

ಮಣಿಪಾಲ ಮಾಹೆಯ ಲೈಫ್ ಸಾಯನ್ಸ್ ನಲ್ಲಿ ಒರಲ್ ಕ್ಯಾನ್ಸರ್ ಬಗ್ಗೆ ಪಿ ಎಚ್ ಡಿ ಮಾಡುತ್ತಿರುವ ಕುಂಭಾಸಿಯ ಯು.ಸಂಗೀತಾ ಶೆಣೈ ಯವರಿಗೆ ಗುಜರಾತಿನ ಅಹ್ಮದಾಬಾದ್ ನಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ “ಯಂಗ್ ಸಾಯನ್ಟಿಸ್ಟ್ ಅವಾರ್ಡ್” ಪ್ರದಾನ ಮಾಡಲಾಗಿದೆ.
ಇಂಡಿಯನ್ ಸೊಸೈಟಿ ಆಫ್ ಹ್ಯೂಮನ್ ಜೆನೆಟಿಕ್ಸ್ ಹಾಗೂ ಗುಜರಾತ್ ಬಯೊ ಟೆಕ್ನಾಲಜಿ ರಿಸರ್ಚ್ ಸೆಂಟರ್ ಏರ್ಪಡಿಸಿದ ವಾರ್ಷಿಕ ಸಮ್ಮೇಳನ ದಲ್ಲಿ ಯು.ಸಂಗೀತಾ ಶೆಣೈ ತಮ್ಮ ಸಂಶೋಧನಾ ವಿಚಾರಗಳನ್ನು ಪ್ರಾತ್ಯಕ್ಷಿಕೆ ಮೂಲಕ ಮಂಡಿಸಿದ್ದರು.
ಇವಳು ಹಿರಿಯ ಪತ್ರಕರ್ತ ಯು.ಎಸ್ ಶೆಣೈ ,ಶ್ರೀಮತಿ ಸಾಧನಾ ಶೆಣೈ ದಂಪತಿಯ ಪುತ್ರಿ ಯಾಗಿದ್ದು ಸಿಎಸ್ ಐ ಆರ್ ಪುರಸ್ಕ್ರತ ಸಂಶೋಧಕಿಯಾಗಿದ್ದಾರೆ.

