JANANUDI.COM NETWORK

ಕುಂದಾಪುರ, ಜೂ.23: ವಿಶ್ವ ಯೋಗ ದಿನಾಚರಣೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಶಾಖೆ ತಾರೀಖು 21-06-2021 ರಂದು ರಕ್ತ ನಿಧಿ ಕೇಂದ್ರ ದಲ್ಲಿ ಆಚರಿಸಲಾಯಿತು.
ಸಭಾಪತಿ ಜಯಕರ ಶೆಟ್ಟಿ, ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರು ಗಳಾದ ಗಣೇಶ್ ಆಚಾರ್ಯ ಮತ್ತು ಮುತ್ತಯ್ಯ ಶೆಟ್ಟಿ ಹಾಗೂ ರಕ್ತ ನಿಧಿ ಕೇಂದ್ರದ ಸಿಭಂದಿಗಳಾದ ವೀರೇಂದ್ರ ಕುಮಾರ ಗುಟ್ಟಲ್ ಮತ್ತು ಎಲ್ಲಾ ಸಿಭಂದಿಗಳು ಪಾಲ್ಗೊಂಡರು.
ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ. ಸೋನಿ ಇವರು ಸಂಪನ್ಮೂಲ ವ್ಯಕ್ತಿ ಯಾಗಿದ್ದರು. ಹಿರಿಯ ನಾಗರಿಕರಿಗೆ ಅನುಕೂಲಕರ ಕೆಲವು ಆಸನಗಳ ಮತ್ತು ಮುದ್ರೆಗಳನ್ನು ವಿವರವಾಗಿ ಮಾಹಿತಿ ನೀಡಿದರು.
ಧನ್ಯವಾದ ಗಳೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು.
