ವರದಿ : ಮಝರ್, ಕುಂದಾಪುರ

ಶ್ರೀ ಮದ್ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವ ಕುಂದಾಪುರದ ವೆಂಕಟರಮ ಣ ಆಂಗ್ಲ ಮಾಧ್ಯಮ ಶಾಲೆಯ 7ನೆ ತರಗತಿ ವಿದ್ಯಾರ್ಥಿನಿ ಯುಕ್ತ ಹೊಳ್ಳ ಅವರನ್ನು ಶ್ರೀ ನಾರಾಯಣಾನಂದ ಸರಸ್ವತಿ ಸ್ವಾಮಿ ಟ್ರಸ್ಟ್, ಅಶ್ವತ್ಥಪುರ ಇವರ ವತಿಯಿಂದ ತಾ||20/2/2021 ರಂದು ಸಾವಿತ್ರಿ ಸಭಾ ಸದನ ಇಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕರಾದಶ್ರೀ ಹರಿನಾರಾಯಣ ಅಸ್ರಣ್ಣ ಅವರು ಸನ್ಮಾನಿಸಿದರು.