ಆರ್‍ಎಸ್‍ಎಸ್‍ಕಚೇರಿ ಮೇಲೆ ತ್ರಿವರ್ಣಧ್ವಜ ಹಾರಿಸಿ: ಜಮೀರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ: ಸಂಸದ ಮುನಿಸ್ವಾಮಿಅವರಿಗೆ ನಿಜವಾದದೇಶಭಕ್ತಿಯಿದ್ದರೆಆರ್‍ಎಸ್‍ಎಸ್‍ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಲಿ ಎಂದುಅಂಜುಮಾನ್‍ಇಸ್ಲಾಮಿಯಾಅಧ್ಯಕ್ಷಜಮೀರ್‍ಅಹಮದ್ ಸವಾಲು ಹಾಕಿದರು.
ನಗರದಕ್ಲಾಕ್‍ಟವರ್‍ನಲ್ಲಿ ಜಿಲ್ಲಾಡಳಿತದ ಸಹಕಾರದೊಂದಿಗೆರಾಷ್ಟ್ರಧ್ವಜ ಹಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಅಭಿವೃದ್ಧಿಯ ಬಗ್ಗೆ ಕಿಂಚಿತ್ತು ಮಾತನಾಡದ ಸಂಸದ ಮುನಿಸ್ವಾಮಿ ಸದಾ ಹಿಂದು-ಮುಸ್ಲಿಂ ಬಂಧುಗಳ ಮಧ್ಯೆ ಜಗಳ ತಂದಿಡುವ ಹೇಳಿಕೆಗಳನ್ನು ನೀಡುತ್ತಿರುತ್ತಾರೆ.ಯಾರಿಗೂ ಭಯಪಟ್ಟು ನಾವು ಧ್ವಜ ಹಾರಿಸಿಲ್ಲ. ನಮ್ಮರಾಷ್ಟ್ರಭಕ್ತಿಯನ್ನು ನಾವು ಸಾಬೀತು ಪಡಿಸಿದ್ದೇವೆ. ದೇಶಪ್ರೇಮದ ಬಗ್ಗೆ ನಮಗೆ ಇವರು ಪಾಠ ಮಾಡಬೇಕಿಲ್ಲಎಂದುಕಿಡಿಕಾರಿದರು.
ನಾವು ಕ್ಲಾಕ್‍ಟವರ್ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದೇವೆ. ಅದೇರೀತಿ ಸಂಸದರುಆರ್‍ಎಸ್‍ಎಸ್ ಕಚೇರಿಗಳ ಮೇಲೆ ರಾಷ್ಟ್ರಧ್ವಜ ಹಾರಿಸುವಮೂಲಕ ದೇಶಪ್ರೇಮ ಸಾಬೀತು ಮಾಡಿಕೊಳ್ಳಲಿ.ಹಿಂದೂ-ಮುಸ್ಲಿಂ ನಡುವೆ ಪ್ರಚೋದನಾಕಾರಿ ಹೇಳಿಕೆಗಳನ್ನು ನಿಲ್ಲಿಸಲಿ ಎಂದು ಆಗ್ರಹಿಸಿದರು.
ಆಗಸ್ಟ್ 15 ರಂದು ನಾವೆಲ್ಲರೂಆಚರಿಸುವ ಸ್ವಾತಂತ್ರ್ಯ ದಿನಾಚರಣೆಯನ್ನುಆಗಸ್ಟ್ 14 ರಂದುಎಂದು ಹೇಳುವ ಸಂಸದರ ಬುದ್ಧಿ ನಮಗೆ ಅರ್ಥವಾಗಿದೆ.ಇಂತಹರಾಜಕೀಯ ಬದಿಗೊತ್ತಿಅಭಿವೃದ್ಧಿಕಡೆಗೆ ಗಮನ ಕೊಡಲಿ ಎಂದು ಸಲಹೆ ನೀಡಿದರು.
ಕ್ಲಾಕ್‍ಟವರ್ ನಿಮ್ಮಪ್ಪದಾ.ನಿಮ್ಮಪ್ಪದಾ ಅಂತಯಾವಾಗಲೂ ಸಂಸದರು ಹೇಳುತ್ತಾರೆ.ಆದರೀಗ ಹೇಳುತ್ತೇನೆ. ಈ ಕ್ಲಾಕ್‍ಟವರ್ ನಮ್ಮಪ್ಪದೇ…ಇನ್ನು ಮುಂದೆ ಈ ರೀತಿ ಹೇಳಿಕೆಗಳನ್ನು ನೀಡಬೇಡಿಎಂದು ಎಚ್ಚರಿಸಿದ ಜಮೀರ್ 1938 ರಲ್ಲಿ ನಮ್ಮತಾತ ಹಾಜಿ ಮಹಮದ್ ಮುಸ್ತಾಫ ಸಾಹೇಬ್‍ಕ್ಲಾಕ್‍ಟವರ್ ನಿರ್ಮಾಣ ಮಾಡಿದ್ದು, ಮೈಸೂರು ಮಹಾರಾಜ ನರಸಿಂಹರಾಜ ಒಡೆಯರ್‍ಅವರುಕ್ಲಾಕ್‍ಟವರ್, ಎಸ್ಸೆನ್ನಾರ್‍ಆಸ್ಪತ್ರೆ, ಬಸ್‍ನಿಲ್ದಾಣಗಳ ಉದ್ಘಾಟನೆ ಮಾಡಿದ್ದರು. ಚರಿತ್ರೆಗೊತ್ತಿಲ್ಲದ ಮುನಿಸ್ವಾಮಿ ಕೇವಲ ಓಟಿಗೋಸ್ಕರಅಣ್ಣ-ತಮ್ಮಂದಿರ ಮಧ್ಯೆ ವಿಷಬೀಜ ಬಿತ್ತುತ್ತಿದ್ದಾರೆಎಂದುದೂರಿದರು.
