ನಾಡು ನುಡಿಗಾಗಿ ದುಡಿದ ಮಹನೀಯರನ್ನ ಇಂದಿನ ಯುವಪೀಳಿಗೆ ಸ್ಮರಿಸಿಕೊಳ್ಳುವ ಕೆಲಸ ಮಾಡಬೇಕು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕನ್ನಡದ ಇತಿಹಾಸ, ಮಹತ್ವ ಹೋರಾಟಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶ ಹಾಗೂ ಕರ್ನಾಟಕದ ಏಕಿಕರಣಕ್ಕಾಗಿ ಹೋರಾಡಿದ ಮಹನೀಯರನ್ನ ಸ್ಮರಿಸುವ ಉದ್ದೇಶದಿಂದ ಕನ್ನಡರಾಜ್ಯೋತ್ಸವ ಅತ್ಯಂತ ಮಹತ್ವವನ್ನ ಪಡೆದುಕೊಂಡಿದೆ ಎಂದು ತಹಶೀಲ್ದಾರ್ ಎಸ್ ಎಂ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಬಾಲಕೀಯರ ಪದವಿಪೂರ್ವ ಕಾಲೇಜು ಆವರಣದಲ್ಲಿ 66ನೇ ಕನ್ನಡರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶ್ರೀನಿವಾಸ್ ನಮ್ಮ ನಾಡು ನುಡಿಗಾಗಿ ದುಡಿದ ಮಹನೀಯರನ್ನ ಇಂದಿನ ಯುವಪೀಳಿಗೆ ಸ್ಮರಿಸಿಕೊಳ್ಳುವ ಕೆಲಸ ಮಾಡಬೇಕು. ಕರ್ನಾಟಕದ ಹುಟ್ಟಿಗೆ ಕನ್ನಡದ ಕುಲಪುರೋಹಿತ ಎಂದೇ ಹೆಸರಾದ ಆಲೂರು ವೆಂಕಟರಾವ್ ಅವರು ಮೊದಲಿಗೆ ಕರ್ನಾಟಕ ಏಕಿಕರಣ ಚಳುವಳಿಯನ್ನ ಸ್ವತಂತ್ಯ್ರ ಪೂರ್ವವೇ 1905ರಲ್ಲಿ ಪ್ರಾರಂಭಿಸಿದರು. ಭಾರತಕ್ಕೆ ಸ್ವತಂತ್ಯ್ರ ದೊರೆತು ಗಣರಾಜ್ಯವಾದ ನಂತರ ಭಾಷೆಗಳ ಆಧಾರ ಮೇಲೆ 1956ರ ನವಂಬರ್ 1ರಂದು ರಾಜ್ಯಗಳನ್ನ ವಿಂಗಡಿಸಿದರು ಅದರಂತೆ ಮದರಾಸ್, ಮುಂಬೈ ಮತ್ತು ಹೈದರಾಬಾದ್ ಪ್ರಾಂತದ ಕನ್ನಡ ಮಾತನಾಡುವ ಪ್ರದೇಶಗಳೆಲ್ಲವೂ ವಿಲನಗೊಂಡು ಮೈಸೂರು ರಾಜ್ಯ ಉದಯವಾಯಿತು ನಂತರ ಮೈಸೂರು ರಾಜ್ಯವನ್ನ ಮೂರು ವಿಭಾಗಗಳಾಗಿ ವಿಂಗಡಿಸಲಾಯಿತು ಉತ್ತರ ಕರ್ನಾಟಕ ಹಳೆಯ ಮೈಸೂರು ಹಾಗೂ ಮಳೆನಾಡು ಆಗಿದೆ ಎಂದರು.
