ಶ್ರೀನಿವಾಸಪುರ : ಯುವ ಸಮುದಾಯವು ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳತ್ತಾ , ಭಾರತೀಯ ಸಂಸ್ಕøತಿ, ಪರಂಪರೆಯನ್ನು ಅಧ್ಯಾಯನ ಮಾಡಲು ಆಸಕ್ತಿ ವಹಿಸಬೇಕು ಎಂದು ಚಿಕ್ಕಬಳ್ಳಾಪುರ ಶಾಖ ಮಠದ ಶ್ರೀ ಮಂಗಳಾನಂದನಾಥಸ್ವಾಮಿ ಹೇಳಿದರು.
ತಾಲೂಕಿನ ಬೈರವೇಶ್ವರ ವಿದ್ಯಾನಿಕೇತನದ ಆವರಣದಲ್ಲಿ ಗುರುವಾರ 10ಕೋಟಿ ವೆಚ್ಚದಲ್ಲಿ ಕಾಲೇಜುನ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಇಂದು ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳು ಎಲೆ ಮರಿಕಾಯಿಯಂತೆ ತಮ್ಮಲ್ಲಿನ ವಿದ್ಯೆಯನ್ನು , ಕೌಶಲ್ಯ ತೋರಿಸುತ್ತಾ, ತಮ್ಮಲ್ಲಿನ ವಿದ್ಯೆಯನ್ನು ಕೌಶಲ್ಯ ಪ್ರೋತ್ಸಾಹಿಸುವವರು ಇಲ್ಲದೆ ಅರ್ಧಕ್ಕೆ ನಿಲ್ಲಿಸುವಂತಾಗಿದೆ ಈ ನಿಟ್ಟಿನಲ್ಲಿ ಬಿಜಿಎಸ್ ಶೈಕ್ಷಣಿಕ ಆಡಳಿತ ಮಂಡಲಿಯು ಗ್ರಾಮೀಣ ಮಕ್ಕಳ ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹತ್ತುಹಲವಾರು ಕಾರ್ಯಕ್ರಮಗಳ ಸಹ ಹಮ್ಮಿಕೊಂಡಿದೆ ಎಂದರು.
ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಿ 10 ತಿಂಗಳ ಒಳಗೆ ಕಾಮಗಾರಿ ಮುಗಿಸಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಬೇಕು. ಬಿಜಿಎಸ್ ವತಿಯಿಂದ ಕಾಮಗಾರಿ ಹಮ್ಮಿಕೊಳ್ಳಲಾಗುತ್ತಿದೆ.ಎಂದು ಮಾಹಿತಿ ನೀಡಿದರು.
ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಈ ಭಾಗದಲ್ಲಿ ದೊಡ್ಡಮಟ್ಟದಲ್ಲಿ ಕಾಲೇಜುಗಳು ಇಲ್ಲ. ಬಿಜಿಎಸ್ ಶೈಕ್ಷಣಿಕ ಆಡಳಿತ ಮಂಡಲಿಯು ಕೋಟಿಗಟ್ಟಲೇ ಖರ್ಚು ಮಾಡುತ್ತಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಸದಾವಕಾಶ ಸದ್ಭಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಬಿಜಿಎಸ್ ಶೈಕ್ಷಣಿಕ ಆಡಳಿತ ಮಂಡಲಿಯು ಶೈಕ್ಷಣಿಕ ಅಭಿವೃದ್ಧಿಗಾಗಿ ಬೇಕಾದ ಸಲಹೆ , ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಚಿಕ್ಕಬಳ್ಳಾಪುರ ಶಾಖೆಯ ಬೈರವೇಶ್ವರ ವಿದ್ಯಾನಿಕೇತದ ಶೈಕ್ಷಣಿಕ ಆಡಳಿತ ಮಂಡಲಿಯ ಆಡಳಿತಾಧಿಕಾರಿ ಎನ್. ಶಿವರಾಘವರೆಡ್ಡಿ , ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ವೇಣುಗೋಪಾಲರೆಡ್ಡಿ, ಬೈರವೇಶ್ವರ ವಿದ್ಯಾನಿಕೇತನ ನಿರ್ದೇಶಕ ಎ.ವೆಂಕಟರೆಡ್ಡಿ, ಪ್ರಾಂಶುಪಾಲರಾದ ಗಂಗಾಧರ್, ವೆಂಕಟರಮಣಾರೆಡ್ಡಿ, ಕೃಷ್ಣಮೂರ್ತಿ, , ಡಿಸಿಸಿ ಬ್ಯಾಂಕ್ ನಿದೇರ್ಶಕ ವೆಂಕಟರೆಡ್ಡಿ, ಮುಖಂಡರಾದ ಲಕ್ಷ್ಮಣೆಡ್ಡಿ , ಶಿವಪುರ ಗಣೇಶ್ , ಸುಬ್ಬಿರೆಡ್ಡಿ, ಇತರರು ಇದ್ದರು.