ಶ್ರೀನಿವಾಸಪುರ : ಸಭೆಯಲ್ಲಿ ಇಷ್ಟು ಜನ ಸೇರಿದ್ದೀರಿ, ನಾನು ಯಾರನ್ನು ನಂಬುವುದು ಯಾರನ್ನ ಬಿಡುವುದು ಎಂದು ಹೇಳುತ್ತಾ, ಇಷ್ಟು ಜನ ಬಂದು ಅನೇಕ ವಿಧಗಳಲ್ಲಿ ಪ್ರಯೋಜನೆಗಳನ್ನು ಪಡೆದು, ನನ್ನ ಸೋಲಿಸಿದ್ದೀರಿ ಎನ್ನುತ್ತಾ,ಎಂದು ಮಾಜಿ ಶಾಸಕ ಕೆ.ಆರ್.ರಮೇಶ್ಕುಮಾರ್ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ರಾಯಲ್ಪಾಡು ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಪರ ಮತಯಾಚನ ಸಭೆಯಲ್ಲಿ ಮಾತನಾಡಿದರು.
ಕಳೆದ ೧೧ ತಿಂಗಳಿನಿAದ ನಾನು ತೋಟದಲ್ಲಿ ಕುರಿಗಳ ಜೊತೆ ಹಾಗೂ ತೋಟವನ್ನು ಸುತ್ತಾಡುತ್ತಾ ಕಾಲಕಳೆದಿದ್ದೇನೆ. ಅನೇಕ ಬಾರಿ ಯೋಚನೆ ಮಾಡಿ ನನ್ನ ಬಳಿ ಇಲ್ಲದ್ದು, ಅವರ (ಶಾಸಕ .ಜಿ.ಕೆ.ವೆಂಕಟಶಿವಾರೆಡ್ಡಿ) ಬಳಿ ಇರುವುದಾದರೂ ಏನು ಎಂದು ನನ್ನನ್ನು ನಾನೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದೆ.
ಕಾಂಗ್ರೆಸ್ ಪಕ್ಷದ ಲೋಕಸಭಾ ಚುನವಾಣೆಗೆ ಅಭ್ಯರ್ಥಿ ಕಣಕ್ಕೆ ಇಳಿದಿದ್ದಾರೆ. ನನ್ನ ಕೆಲಸ ನಾನು ಮಾಡುತ್ತೇನೆ. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಲು ಮನವಿ ಮಾಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷವು ದೇಶಕ್ಕೆ ಅವಸರ .ಕಾಂಗ್ರೆಸ್ ಪಕ್ಷವನ್ನ ಉಳಿಸಬೇಕಿದೆ. ಸುಮಾರು ೧೬ಲಕ್ಷ ಜನ ಮತದಾರರು. ಇನ್ನು ಕೇವಲ ೧೦ ದಿನಗಳ ಮಾತ್ರ ಉಳಿದಿದೆ.
ನಾನು ರಾತ್ರಿ ೧೧ ಗಂಟೆ ರಾತ್ರಿಯಲ್ಲಿ ಜನರ ಕಷ್ಟವನ್ನು ಆಲಿಸುತ್ತೇನೆ , ವಸತಿ ಯೋಜನೆ ಮನೆಗಳಿಗೆ ಬಿಲ್ಲು ಆಗಲಿಲ್ಲ ಎಂದರೆ ನಾನು ಸಂಬAದ ಪಟ್ಟ ಅಧಿಕಾರಿಗಳನ್ನು ಮಾತನಾಡಿ ಸ್ಪಂದಿಸುತ್ತೇನೆ. ವಾಹನವನ್ನು ಪೊಲೀಸರು ಹಿಡಿದುಕೊಂದರೆ ಪೊಲೀಸರೊಂದಿಗೆ ಮಾತಾಡಿ ಅನುಕೂಲ ಮಾಡಿಕೊಡುತ್ತಿದ್ದೇ . ಈಗ ನೀವು ಯಾರ ಬಳಿ ಹೋಗಿ ಮಾತನಾಡುತ್ತೀರಿ ಎಂದು ಪ್ರಶ್ನಿಸಿದರು.
