ಕುಂದಾಪುರ: ಜೂನ್ 21 ರಂದು ಭಂಡಾರಕಾರ್ಸ್ ಕಾಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಮತ್ತು IQAC,, ಭಾರತೀಯ ರೆಡ್ ಕ್ರಾಸ್, ಯೂಥ್ ರೆಡ್ ಕ್ರಾಸ್, ಏನ್ ಎಸ್ ಎಸ್, ಏನ್ ಸಿ ಸಿ, ರೇಂಜ್ ರ್ಸ್ ಮತ್ತು ರೋವರ್ಸ್,ಜೆ ಸಿ ಐ ಕುಂದಾಪುರ ಸಿಟಿ,ಯೋಗ ಬಂದು ಕುಂದಾಪುರ ಇವರ ಸಹಯೋಗದೊಂದಿಗೆ ಭಂಡಾರಕರ್ಸ್ ಕಾಲೇಜಿನ ಆರ್ ಏನ್ ಶೆಟ್ಟಿ ಸಭಾಂಗಣದಲ್ಲಿ ವಿಶ್ವ ಯೋಗ ದಿನ ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಂಡಾರಕರ್ಸ್ ಕಾಲೇಜಿನ ಶುಭಕರಾಚಾರ್ಯ ಇವರು” ಮನುಷ್ಯನಿಗೆ ಜೀವನದಲ್ಲಿ ಮುಖ್ಯವಾಗಿ ಬೇಕಾದದ್ದು ಅಂದರೆ ಆರೋಗ್ಯ ಮತ್ತು ನೆಮ್ಮದಿ. ನಮ್ಮ ಆರೋಗ್ಯ ಮತ್ತು ನೆಮ್ಮದಿಗಾಗಿ ಪತಂಜಲಿ ಅವರು ಹಾಕಿಕೊಟ್ಟ ಯೋಗವನ್ನ ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದು ಮಾಡುತ್ತಿರುವ ಯೋಗ ಇವತ್ತಿಗೆ ಕೊನೆ ಆಗದೆ ನಮ್ಮ ದಿನಚರಿಯಲ್ಲೂ ಒಂದಾಗಬೇಕು. “ಎಂದು ಹೇಳಿದರು.
ಯೋಗ ಬಂದು ಕುಂದಾಪುರ ಇದರ ಸದಸ್ಯರಾದ ಚೀನಾ ಆಚಾರ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಂಡಾರ್ ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಶುಭ ಕರಾಚಾರ್ಯ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಅನಿಲ್ ಚಾತ್ರ, ನಾಗೇಶ್,ಆದರ್ಶ ಹೆಬ್ಬಾರ್, ಗಜಾನಂದ, ಭಾಸ್ಕರ್ ಗಾಣಿಗ, ವಿಜಯಲಕ್ಷ್ಮಿ ಶೆಟ್ಟಿ, ಮೂಕಾಂಬಿಕ ಉಡುಪ, ಕ್ಯಾಪ್ಟನ್ ಅಂಜನ್ ಕುಮಾರ್ ಎ.ಎಲ್, ಸಬ್ ಲೆಫ್ಟಿಂನೆಂಟ್ ಶರಣ್ ಹಾಗೂ ಯೋಗ ಬಂದು ಕುಂದಾಪುರ ಇದರ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯೋಗದಲ್ಲಿ ವಿಶೇಷ ಸಾಧನೆಗೈದ ಭಂಡಾರ್ ಕಾರ್ಸ್ ಕಾಲೇಜಿನ ವಿದ್ಯಾರ್ಥಿನಿ ಮಹಿಮಾರನ್ನು ಸನ್ಮಾನಿಸಲಾಯಿತು.
ರೇಡಿಯೋ ಕುಂದಾಪುರ ಉಸ್ತುವಾರಿಯಾದ ಜ್ಯೋತಿ ಸಾಲಿಗ್ರಾಮ ಇವರು ಕಾರ್ಯಕ್ರಮ ನಿರೂಪಿಸಿದರು.