ಗುಲ್ಬರ್ಗ : ಗುಲ್ಬರ್ಗ ಧರ್ಮ ಕ್ಷೇತ್ರದ ಬಸವಕಲ್ಯಾಣ ವಲಯದ ಮುಚ್ಚಳಂಬ ಧರ್ಮ ಕೇಂದ್ರದಲ್ಲಿ 25/8/2024 ರಂದು ವಲಯದ ಎಲ್ಲ ಯುವ ಜನರಿಗೆ ಯುವ ಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸುಮಾರು 50 ಯುವ ಜನರು ಭಾಗವಹಿಸಿದ್ದರು, ಏಕತೆ ಮತ್ತು ವೈವಿಧ್ಯತೆಯಲ್ಲಿ ನಮ್ಮ ಸಮಾನತೆಯನ್ನು ಕಾಣುವುದು ಎಂಬ ಧ್ಯೇಯ ವಾಕ್ಯದಡಿಯಲ್ಲಿ ಈ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಪ್ರಾರ್ಥನೆಯ ಮೂಲಕ ಪ್ರಾರಂಭಿಸಿ ಮುಚ್ಚಳಾಂಬ ಕೇಂದ್ರದವರು ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಅಧ್ಯಕ್ಷ ಸ್ಥಾನವನ್ನು ವಹಿಸಿದಂತ ಫಾದರ್ ಸ್ಟಾನಿ ಮುಚ್ಚಳಂಬ ಧರ್ಮ ಕೇಂದ್ರದ ಗುರುಗಳು ಎಲ್ಲಾ ಯುವಜನರನ್ನು ಕುರಿತು ಹೀಗೆಂದರು ಯುವಜನರು ಸಮಾಜದ ಹಾಗೂ ಧರ್ಮ ಸಭೆಯ ಸ್ತಂಭಗಳಾಗಿದ್ದಾರೆ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಮನ ಮುಟ್ಟುವ ಹಾಗೆ ತಮ್ಮ ಹಿತನುಡಿಯನ್ನು ಯುವಜನರನ್ನು ಕುರಿತು ನೀಡಿದರು. ಗುಲ್ಬರ್ಗ ಧರ್ಮ ಕ್ಷೇತ್ರದ ಯುವ ನಿರ್ದೇಶಕರಾದ ಫಾದರ್ ಸಚಿನ್ ರವರು ಎಲ್ಲ ಯುವಜನರನ್ನು ಕುರಿತು ಏಕತೆ ಮತ್ತು ವೈವಿಧ್ಯತೆಯಲ್ಲಿ ನಮ್ಮ ಪಾತ್ರವನ್ನ ತಿಳಿಸಿದರು ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣುವಂತಹ ಜವಾಬ್ದಾರಿಯನ್ನು ನಾವೆಲ್ಲರೂ ಹೊಂದಿದ್ದೇವೆ ಯುವಜನರಾಗಿ ನಾವು ಸಮಾಜವನ್ನು ಕಟ್ಟದಿದ್ದರೆ ಸಮಾಜದ ದುರ್ಗತಿಯನ್ನು ನಮ್ಮ ಕಣ್ಣಮುಂದೆಯೇ ಕಾಣಬೇಕಾಗುತ್ತದೆ ಎಂದು ಯುವ ಜನರಿಗೆ ಮನಮುಟ್ಟುವಾಹಾಗೆ ಹೇಳಿದರು. ತದನಂತರ ಯುವ ಜನರಿಗೆ ಯುವ ಸಚೇತಕರು ಅನೇಕ ಚಟುವಟಿಕೆಯನ್ನು ಆಯೋಜಿಸಿದರು ಎಲ್ಲ ಯುವಜನರು ಈ ಚಟುವಟಿಕೆಯಲ್ಲಿ ಭಾಗವಹಿಸಿದ್ದರು. ಈ ಒಂದು ಕಾರ್ಯಕ್ರಮವನ್ನು ದಿವ್ಯ ಬಲಿ ಪೂಜೆಯ ಮೂಲಕ ಕೊನೆಗೊಳಿಸಲಾಯಿತು. ಇದರಲ್ಲಿ ಭಾಗವಹಿಸಿದವರು ಫಾದರ್ಸ್ ಸ್ಟ್ಯಾನಿ, ಫಾದರ್ ಆರೋಗ್ಯ, ಫಾದರ್ ಜಾರ್ಜ್, ಫಾದರ್ ಸಚಿನ್ ಕ್ರಿಸ್ಟಿ, ಸಿಸ್ಟರ್ ಕ್ರಿಸ್ಟಿನ, ಸಿಸ್ಟರ್ ಜೋಸ್ಫಿನ್, ಸಿಸ್ಟರ್ ಅಣ್ಣಮರಿಯ.
ಫಾದರ್ ಸಚಿನ್ ಕ್ರಿಸ್ಟಿ, ಯುವ ನಿರ್ದೇಶಕರು, ಗುಲ್ಬರ್ಗ ಧರ್ಮ ಕ್ಷೇತ್ರ