ನೀತಿ ನಿಜಾಯತಿಯಾಗಿ ಹೆಸರೆ ಶ್ರೀನಿವಾಸಪುರ ತಾಲೂಕಿನ ಜನತೆ. ಈ ವಯಸ್ಸಿನಲ್ಲಿ ದ್ರೋಹಕ್ಕೆ ಬೆನ್ನಿಗೆ ಚೂರಿ ಚುಚ್ಚುವುದು ಎಂದರೆ ರಾಜ್ಯದಲ್ಲಿ ಪ್ರಥಮ ಸ್ಥಾನ ತಾಲೂಕಿನ ಜನತೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಧಾನ ಸಭಾ ಚುನಾವಣೆಯ ಹಿಂದೆ ಬ್ಯಾಂಕ್ಗಳಲ್ಲಿ ಪಡೆದ ಸಾಲ ವಜಾ ಎಂದು ಹೇಳುತ್ತಿದ್ದವರು ಈ ಹಿಂದೆ ಕೊಳಚೆ ನೀರು ಎಂದು ಹೀಯಾಲಿಸುತ್ತಿದ್ದೀರಿ ಈಗ ಮುದವಾಡಿ ಕೆರೆ, ಕಲ್ಲೂರು ಕೆರೆಯಲ್ಲಿ ನೀರು ಇಲ್ಲ. ಕೆರೆಗಳಲ್ಲೇ ಒಣಗುತ್ತಿದೆ. ಎಲ್ಲಿ ಹೋಯ್ತು ನಿಮ್ಮ ಜಾತಿ ಕೆರೆಗಳು ಒಣಗಿ ಹೋಗುತ್ತಿದೆಯಲ್ಲಾ, ಈಗ ದೇವಗೌಡ ಕೊಳವೆ ತಿರುವುದು ಕುಮಾರಸ್ವಾಮಿ ಪೈಪುಗಳನ್ನು ಅಡ್ಜೆಟ್ ಮಾಡುವುದು ಎಂದು ವ್ಯಂಗ್ಯವಾಡಿದರು. ನೀವು ರೈತರಲ್ಲವೇ, ನನಗೆ ಈ ಕೆಲಸ ಮಾಡಿದ್ದೇನಯೇ, ನಾನೇನು ಕಮೀಷನ್ ತೆಗೆದುಕೊಂಡಿದ್ದೇನೆಯೇ, ನನ್ನ ಸಾಮಾನ್ಯ ಮಹಿಳೆಯ ಹೊಟ್ಟೆಯಲ್ಲಿ ಹುಟ್ಟಿರುವುದು ನಾನು ಮಾಡುವ ಕೆಲಸ ಶಾಶ್ವತವಾಗಿ ಇರಬೇಕು ಎನ್ನುವ ಉದ್ದೇಶದಿಂದ ಮಾಡಿದ್ದೇನೆ ಎಂದರು. ೧೧ ತಿಂಗಳಿನಿAದ ಕೆರೆಗಳು ಒಣಗುತ್ತಿದೆ ಇದು ನಿಮಗೆ ಗೊತ್ತಿಲ್ಲವೆ ಎಂದು ಉದ್ವೇಕದೊಂದಿಗೆ ಮಾತಾನಡಿದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕೆ.ಆರ್.ಕೃಷ್ಣಮೂರ್ತಿ, ಜಿ.ಪಂ. ಮಾಜಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ, ತಾ.ಪಂ. ಮಾಜಿ ಸದಸ್ಯ ರಾದ ಆರ್.ಜಿ. ನರಸಿಂಹಯ್ಯ ಕೆ.ಕೆ.ಮಂಜು, ರಾಯಲ್ಪಾಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯೋಗೀಂದ್ರಗೌಡ , ಗ್ರಾ,ಪಂ ಅಧ್ಯಕ್ಷ ಆರ್.ಗಂಗಾದರ್, ಕೂರಿಗೇಪಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷ ವಿಶ್ವನಾಥರೆಡ್ಡಿ, ಗೌನಿಪಲ್ಲಿ ಗ್ರಾ.ಪಂ.ಸದಸ್ಯ ಬಕ್ಷು ಸಾಬ್, ಆಕ್ಬರ್ಶರೀಫ್ ಮುಖಂಡರಾದ ಸುಣ್ಣಕಲ್ಲು ಮಂಜು.ಕಾರ್ಯಕರ್ತರು ಇದ್ದರು