ಉತ್ತರ ಕರ್ನಾಟಕದ ಜನೆತೆಯ ಮಾನ್ಯತೆಗಾಗಿ ಮೈಸೂರು ಎಂಬ ಹೆಸರಿನ ಬದಲು ಕರ್ನಾಟಕ ಎಂದು ಮರು ನಾಮಕರಣ ಮಾಡಬೇಕೆಂದು 1972ರಲ್ಲಿ ಜುಲೈನಲ್ಲಿ ಈ ಬಗ್ಗೆ ಚರ್ಚೆ ಭುಗಳೆದ್ದಿತು ಸಾಕಷ್ಟು ದೀರ್ಘಾವಧಿಯ ಚರ್ಚೆಗಳ ನಂತರ ರಾಜ್ಯ ವಿಧಾನಸಭೆಯಲ್ಲಿ ಇದಕ್ಕೆ ಸರ್ವಾನುಮತದಿಂದ ಅನುಮತಿ ದೊರೆಯುತು ಎಂದರು.
ಕರ್ನಾಟಕ ನಾಡು ಏಕಿಕರಣವಾಗಲು ನಾಡಿನ ಹಲವು ಕವಿಗಳು, ಸಾಹಿತಿಗಳು, ನಟರು, ವಿಚಾರವಂತರು ಸೇರದಂತೆ ಹಲವು ಮಹನೀಯರ ಕೊಡುಗೆ ಅಪಾರ ನೂರಾರು ಮಹನೀಯರು, ಲಕ್ಷಾಂತರ ಪ್ರಜೆಗಳ ಹೋರಾಟದ ಪಲವಾಗಿ ನಾವು ಇಂದು ಏಕಿಕೃತನಾಡನ್ನು ಕಟ್ಟಿಕೊಂಡಿದ್ದೀವೆ ಕರ್ನಾಟಕವು ಸೇರದಂತೆ ದೇಶ ವಿದೇಶಗಳಲ್ಲೂ ಇರುವ ಕನ್ನಡಿಗರೂ ಸಹ ಆಯಾ ಪ್ರದೇಶಗಳಲ್ಲಿ ಕನ್ನಡರಾಜ್ಯೋತ್ಸವವನ್ನು ಆಚರಿಸುತ್ತ ಅಲ್ಲಿಯೂ ಕನ್ನಡದ ಕಂಪನ್ನು ಪಸರಿಸುತ್ತಿದ್ದಾರೆ. ಒಟ್ಟಾರೆ ನವಂಬರ್ ಸಂಪೂರ್ಣ ತಿಂಗಳು ಕನ್ನಡ ಮಯವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯುತ್ತಿದೆ. ಕನ್ನಡ ನಾಡು ನುಡಿ ಸಂಸ್ಕøತಿ ಇತಿಹಾಸ ಪರೆಂಪರೆಗಳ ಸದಾ ಬೆಳಗಲಿ ಆರೋಗ್ಯ ಪೂರ್ಣ ಹಾಗೂ ಸಮೃದ್ಧಿ ಕನ್ನಡ ನಾಡು ನಿರ್ಮಾಣವಾಗಲಿ ಎಂದರು.
ಈ ಕಾರ್ಯಕ್ರಮದಲ್ಲಿ ಇ.ಒ. ಎಸ್ ಆನಂದ್, ಬಿ.ಇ.ಒ ಉಮಾದೇವಿ, ಎ.ಇ.ಇ. ಎಂ ಕೆ ಹುಸೇನ್ ಸಾಬ್, ಸಿ.ಪಿ.ಐ. ರವಿಕುಮಾರ್, ಅಬಕಾರಿ ನಿರೀಕ್ಷಕ ಬಿ ಎಸ್ ರೋಹಿತ್, ನರೇಗ ಸಹಾಯಕ ನಿರ್ದೇಶಕ ರಾಮಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ ದನುಂಜಯ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಂ ಶ್ರೀನಿವಾಸನ್, ಆರ್.ಐ. ಮುನಿರೆಡ್ಡಿ, ವಿ.ಎ. ಹರೀಶ್, ಪ್ರೌಡ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ರಮಣಿ, ಶಿಕ್ಷಕರಾದ ಕಳಾಶಂಕರ್, ನಾರಾಯಣಸ್ವಾಮಿ ಗ್ರಾಮ ಸಹಾಯಕರಾದ ಕಳ್ಳೂರು ನಾಗರಾಜ್, ನಂದ ಕುಮಾರ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿಧ್ಯಾರ್ಥಿನಿಯರು ಹಾಜರಿದ್ದರು.