ಅನರ್ಹರು ಪಡೆದಿರುವ ಬಿ.ಪಿ.ಎಲ್ ಚೀಟಿಯನ್ನು ಹಿಂತಿರುಗಿಸಲು ಮಾರ್ಚ್ 31 ರ ಗಡವು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಅನರ್ಹರು ಪಡೆದಿರುವ ಬಿ.ಪಿ.ಎಲ್ ಚೀಟಿಯನ್ನು ಹಿಂತಿರುಗಿಸಲು ಮಾರ್ಚ್ 31 ರ ಗಡವು.
ಕೋಲಾರ: ಆರ್ಥಿಕವಾಗಿ ದುರ್ಬಲರಿರುವ ಕುಟುಂಬಗಳಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿರುವ ಬಿ.ಪಿ.ಎಲ್ ಪಡಿತರ ಚೀಟಿಯನ್ನು ಕೆಲವು ಆರ್ಥಿಕವಾಗಿ ಸದೃಢ ಕುಟುಂಬಗಳು ಸುಳ್ಳು ಮಾಹಿತಿ ನೀಡಿ ಪಡೆದುಕೊಂಡು ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ. ಬಿ.ಪಿ.ಎಲ್ ಪಡಿತರ ಚೀಟಿ ಪಡೆಯಲು ಕೆಲವು ಮಾನದಂಡಗಳನ್ನು ನಿಗದಿಪಡಿಸಿದೆ. ಇದನ್ನು ಹೊರುತಪಡಿಸಿ ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರುವ ಪಡಿತರ ಚೀಟಿದಾರರು ತಾವು ಪಡೆದಿರುವ ಅನರ್ಹ ಪಡಿತರ ಚೀಟಿಗಳನ್ನು ಸರ್ಕಾರವು ಕ್ರಮಕೈಗೊಳ್ಳುವ ಮೊದಲು ಸೆಪ್ಟೆಂಬರ್ 31 ರೊಳಗೆ ಹಿಂತಿರುಗಿಸಲು ಕಾಲಾವಕಾಶ ನೀಡಲಾಗಿತ್ತು. ಈಗ ಮತ್ತೊಮ್ಮೆ ಹಿಂತಿರುಗಿಸಲು ಅವಕಾಶ ಕಲ್ಪಿಸಿದ್ದು, ತಮ್ಮ ವ್ಯಾಪ್ತಿಯ ಆಹಾರ ನಾಗರಿಕ ಸರಬರಾಜು ಇಲಾಖೆಗೆ 2020 ಮಾರ್ಚ್ 31 ರೊಳಗಾಗಿ ಹಿಂತಿರುಗಿಸಲು ತಿಳಿಯಪಡಿಸಿದೆ.
 ಆದಾಯ ತೆರಿಗೆ ಪಾವತಿಸುತ್ತಿರುವ ಮತ್ತು 10 ಚದರಕ್ಕಿಂತ(1000 ಅಡಿಗಳ) ದೊಡ್ಡದಾದ ಪಕ್ಕಾ ಮನೆ ಹೊಂದಿರುವವರು, ಶಿಕ್ಷಣ, ಸಾರಿಗೆ, ವಿದ್ಯುತ್, ರೈಲ್ವೆ, ಪೊಲೀಸ್ ಮೊದಲಾದ ಇಲಾಖೆಗಳಲ್ಲಿ ಸರ್ಕಾರಿ ನೌಕರರು, ಸಹಕಾರ ಸಂಘಗಳ ಖಾಯಂ ನೌಕರರು, ಸ್ವಾಯತ್ತ ಸಂಸ್ಥೆ, ಮಂಡಳಿಗಳ ನೌಕರರು, ಆಸ್ಪತ್ರೆ ನೌಕರರು, ಆಡಿಟರ್ಸ್‍ಗಳು, ದೊಡ್ಡ ಅಂಗಡಿ, ಹೋಟೆಲ್ ವರ್ತಕರು ಕೆಲವರು ತಮ್ಮ ಹೆಸರನ್ನು ಹೊರತುಪಡಿಸಿ ಕುಟುಂಬದ ಇತರರ ಹೆಸರಿನಲ್ಲಿ ಬಿ.ಪಿ.ಎಲ್  ಪಡಿತರ ಚೀಟಿಯನ್ನು ಪಡೆದು ಸರ್ಕಾರಕ್ಕೆ ವಂಚಿಸುತ್ತಿದ್ದಾರೆ.
 ಸರ್ಕಾರವು ಸಹಾಯಧನವನ್ನು ಪಾವತಿಸಿ ದುರ್ಬಲ ವರ್ಗದವರಿಗೆ ಅಕ್ಕಿ ನೀಡುತ್ತಿರುವ ಈ ಯೋಜನೆಯನ್ನು ಕೆಲವು ಸದೃಢರು ಸುಳ್ಳು ಮಾಹಿತಿ ನೀಡಿ ವಂಚಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದ್ದು, ಅನರ್ಹರು ಪಡೆದಿರುವ ಬಿ.ಪಿ.ಎಲ್. ಪಡಿತರ ಚೀಟಿಯನ್ನು ಕೂಡಲೇ ಕಛೇರಿಗೆ ಹಿಂತಿರುಗಿಸಿ, ಇಲ್ಲವಾದರೆ ಅವಧಿ ಮೀರಿದ ನಂತರ ಅನರ್ಹರನ್ನು ಸರ್ಕಾರವೇ ಪತ್ತೆ ಮಾಡಿದ್ದಲ್ಲಿ, ಯಾವ ದಿನಾಂಕದಿಂದ ಎಷ್ಟು ಅಕ್ಕಿ ಪಡೆದಿರುತ್ತಾರೆ ಎಂಬುದನ್ನು ಲೆಕ್ಕ ಹಾಕಿ ಹಣ ವಸೂಲಿ ಮಾಡುವುದರ ಜೊತೆಗೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.