ಭಗವಂತ ಬಾಯಿ ಕೊಟ್ಟಿದ್ದಾನೆಎಂದು ಸುಮ್ಮ ಸುಮ್ಮನೆ ಏನೇನೋ ಹೇಳಬೇಡಿ, ಮುಸ್ಲಿಂರ ದೇಶಭಕ್ತಿಯನ್ನು ಪ್ರಶ್ನೆ ಮಾಡುವಗೋಜಿಗೆ ಹೋಗಬೇಡಿ, ರಾಷ್ಟ್ರಧ್ವಜವನ್ನು ವಿನ್ಯಾಸ ಮಾಡಿದ್ದು ಸೂರಾಯ್ಯತಯ್ಯಬ್‍ಎಂಬುದು ನೆನಪಿರಲಿ.ದೇಶಕ್ಕಾಗಿ ಬಹಳಷ್ಟು ತ್ಯಾಗ ಬಲಿದಾನಗಳನ್ನು ಈ ಸಮುದಾಯ ಮಾಡಿದೆ.ಮುಸ್ಲಿಂ ದೊರೆಗಳ ಆಡಳಿತಾವಧಿಯಲ್ಲಿ ಮಸೀದಿಗಳ ಜೊತೆ ಹಿಂದೂ ದೇವಾಲಯಗಳ ನಿರ್ಮಾಣ ಮಾಡಿದ್ದೇವೆ ಹಾಗೂ ಈಗಲೂ ನಮ್ಮಕರ್ನಾಟಕದ ಕೆಲ ದೇವಾಲಯಗಳಲ್ಲಿ ಸುಲ್ತಾನ್‍ಆರತಿ ಪೂಜಾಕಾರ್ಯಕ್ರಮ ನಡೆಯುತ್ತದೆಎಂಬುದರ ಬಗ್ಗೆ ತಿಳಿದುಕೊಳ್ಳಿ ಎಂದರು.
ಪದೇ ಪದೇ ಪಂಕ್ಚರ್‍ಅಂಗಡಿ, ಚಿಕನ್ ಶಾಪ್, ತಂದೆತಾಯಿಯರನ್ನು ಸಾಕುವುದಿಲ್ಲ ಎಂಬ ಮಾತುಗಳನ್ನಾಡಬೇಡಿ, ಈ ಕೆಲಸಗಳನ್ನು ಮಾಡಿಕೊಂಡೆ ನನ್ನ ಸಮುದಾಯದವರು ನಾಲ್ಕು ಕುಟುಂಬಗಳ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.ಶೈಕ್ಷಣಿಕವಾಗಿ ಸಹ ಸಮುದಾಯದವರು ಮುಂದಿದ್ದು ಪಂಕ್ಚರ್‍ಅಂಗಡಿಯವರು ಸಹ ಓದಿಕೊಂಡೇ ಈ ಕೆಲಸ ಮಾಡುತ್ತಿರುತ್ತಾರೆ.ನಮ್ಮನ್ನು ಶೈಕ್ಷಣಿಕವಾಗಿ ತುಳಿಯಲು ಬೇಕಾದಷ್ಟು ಪಾಲಿಸಿಗಳನ್ನು ಮಾಡುತ್ತಿದ್ದಾರೆ, ಇದೆಲ್ಲಾ ಬೇಡಎಂದರು.
ಇದಕ್ಕೂ ಮುಂಚೆ ನೀವು ಪಂಕ್ಚರ್ ಹಾಕಿಸಿಕೊಳ್ಳಲು ಬಂದಿಲ್ಲವೇಎಂದು ಪ್ರಶ್ನಿಸಿದ ಜಮೀರ್ ಮುಂದಿನ ದಿನಗಳಲ್ಲೂ ಬನ್ನಿ ಪಂಕ್ಚರ್ ಹಾಕುತ್ತೇವೆಎಂದು ವ್ಯಂಗ್ಯವಾಡಿದರು.
ಇತಿಹಾಸತಿರುಚಿ ಹೇಳುವುದನ್ನು ಬಿಟ್ಟುಅಭಿವೃದ್ಧಿಯಕಡೆಗೆಒತ್ತು ನೀಡಿಎಂದು ಸಲಹೆ ಮಾಡಿದರಲ್ಲದೆ, ನಿನ್ನಪ್ಪದಾ..ನನ್ನಪ್ಪದಾಎಂದೆಲ್ಲಾಇನ್ನು ಮುಂದೆ ಮಾತನಾಡಬೇಡಿ…ಇದೇನು ಆಸ್ತಿನಾ ನಾವು ಬರೆದುಕೊಳ್ಳೋಕೆ ಎಂದು ಪ್ರಶ್ನಿಸಿದರು.