ಕುಂದಾಪುರ: ಆಗಸ್ಟ್ 22ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಜೆಸಿಐ ಕುಂದಾಪುರ ಇವರ ಸಹಯೋಗದಲ್ಲಿ “ಯುವ ಧ್ವನಿ” ಎಂಬ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜೆಸಿಐ ಇದರ ರಾಷ್ಟ್ರೀಯ ಅಧ್ಯಕ್ಷ ಜೆಎಫ್ಎಸ್ ಅಡ್ವೋಕೇಟ್ ರಿಕೇಶ್ ಶರ್ಮಾ ಮಾತನಾಡಿ ಯುವಜನತೆ ಕನಸುಗಳನ್ನು ಕಾಣಬೇಕು. ಕುಂಡೆ ಕನಸುಗಳನ್ನು ನನಸಾಗಿಸುವಲ್ಲಿ
ಪ್ರಯತ್ನವಿರಬೇಕು. ಹಾಗಿದ್ದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.
ನಂತರ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಅವರು ಸಮರ್ಪಕವಾಗಿ ಉತ್ತರಿಸಿದರು.
ವಿದ್ಯಾರ್ಥಿಗಳಾದ ಆಫ್ರಿಕಾ ಸರ್ಕಾರಿ ಶಾಲಾಕಾಲೇಜುಗಳಲ್ಲಿನ ಸಮಸ್ಯೆಗಳು ಸೌಲಭ್ಯಗಳು ಕುರಿತು, ಮನಸ್ವೀಯಶರು ಪದವಿ ನಂತರದ ಉದ್ಯೋಗಾವಕಾಶಗಳ ಕುರಿತು, ರೋಹಿತ್ ಅವರು ನಗರದಲ್ಲಿನ ಕ್ರೀಡಾ ಸೌಲಭ್ಯಗಳನ್ನು ಮತ್ತು ಗ್ರಾಮೀಣ ಪ್ರದೇಶದಲ್ಲಿ ತರಬೇತಿಯ ಕೊರತೆ ಯಾಕೆ ಎಂಬುದನ್ನು, ರಂಜಿತ್ ಅವರು ಕಂಪೆನಿಗಳಲ್ಲಿ ಇಂಟರ್ನಶಿಪ್ ಮಾಡುವುದಕ್ಕೆ ಇರುವಂತಹ ಅವಕಾಶಗಳನ್ನು ಕುರಿತು ಪ್ರಶ್ನೆಗಳನ್ನು ಕೇಳಿದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಜೆಸಿಐ ಇದರ ರಾಷ್ಟ್ರೀಯ ಉಪಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ, ವಲಯ ಅಧ್ಯಕ್ಷ ಗಿರೀಶ್ ಎಸ್.ಪಿ., ವಲಯ ಉಪಾಧ್ಯಕ್ಷ ವಿಘ್ನೇಶ್ ಪ್ರಸಾದ್ ರಾವ್, ವಲಯ ನಿರ್ದೇಶಕ ಅಭಿಲಾಷ್ ಬಿ.ಎ., ಜೆಸಿ ಸತೀಶ್ ಪೂಜಾರಿ, ಜೆಸಿಐ ಕುಂದಾಪುರ ಸಿಟಿ ಇದರ ಅಧ್ಯಕ್ಷ ರಾಘವೇಂದ್ರ ಕುಲಾಲ್, ಜೆಸಿ ಡಾ.ಸೋನಿ ಡಿಕೋಸ್ತಾ, ಜೆಸಿ ರೇಷ್ಮಾ ಕೋಟ್ಯಾನ್, ಜೆಸಿ ಕಿರಣ್ ಪೂಜಾರಿ, ಜೆಸಿ ಹುಸೇನ್ ಹೈಕಾಡಿ, ಜೆಸಿ ವಿಜಯ್ ಭಂಡಾರಿ, ಜೆಸಿ ತರಬೇತುದಾರ ಕೆ.ಕೆ.ಶಿವರಾಮ್,