

ಕುಂದಾಪುರ; ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ತಾಲೂಕು ಘಟಕದಿಂದ ಎಪ್ರಿಲ್ 7ರಂದು ವಿಶ್ವ ಆರೋಗ್ಯ ದಿನಾಚರಣೆಯನ್ನು ಉಚಿತ ಆರೋಗ್ಯ ತಪಾಸಣಾ ಶಿಬಿರದ ಮೂಲಕ ಆಚರಿಸಲಾಯಿತು. ಕುಂದಾಪುರ ರೆಡ್ ಕ್ರಾಸನ ಸಭಾಪತಿ ಎಸ್ ಜಯಕರ ಶೆಟ್ಟಿ ದೀಪ ಬೆಳಗಿಸಿ ಶಿಬಿರವನ್ನು ಉಧ್ಘಾಟಿಸಿ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಎಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನವಾಗಿ ಆಚರಿಸುತ್ತಿದ್ದು, 2025ರ ಈ ದಿನವನ್ನು “ತಾಯಂದಿರು ಮತ್ತು ನವಜಾತ ಶಿಶುಗಳ” ಆರೋಗ್ಯ ಅಭಿಯಾನಕ್ಕೆ ಮೀಸಲಿಡಲಾಗಿದೆ ಎಂದರು. ಜಗತ್ತಿನಾದ್ಯಂತ ತಾಯಂದಿರ ಹಾಗೂ ನವಜಾತ ಶಿಶುಗಳ ಮರಣ ಪ್ರಮಾಣ ಗಣನೀಯ ಏರಿಕೆಯಾಗಿದ್ದು, ಅದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯು ಈ ವರ್ಷ ಪೂರ್ತಿ ತಾಯಿ ಮತ್ತು ನವಜಾತ ಶಿಶುಗಳ ಆರೈಕೆಯ ಅಭಿಯಾನಕ್ಕೆ ದೇಶಗಳ ಸರ್ಕಾರವನ್ನು ಒತ್ತಾಯಿಸಲಿದೆ ಎಂದರು. ಮರಣದ ಪ್ರಮಾಣ ತಗ್ಗಿಸಲು ಸೂಕ್ತ ಕ್ರಮದ ಅನುಷ್ಠಾನ ಆಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 128 ಮಂದಿ ಪ್ರಯೋಜನ ಪಡೆದರು.
ರೆಡ್ ಕ್ರಾಸನ ಖಜಾಂಜಿ ಶಿವರಾಮ ಶೆಟ್ಟಿ, ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿಕ, ನಿರ್ವಹಣ ಸಮಿತಿಯ ವೈ ಸೀತಾರಾಮ ಶೆಟ್ಟಿ, ಮುತ್ತಯ್ಯ ಶೆಟ್ಟಿ, ಅಬ್ದುಲ್ ಬಾಷಿರ್, ಗಣೇಶ್ ಆಚಾರ್ಯ, ಡಾ ಸೋನಿ ಮುಂತಾದವರು ಪಾಲ್ಗೊಂಡಿದ್ದರು.