ಯುವಕ ಸಮಾಜ, ಕುಂದಾಪುರ ಇದರ ವತಿಯಿಂದ ಕುಂದಾಪುರ ತಾಲೂಕಿನೊಳಗಿನ ಕಾಲೇಜುಗಳಲ್ಲಿ, ಪದವಿ ಪೂರ್ವ, ಪದವಿ ಹಾಗೂ ತಾಂತ್ರಿಕ ಶಿಕ್ಷಣ ತರಗತಿಗಳಲ್ಲಿ ಕಲಿಯುತ್ತಿರುವ ಜಿ.ಎಸ್.ಬಿ. ಸಮಾಜದ ಬಡ ಹಾಗೂ ಅರ್ಹ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಫಾರ್ಮ್ನ್ನು ಈ ಕೆಳಗಿನ ವಿಳಾಸದಲ್ಲಿ ಪಡೆಯಬಹುದು ಅಥವಾ ಸ್ವಂತ ವಿಳಾಸ ಬರೆದ ಹಾಗೂ ಸಾಕಷ್ಟು ಅಂಚೆ ಚೀಟಿ ಹಚ್ಚಿದ ಲಕೋಟೆಯನ್ನು ಲಗತ್ತಿಸಿ ಅರ್ಜಿ ಫಾರ್ಮ್ಗಳಿಗಾಗಿ ಬರೆದುಕೊಳ್ಳಬೇಕಾಗಿ ಪ್ರಕಟಿಸಲಾಗಿದೆ.
ಭರ್ತಿ ಮಾಡಿದ ಅರ್ಜಿ ತಲುಪಲು ಕೊನೆಯ ದಿನಾಂಕ 31-08-2024 ಆಗಿರುತ್ತದೆ.
ವಿಳಾಸ : ಕೆ. ದಿವಾಕರ ಭಟ್, ಮಥುರಾ ಇಲೆಕ್ಟ್ರಾನಿಕ್ಸ್, ರಥಬೀದಿ, ಕುಂದಾಪುರ-576201.