ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನ – ಮನೆ ಮನೆ ಭೇಟಿ ಕರ್ನಾಟಕ

ವರದಿ: ಕೆ.ಜಿ.ವೈದ್ಯ

 

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನ – ಮನೆ ಮನೆ ಭೇಟಿ

 

 

ಕುಂದಾಪುರ : ಮುಂಬರುವ ದಶಂಬರ್ 28 ಮತ್ತು 29 ರಂದು ಕೋಟೇಶ್ವರದಲ್ಲಿ ನಡೆಯಲಿರುವ ಹತ್ತನೇ ಅಖಿಲ ರ‍್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನ -2019ರ ಪರ‍್ವಭಾವಿಯಾಗಿ ಇದೀಗ ಪ್ರತಿ ಮನೆಮನೆಗೆ ಆಹ್ವಾನ ಪತ್ರಿಕೆ ತಲುಪಿಸುವ ಕರ‍್ಯ ಭರದಿಂದ ಸಾಗಿದೆ. ಸಮಗ್ರ ಕರ‍್ಯನರ‍್ವಹಣೆಗಾಗಿ ಈಗಾಗಲೇ ವಿವಿಧ ಸಮಿತಿ – ಉಪಸಮಿತಿಗಳನ್ನು ರಚಿಸಿ ವ್ಯಾಪಕವಾಗಿ ಕರ‍್ಯ ಸಾಗಿದೆ.

ಕೋಟೇಶ್ವರ ವಲಯ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಪಿ. ಗಣಪಯ್ಯ ಚಡಗರ ನೇತೃತ್ವದಲ್ಲಿ ವಾಸುದೇವ ಹೊಳ್ಳ, ಪ್ರಕಾಶ್ ಉಪಾಧ್ಯ, ವಾದಿರಾಜ ಹೆಬ್ಬಾರ್, ಸೀತಾರಾಮ ಧನ್ಯ, ವಾದಿರಾಜ ಅಡಿಗ, ರಾಘವೇಂದ್ರ ಹತ್ವಾರ್, ನಾಗರಾಜ ಅಡಿಗ ಬಸವನಗುಡಿ ಇವರುಗಳ ತಂಡ ಕೋಟೇಶ್ವರ ವಲಯದಾದ್ಯ0ತ ಸಂಚರಿಸಿ ಮಹಾ ಸಮ್ಮೇಳನದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಶ್ರಮಿಸುತ್ತಿದೆ.

ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ನರ‍್ವಹಣೆಯಲ್ಲಿ ಹಮ್ಮಿಕೊಳ್ಳಲಾದ ಈ ಮಹಾ ಸಮ್ಮೇಳನವು ಕುಂದಾಪುರ ತಾಲೂಕು ಕೋಟೇಶ್ವರದ ಹಾಲಾಡಿ ರಸ್ತೆಯಲ್ಲಿನ ಕಾಳಾವರ ವರದರಾಜ ಎಂ. ಶೆಟ್ಟಿ ರ‍್ಕಾರಿ ಪ್ರಥಮ ರ‍್ಜೆ ಕಾಲೇಜು ವಠಾರದಲ್ಲಿ ನಡೆಯಲಿದೆ.

ಇದರ0ಗವಾಗಿ ಈಗಾಗಲೇ ರಾಜ್ಯದಾದ್ಯಂತ ವಿವಿಧೆಡೆಗಳಲ್ಲಿ ಗಾಯತ್ರೀ ಜಪಾನುಷ್ಠಾನ ನಡೆಸಲಾಗಿದೆ. ಡಿಸೆ0ಬರ್ 28ರಂದು ಮುಂಜಾನೆ 6ಕ್ಕೆ ಕಾಲೇಜು ವಠಾರದ ವರೇಣ್ಯ ಗಾಯತ್ರೀ ಯಾಗಶಾಲೆಯಲ್ಲಿ ಶ್ರೀ ಗಾಯತ್ರೀ ಮಹಾ ಯಜ್ಞದೊಂದಿಗೆ ಮಹಾ ಸಮ್ಮೇಳನದ ಅಧಿಕೃತ ಕರ‍್ಯಗಳಿಗೆ ಚಾಲನೆ ನೀಡಲಾಗುವುದು. ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶಂಕರಾಚರ‍್ಯ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ಹಾಗೂ ಶ್ರೀ ಶಾರದಾ ಪೀಠದ ಆಡಳಿತಾಧಿಕಾರಿ ಪದ್ಮಶ್ರೀ ಡಾ. ವಿ. ಆರ್. ಗೌರೀಶಂಕರ್ ರವರ ಸಮಕ್ಷಮದಲ್ಲಿ ಯಜ್ಞ ಪರ‍್ಣಾಹುತಿ ನಡೆಯಲಿದೆ. ನಂತರ ಪ್ರಧಾನ ವೇದಿಕೆಯಲ್ಲಿ ಮಹಾ ಸಮ್ಮೇಳನದ ಉದ್ಘಾಟನಾ ಸಮಾರಂಭ ಜರುಗಲಿದೆ.