

ಕುಂದಾಪುರದ ಶಾಸ್ತ್ರಿ ಸರ್ಕಲ್ ನಲ್ಲಿ ಯುವ ಕಾಂಗ್ರೆಸ್ಸ್ ವತಿಯಿಂದ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಇಶ್ಚಿತಾರ್ಥ ಶೆಟ್ಟಿ ಅವರ ನೇತೃತ್ವದಲ್ಲಿ, ಕೇಂದ್ರ ಸರಕಾರದ ಜನ ವಿರೋಧಿ ಆಡಳಿತ ಮತ್ತು ಬೆಲೆ ಏರಿಕೆಯ ವಿರುದ್ಧ ಎ. 9 ರಂದು ಪ್ರತಿಭಟನೆ ನಡೆಯಿತು.
ಕಳೆದ ಹತ್ತು ವರುಷಗಳಿಂದ ಕಚ್ಚಾ ತೈಲಗಳ ಬೆಲೆ ಇಳಿಕೆಯಾದರೂ, ಪೆಟ್ರೋಲ್ ಮತ್ತು ಡೀಸೆಲ್ ದರ ನಿಯಂತ್ರಿಸದ ಕೇಂದ್ರ ಸರಕಾರ ಮತ್ತೊಮ್ಮೆ ಗ್ಯಾಸ್ ದರವನ್ನು ರೂಪಾಯಿ 50ಕ್ಕೆ ಏರಿಸಿ ದೇಶದ ಭವಿಷ್ಯವನ್ನು ಆತಂಕಕ್ಕೆ ತಂದಿರಿಸಿದೆ. ರಾಜ್ಯ ಬಿಜೆಪಿ ಆಯೋಜಿಸಲಿರುವ ” ಜನಾಕ್ರೋಶ “ಯಾತ್ರೆಯಲ್ಲಿ ಅವರು ಜನರ ಕ್ಷಮೆಯನ್ನು ಯಾಚಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ನುಡಿದರು .
ದೇಶಕ್ಕೆ ಮಾದರಿಯಾದ , ಐದು ಗ್ಯಾರಂಟಿಗಳ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ , ರೈತರಿಗೆ ನೆರವಾಗುವ ಉದ್ದೇಶದಿಂದ ಹಾಲಿನ ದರ ಏರಿಸಿದರೆ ಇದರ ವಿರುದ್ಧ ಪ್ರತಿಭಟಿಸುವ ಬಿಜೆಪಿ ಪಕ್ಷ ತನ್ನ ರೈತ ವಿರೋಧ ನೀತಿ ಮತ್ತೊಮ್ಮೆ ಪ್ರದರ್ಶಿಸುತ್ತಿದೆ ಎಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ವಿನೋದ್ ಕ್ರಾಸ್ಟೋ ನುಡಿದರು.
ದೇಶದ ಜಿಡಿಪಿಗೆ ಮತ್ತು ಜಿಎಸ್ಟಿಗೆ ಅಧಿಕ ಪಾಲನ್ನು ನೀಡುವ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರಕಾರ ರಾಜ್ಯಕ್ಕೆ ಅನುದಾನ ನೀಡುವಲ್ಲಿ ಅನ್ಯಾಯ ಮಾಡಿದೆ ಎಂದು ಕೆಡಿಪಿ ಸದಸ್ಯರಾದ ರಮೇಶ್ ಶೆಟ್ಟಿ ಹೇಳಿದರು.
ದೇಶದಲ್ಲಿ ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರಕಾರ ಪ್ರಯತ್ನಿಸದಿದ್ದರೆ , ಯುವ ಕಾಂಗ್ರೆಸ್ ವಿರಮಿಸುವುದಿಲ್ಲ ಎಂದು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಇಚ್ಚಿತಾರ್ಥ ಶೆಟ್ಟಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕಿರಣ್ ಹೆಗ್ಡೆ ಜಿಲ್ಲಾ ಇಂಟೆಕ್ ಅಧ್ಯಕ್ಷರು, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಅಭಿಜಿತ್ ಪೂಜಾರಿ ಹೇರಿಕುದ್ರು , ಚಂದ್ರ ಅಮೀನ್ ಬ್ಲಾಕ್ ಇಂಟೆಕ್ ಅಧ್ಯಕ್ಷರು,ವಿಶ್ವಾಸ್ ಶೆಟ್ಟಿ ಜಿಲ್ಲಾಧ್ಯಕ್ಷರು ಅಸಂಘಟಿತ ಕಾರ್ಮಿಕ ವಲಯ ,ಮುನಾಫ್ ಕೋಡಿ, ಬ್ಲಾಕ್ ಅಲ್ಪಸಂಖ್ಯಾತ ಅಧ್ಯಕ್ಷರು, ಸುಜನ್ ಶೆಟ್ಟಿ ಅಧ್ಯಕ್ಷರು NSUI ಕುಂದಾಪುರ ಬ್ಲಾಕ್, ಜಾನಕಿ ಬಿಲ್ಲವ ಕೋಟೇಶ್ವರ ಅಕ್ರಮ ಸಕ್ರಮ ಸಮಿತಿ ಸದಸ್ಯರು ನಾರಾಯಣ ಆಚಾರ್ಯ ಕೋಣಿ, ಆಶಾ ಕರ್ವೆಲ್ಲೋ, ಅರುಣ್ ಪಟೇಲ್, ವೇಲಾ ಬ್ರಗಾಂಜಾ, ಸಲಾಂ ತೆಕ್ಕಟ್ಟೆ, ಜಯಕರ ಕಾಳವರ, ಜೊಸೆಫ್ ಆನಗಳ್ಳಿ, ಸತೀಶ್ ನಾಯ್ಕ್ ಆನಗಳ್ಳಿ, ಜಾಕ್ಸನ್ ಡಿಸೋಜಾ ಆನಗಳ್ಳಿ, ಸವಿತಾ ಅಧ್ಯಕ್ಷರು ಗ್ರಾಮ ಪಂಚಾಯತ್ ಆನಗಳ್ಳಿ, ಗಣಪತಿ ಶೇಟ್ ಅಧ್ಯಕ್ಷರು ಕೋಣಿ ಗ್ರಾಮ ಪಂಚಾಯತ್, ಪಂಚಾಯತ್ ಸದಸ್ಯರಾದ ಗೀತಾ ಎಸ್, ರೋಶನ್ ಬರೆಟ್ಟೋ ಉಪಸ್ಥಿತರಿದ್ದರು. ಜೊಯ್ಸ್ಟನ್ ಡಿಸೋಜಾ ಆನಗಳ್ಳಿ ಕಾರ್ಯಕ್ರಮ ನಿರೂಪಿಸಿದರು.


