ಶ್ರೀನಿವಾಸಪುರ : ಮಾನವನಲ್ಲಿ ಎಷ್ಟೇ ಕೆಟ್ಟಚಟಗಳು ಇದ್ದರೂ ಸಹ ಮಾಡುತ್ತಿರುವ ಕೆಟ್ಟ ಕೆಲಸಗಳನ್ನ ಬಿಟ್ಟು, ಜೀವನದಲ್ಲಿ ಬದಲಾವಣೆ ಯಾದರೆ ಸಮಾಜದಲ್ಲಿ ಗೌರವವನ್ನ ಪಡೆದುಕೊಳ್ಳಬಹುದು ಹಾಗು ಮನುಷ್ಯರೆಲ್ಲರೂ ಪರಿಪೂರ್ಣರಲ್ಲ , ಪ್ರತಿಯೊಬ್ಬರು ತಮ್ಮನ್ನು ತಿದ್ದುಕೊಂಡು ನಡೆಯುವ ಅವಶ್ಯಕತೆ ಎಂಬ ಸಂದೇಶವು ತಾವು ರಚನೆ ವಚನಗಳಲ್ಲಿ ಹೇಳಿದ್ದಾರೆ ಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಭಾನುವಾರ ರಾಷ್ಟೀಯ ಹಬ್ಬಗಳ ಸಮಿತಿಯಿಂದ ಯೋಗಿ ವೇಮನ್ನ 613 ನೇ ಜಯಂತಿ ಅಂಗವಾಗಿ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಯೋಗಿ ವೇಮನ್ನನವರು ಕೆಟ್ಟಹವ್ಯಾಸಗಳಿಂದ ಬದಲಾವಣೆಯಾಗಿ ಧಾರ್ಮಿಕ ಕಾರ್ಯಗಳತ್ತಾ ಬದಲಾವಣೆಯಾಗಿ ಸಮಾಜದಲ್ಲಿನ ಅಂಕುಡೊಂಕುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ತಮ್ಮ ಜೀವನ್ನೇ ಅರ್ಪಿಸಿದರು. ಅಲ್ಲದೆ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಹಲವಾರು ಪಧ್ಯಗಳನ್ನು ರಚನೆ ಮಾಡಿ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದರು. ದೇವರು ನಮ್ಮಲ್ಲೇ ಇದ್ದಾನೆ ಎಂಬುದನ್ನ ನಂಬಿದವರು ಇಂತಹ ಮಹಾನ್ ವ್ಯಕ್ತಿಯ ಆದರ್ಶಗಳನ್ನು ನಾವೆಲ್ಲರೂ ಮೈಗೊಡಿಸಿಕೊಳ್ಳಬೇಕು ಎಂದರು.
ಯೋಗಿ ವೇಮನ್ನ ಜಿಲ್ಲಾ ಸಮಿತಿ ಮುಖಂಡ ನಂಬಿಹಳ್ಳಿ ಶ್ರೀರಾಮರೆಡ್ಡಿ ಮಾತನಾಡಿ ನಾವೆಲ್ಲರೂ ಸೇರಿ ಯೋಗಿ ವೇಮನ್ನ ಜೀವನ ಶೈಲಿಯನ್ನು ಆದರ್ಶವಾಗಿ ಪಡೆದು ನಮ್ಮ ಮುಂದಿನ ಪೀಳಿಗೆಗೂ ಅವರ ಆದರ್ಶಗಳ ಬಗ್ಗೆ ತಿಳಿಸಿಕೊಡಬೇಕು ಎನ್ನುತ್ತಾ, ಮುಂದಿನ ದಿನಗಳಲ್ಲಿ ಪಂಚಾಯತಿ ಮಟ್ಟದಲ್ಲಿ ಯೋಗಿ ವೇಮನ್ನ ಜಯಂತಿಯನ್ನು ಅದ್ದೂರಿಯಾಗಿ ನಡೆಸಲು ಸಮುದಾಯ ಮುಖಂಡರು ಕೈಜೋಡಿಸಬೇಕು ಎಂದರು.
ಆರ್ಐ ಮುನಿರೆಡ್ಡಿ, ಕಚೇರಿ ಸಿಬ್ಬಂದಿ ಎಚ್.ಎಸ್.ಅಭೀಷಕ್, ಸಿಡಿಪಿಒ ಅಧಿಕಾರಿ ಶರಣಮ್ಮ, ತಾಲೂಕು ಅಧ್ಯಕ್ಷ ರಾಜಾರೆಡ್ಡಿ, ಗೌರವಾಧ್ಯಕ್ಷ ವಾಲಿರೆಡ್ಡಿ, ಉಪಾಧ್ಯಕ್ಷರಾದ ಸುಬ್ಬಿರೆಡ್ಡಿ, ವೆಂಕಟರಾಮರೆಡ್ಡಿ, ಪ್ರಧಾನ ಕಾರ್ಯದರ್ಶಿ ನರಸಿಂಹರೆಡ್ಡಿ, ಖಜಾಂಚಿ ನಾರಾಯಣರೆಡ್ಡಿ, ಜಂಟಿ ಕಾರ್ಯದರ್ಶಿ ಮೋಹನರೆಡ್ಡಿ , ಸಂಘನಾಕಾರ್ಯದರ್ಶಿ ವಿನೋಧರೆಡ್ಡಿ, ಕಾರ್ಯದರ್ಶಿ ಬೈರೆಡ್ಡಿ ಇದ್ದರು.