ ಮೂಲಕ ಗದ್ದುಗೆ ಏರಲು ಯಡಿಯೂರಪ್ಪ ಸರ್ವ ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕಾಗಿ ನಮ್ಮ ಶಾಸಕರಿಗೆ ಕೋಟಿ ಕೋಟಿ ರೂಪಾಯಿ ಆಫರ್ ಮಾಡುತ್ತಿದ್ದಾರೆ ಎಂದರು. ಬಿ,ಜೆ.ಪಿಯವರು ಎನೇ ಮಾಡಿದರೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಐದು ವರ್ಷ ಆಡಳಿತ ಪೂರೈಸುವುದು ಖಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ. ಸಮ್ಮಿಶ್ರ ಸರಕಾರ ಶುಕ್ರವಾರ ಕೂಡ ಬಜೆಟ್ ಮಂಡನೆಯಾಗಲಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸರ್ವರಿಗೂ ಪೂರಕವಾಗುವ ಜನಪ್ರಿಯ ಬಜೆಟ್ ಮಂಡನೆ ಮಾಡಲಿದ್ದಾರೆ’ ಎಂದು ಸಚಿವ ಜಿಟಿ ದೇವೇಗೌಡ ತಿಳಿಸಿದರು.
‘ಈ ಆಪರೇಷನ್ ಕಮಲ ವಿಧಾನ ಸಭೆಯಲ್ಲಿ ಗಲಾಟೆ ಈ ಎಲ್ಲ ಬೆಳವಣಿಗೆಗಳಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಆಮಿತ್ ಶಾ ಅವರ ಕುಮ್ಮಕ್ಕು ಇದೆ. ಅವರ ಸೂಚನೆಗಳಿಲ್ಲದೆ ಬಿಜೆಪಿ ರಾಜ್ಯ ನಾಯಕರು ಈ ರೀತಿ ಮಾಡಲು ಸಾಧ್ಯವಿಲ್ಲ’ ಎಂದು ಅವರು ತಿಳಿಸಿದ್ದಾರೆ.