ಕುಂದಾಪುರ. ಜುಲೈ 31: ಸಾರ್ವಜನಿಕ ಶಿಕ್ಷಣ ಇಲಾಖೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ಹಾಗೂ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಕುಂದಾಪುರ ಇವರ ಆಶ್ರಯದಲ್ಲಿ ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ ಬಾಲಕಿಯರ ಚೆಸ್ ಪಂದ್ಯಾಟವು ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕರಾದ ಅತಿ. ವಂದನಿಯ ಪೌಲ್ ರೇಗೊ ಅವರು ಚೆಸ್ ಒಂದು ಮೆದುಳಿನ ಕೌಶಲ್ಯದ ಆಟ. ಆಟದಲ್ಲಿ ಸೋಲು ಎನ್ನುವುದು ಸೋಲಲ್ಲ ಅದು ಗೆಲುವಿನ ಮೆಟ್ಟಿಲು ಎಂದು ಪಂದ್ಯಾಟಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ವಲಯದ ಅಧ್ಯಕ್ಷರಾದ ಶ್ರೀಮತಿ ಜುಡಿತ್ ಮೆಂಡೋನ್ಸಾ ರವರು ಜೀವನದಲ್ಲಿ ಯಾವುದೇ ವಸ್ತುವನ್ನು ಪಡೆಯುವುದರಲ್ಲಿ ಸಂತೋಷ ಪಡದೆ ಅದನ್ನು ಕೊಡುವುದರಲ್ಲಿ ಸಂತೋಷಪಡಬೇಕು ಎಂದು ಕ್ರಿಡಾಳುಗಳಿಗೆ ತಿಳಿಸಿದರು.
ಪಂದ್ಯಾಟದ ಉದ್ಘಾಟನೆಯನ್ನು ಕುಂದಾಪುರ ಪುರಸಭಾ ಸದಸ್ಯರಾದ ಶ್ರೀ. ಪ್ರಭಾಕರ ಅವರು ನೆರವೇರಿಸಿ ಶುಭ ಕೋರಿದರು. ಕಾರ್ಯಕ್ರಮದಲ್ಲಿ ದೈಹಿಕ ಪರಿವೀಕ್ಷನಾಧಿಕಾರಿ ಶ್ರೀ.ಸತ್ಯನಾರಾಯಣ. ಜಿ , ಯುವಜನ ಸೇವಾ ಕ್ರೀಡಾಧಿಕಾರಿ ಶ್ರೀ. ಕುಸುಮಾಕರ್ ಶೆಟ್ಟಿ, ಕುಂದಾಪುರ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀ. ಸಂತೋಷ್ ಕುಮಾರ್ ಶೆಟ್ಟಿ, ತಾಲೂಕು ದೈ. ಶಿ.ಶಿ.ಸಂಘದ ಕೋಶಾಧಿಕಾರಿ ಶ್ರೀ. ಸಂಜೀವ ಮೊಗವೀರ, ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ. ಬಾಬು ಪೂಜಾರಿ, ಸೌಂದರ್ಯ ಯು. ಕೆ. ಉಪಸ್ಥಿತರಿದ್ದರು. ಮು. ಶಿ. ಶಾಂತಿ ರಾಣಿ ಸ್ವಾಗತಿಸಿ, ಅನ್ನಿ ಕ್ರಾಸ್ತಾ ವಂದಿಸಿದರು. ಶಿಕ್ಷಕಿ ಶ್ರೀಮತಿ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕಿಯರಾದ ಗೀತಾ ನೊರೊನ್ನ್, ಜೋತಿ ಡಿಸಿಲ್ವ, ಪ್ರೀತಿ, ಆಶಾ, ಸುರೇಖಾ ಸಹಕರಿಸಿದರು.