

ಕೋಲಾರ:- ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಗ್ರಾಮ ಪಂಚಾಯಿತಿ ಪ್ರಭಾರ ಅಭಿವೃದ್ದಿ ಅಧಿಕಾರಿಯಾಗಿ ತಾಡಿಗೋಳ್ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಚ್.ಚಲಪತಿ ಅವರನ್ನು ನೇಮಿಸಿ ತಾ ಪಂ ಇಒ ಅವರು ಆದೇಶ ಹೊರಡಿಸಿದ್ದಾರೆ.
ಈವರೆಗೂ ಯಲ್ದೂರು ಗ್ರಾಮ ಪಂಚಾಯಿತಿ ಪಿಡಿಒ ಆಗಿದ್ದ ಮಂಗಳಾಂಭ ಆಡಳಿತ ವೈಖರಿ ವಿರುದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಸೇರಿದಂತೆ ಸದಸ್ಯರು ತಿರುಗಿಬಿದ್ದ ಹಿನ್ನಲೆಯಲ್ಲಿ ಪಿಡಿಒ ಹುದ್ದೆ ವಿವಾದಕ್ಕೀಡಾಗಿತ್ತು. ಮತ್ತು ತುರ್ತು ಸಭೆ ನಡೆಸಿ ಗ್ರಾಮ ಪಂಚಾಯಿತಿ ಸದಸ್ಯರು ಅವರನ್ನು ವರ್ಗಾವಣೆ ಮಾಡಲು ನಿರ್ಣಯ ಅಂಗೀಕರಿಸಿ ದೂರು ನೀಡಿದ್ದರು.
ಈ ಹಿನ್ನಲೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಶಿವಕುಮಾರಿ ಆದೇಶ ಹೊರಡಿಸಿ ಸದ್ಯ ಪಿಡಿಒ ಆಗಿ ತಾಡಿಗೊಳ್ ಪಂಚಾಯಿತಿ ಕಾರ್ಯದರ್ಶಿ ಎಚ್.ಚಲಪತಿ ಅವರಿಗೆ ಪ್ರಭಾರ ವಹಿಸಿ ಮಂಗಳಾಂಭ ಅವರನ್ನು ಬಿಡುಗಡೆ ಮಾಡಿದರು.
ಚಲಪತಿ ಅವರು ಅಧಿಕಾರ ಸ್ವೀಕಾರಿಸಿದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಲಿತಾ, ಮಾಜಿ ಅಧ್ಯಕ್ಷರೂ ಹಾಗೂಹಾಲಿ ಸದಸ್ಯೆ ಸೀತಮ್ಮ, ಮಾಜಿ ಸದಸ್ಯ ಹೆಚ್.ಎಂ.ನಾರಾಯಣಸ್ವಾಮಿ,ಸೋಮಣ್ಣ ಮತ್ತು ಗ್ರಾಮಸ್ಥರು ಹಾಜರಿದ್ದರು.
