ಅಬ್ಬನಡ್ಕ ವಾಸು ಪೂಜಾರಿಯವರ ನಿವಾಸದಲ್ಲಿ ಅಂತರ್ಜಲ ಅಭಿವೃದ್ಧಿ ಅಭಿಯಾನ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಮಳೆಕೊಯ್ಲು ಪದ್ಧತಿ ಅನುಷ್ಠಾನ

ವರದಿ: ವಾಲ್ಟರ್ ಮೊಂತೇರೊ

ಅಬ್ಬನಡ್ಕ ವಾಸು ಪೂಜಾರಿಯವರ ನಿವಾಸದಲ್ಲಿ ಅಂತರ್ಜಲ ಅಭಿವೃದ್ಧಿ ಅಭಿಯಾನ
ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ಮಳೆಕೊಯ್ಲು ಪದ್ಧತಿ ಅನುಷ್ಠಾನ

ಭಾರತ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಉಡುಪಿ, ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಹಯೋಗದಲ್ಲಿ ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್‍ಶಿಪ್ ಕಾರ್ಯಕ್ರಮದಡಿಯಲ್ಲಿ ಅಬ್ಬನಡ್ಕ ವಾಸು ಪೂಜಾರಿಯವರ ನಿವಾಸದಲ್ಲಿ ಅಂತರ್ಜಲ ಅಭಿವೃದ್ಧಿಗಾಗಿ ಮಳೆಕೊಯ್ಲು ಪದ್ಧತಿಯನ್ನು ಅನುಷ್ಠಾನಗೊಳಿಸಲಾಯಿತು.
ಮನೆಯ ತಾರಸಿನಿಂದ ಬಿದ್ದ ಹಾಗೂ ಮನೆಯ ಕಂಪೌಂಡ್ ಸುತ್ತ ಹರಿವ ನೀರನ್ನು ಒಂದಡೆ ಸೇರಿಸಿ ಸುಮಾರು ಏಳು ಅಡಿ ಹೊಂಡಕ್ಕೆ ಸುತ್ತ ಪಾದೆ ಕಲ್ಲು ಕಟ್ಟಿ ಅದಕ್ಕೆ ಇದ್ದಿಲು, ಮೂರು ವಿಧದ ಜಲ್ಲಿ ಕಲ್ಲು ಹಾಗೂ ಮರಳು ಹಾಕಲಾಗಿದ್ದು ಈ ಮೂಲಕ ನೆಲದೊಳಗೆ ನೀರನ್ನು ಸೇರಿಸುವ ಮೂಲಕ ಅಂತರ್ಜಲ ಅಭಿವೃದ್ದಿ ಅಭಿಯಾನ ನಡೆಸಲಾಯಿತು. ಈ ಪದ್ಧತಿಯ ವಿಧಾನದಲ್ಲಿ ಅಂತರ್ಜಲ ಹಾಗೂ ನೀರಿನ ಕೊರತೆಯನ್ನು ನೀಗಿಸಬಹುದು ಎಂಬುವುದನ್ನು ನೆರೆದವರಿಗೆ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ರಾಜೇಶ್ ಕೋಟ್ಯಾನ್, ಸರಿತಾ ವಾಸು ಪೂಜಾರಿ, ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸ್ಥಾಪಕಾಧ್ಯಕ್ವ ವಿಠಲ ಮೂಲ್ಯ, ಕಾರ್ಯಕ್ರಮದ ನಿರ್ದೇಶಕ ಅಬ್ಬನಡ್ಕ ಸತೀಶ್ ಪೂಜಾರಿ, ನಿಕಟ ಪೂವಾಧ್ಯಕ್ಷ ಕಾಸ್ರಬೈಲು ಸುರೇಶ್ ಪೂಜಾರಿ, ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ಉಪಾಧ್ಯಕ್ಷ ಹರೀಶ್ ಪೂಜಾರಿ, ಕೋಶಾಧಿಕಾರಿ ಹರಿಪ್ರಸಾದ್ ಆಚಾರ್ಯ, ಸುನೀತಾ ಪಿಂಟೋ ಮೊದಲಾದವರಿದ್ದರು.