ಶ್ರೀನಿವಾಸಪುರ : ಡೈರಿಗಳಿಗೆ ಉತ್ಪಾದಕರು ಗುಣಮಟ್ಟ ಹಾಲು ಹಾಕಿದಾಗಮಾತ್ರ ನಿಮ್ಮ ಹಾಲಿಗೆ ಪ್ರೋತ್ಸಾಹಧನ ಮತ್ತು ಬೋನಸ್ ಜೊತೆಗೆ ಒಕ್ಕೂಟದಿಂದ ಬರುವ ಎಲ್ಲಾ ಸೌಲಬ್ಯಗಳು ನಿಮ್ಮ ಸಂಘಗಳಿಗೆ ಶೀಘ್ರವಾಗಿ ದೊರೆಯುತ್ತವೆ, ಗುಣಮಟ್ಟ ಹಾಲು ಹಾಕಲು ಪ್ರತಿಯೊಬ್ಬ ಉತ್ಪಾದಕರು ದೃಢಮನಸ್ಸು ಮಾಡಬೇಕೆಂದು ಕೆ.ಎಂ.ಎಪ್ ಉಪ ವ್ಯವಸ್ಥಾಪಕ ಮುನಿರಾಜು ತಿಳಿಸಿದರು.
ತಾಲ್ಲೂಕಿನ ಆರಮಾಕಲಹಳ್ಳಿ ಚೌಡನಹಳ್ಳಿ, ಶೆಟ್ಟಿಹಳ್ಳಿ ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ೨೦೨೩-೨೪ ನೇ ಸಾಲಿನ ವಾರ್ಷಿಕ ಸಾಮಾನ್ಯಸಭೆಗಳಲ್ಲಿ ಬಾಗವಹಿಸಿ ಮಾತನಾಡಿದ ಮುನಿರಾಜು ಆರಮಾಕಲಹಳ್ಳಿಯಲ್ಲಿ ಗ್ರಾಮದಲ್ಲಿ ಹಾಲಿನ ಗುಣಮಟ್ಟ ಚೆನ್ನಾಗಿದೆ ಪಣಸ ಚೌಡನಹಳ್ಳಿ ಗ್ರಾಮದ ಹಾಲುಉತ್ಪಾದಕರು ಮತ್ತಷ್ಟು ಗುಣಮಟ್ಟ ಹಾಲು ಡೈರಿಗೆ ಹಾಕಲು ಶ್ರಮಿಸಬೇಕು,
ಶೆಟ್ಟಿಹಳ್ಳಿ ಸಂಘ ಗುಣಮಟ್ಟಕ್ಕೆ ಒತ್ತು ನೀಡಬೇಕು, ಗುಣಮಟ್ಟದಲ್ಲಿ ನಾವು ರಾಜಿ ಆಗುವುದಿಲ್ಲಾ ನಮ್ಮ ಒಕ್ಕೂಟದಿಂದ ಬರುವ ಸೌಲಬ್ಯಗಳು ನಿಮಗೆ ತಲುಪಿಸಲು ಸಿದ್ದರಾಗಿದ್ದೇವೆ, ಮ್ಯಾಟುಗಳು ಇತರೆ ಸಾಮಗ್ರಿಗಳು ಒಕ್ಕೂಟದ ಮಹಾಮಂಡಳಿ ಚುನಾವಣೆ ನಂತರ ಎಲ್ಲವೂ ನಿಮ್ಮ ಸಂಘಗಳಿಗೆ ತಲುಪಿಸುತ್ತೇವೆ, ಸಮಯ ಹತ್ತಿರ ಬಂದಿದೆ ಎಂದರು.
ಇದೇ ವೇಳೆಯಲ್ಲಿ ಸಂಘಗಳ ವಾರ್ಷಿಕ ವರದಿಯನ್ನು ಮೇಲ್ವಿಚಾರಕ ನರಸಿಂಹರಾಜು ಮಂಡಿಸಿದರು, ಆರಮಾಕಲಹಳ್ಳಿ ಸಂಘದಲ್ಲಿ ಉತ್ಪಾದಕರಿಗೆ ಬೋನಸ್ ಆಗಿ ಪ್ಲಾಸ್ಕ್ ಗಳನ್ನು ವಿತರಿಸಲಾಗಿದೆ,
ಈ ವೇಳೆಯಲ್ಲಿ ಆರಮಾಕಲಹಳ್ಳಿ ಅದ್ಯಕ್ಷ ಎನ್. ಮಂಜುನಾಥ್ ರೆಡ್ಡಿ, ಉಪಾದ್ಯಕ್ಷ ಎಂ. ವೆಂಕಟೇಶಪ್ಪ, ಕಾರ್ಯದರ್ಶಿ ನಾನಪ್ಪ, ಪಣಸಚೌಡನಹಳ್ಳಿ ಅದ್ಯಕ್ಷಿಣಿ ಲಕ್ಷö್ಮಮ್ಮ, ಉಪಾದ್ಯಕ್ಷ ಸಿ.ವಿ ನಾರಾಯಣರೆಡ್ಡಿ, ಕಾರ್ಯದರ್ಶಿ ಎಂ. ವೆಂಕಟೇಶ್, ಶೆಟ್ಟಿಹಳ್ಳಿ ಅದ್ಯಕ್ಷ ಟಿ.ರಾಮಚಂದ್ರಪ್ಪ, ಉಪಾದ್ಯಕ್ಷ ವಿ.ನರಸಿಂಹಪ್ಪ, ಕಾರ್ಯದರ್ಶಿ ಎಸ್.ವೈ ಸೋಮನಾಥ್, ಮೇಲ್ವಿಚಾರಕ ವಿನಾಯಕ್, ಸಂಘಗಳ ಹಾಲು ಪರೀಕ್ಷಕರು, ಸಹಾಯಕರು, ಹಾಗು ಎಲ್ಲಾ ಹಾಲು ಉತ್ಪಾದಕರು ಬಾಗವಹಿಸಿದ್ದರು.