Kundapur, June 5: World Environment Day was meaningfully celebrated at (on june 5 ) UBMC and CSI Krupa Vidyalaya English Medium School with the aim of creating awareness among students, parents and general public about land reclamation, desertification and drought resilience.
School Headmistress Mrs. Anita Alice D’Souza spoke in introduction and explained the history of Environment Day, reasons and solutions to save environment.
Emphasizing the theme of World Environment Day 2024, “Land Restoration, Desertification and Drought Resilience”, she requested the students, who are future citizens, to protect their environment.
The chief guest of the program, famous Kannada Konkani writer, Jananudi news agency editor Bernard DCosta, planted saplings and said, “The elders have been protecting our environment, the rain coincides with the World Environment Day.As soon as it rains, last year’s For plant vines come to life, if geeda vines are planted in the rainy season, geeda trees will grow and help our environment, we need to plant, trees for the next generation, then the children of the next generation will benefit from it” he gave a meaningful understanding of the environment day..
Mrs. Vidyalakshmi, the Anganwadi teacher who arrived as a guest, said that she requested the students to take care of the plants planted by the students and nurture them.
Mrs. Irene Sallins, Principal of the school, raised the alarm and in her presidential address lamented the bitter truth of human destruction of the environment and urged the students to take care of the environment.
On this occasion students presented cultural items like song, speech, dance, and drawings on Environment Day.
Principal, teachers and students actively participated in the “Cleanliness Campaign” in the school premises. The dignitaries, staff and students planted many saplings in the school premises.
Ms. Ujwala, the coordinator of the program, welcomed the teacher. Assistant teacher Mrs. Priyanka thanked. Associate teacher Mrs. Lata narrated the program. The program concluded with a Pledge of Conservation.
ಕುಂದಾಪುರದ UBMC ಮತ್ತು CSI ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಕುಂದಾಪುರ,ಜೂ.5: ವಿದ್ಯಾರ್ಥಿಗಳು, ಪೋಷಕರು ಮತ್ತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ, ಭೂ ಪುನಶ್ಚೇತನ, ಮರುಭೂಮಿಕರಣ ಮತ್ತು ಬರ ಸ್ಥಿತಿಸ್ಥಾಪಕತ್ವ ಉದ್ದೇಶದಿಂದ ಯುಬಿಎಂಸಿ ಮತ್ತು ಸಿಎಸ್ಐ ಕೃಪಾ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ (ಜೂನ್ 5 ರಂದು ) ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅನಿತಾ ಆಲಿಸ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿ ಪರಿಸರ ದಿನಾಚರಣೆಯ ಇತಿಹಾಸ, ಕಾರಣಗಳು ಮತ್ತು ಪರಿಸರ ಉಳಿಸಲು ಪರಿಹಾರಗಳನ್ನು ವಿವರಿಸಿದರು. 2024 ರ ವಿಶ್ವ ಪರಿಸರ ದಿನಾಚರಣೆಯ ವಿಷಯವಾದ “ಭೂ ಮರುಸ್ಥಾಪನೆ, ಮರುಭೂಮಿ ಮತ್ತು ಬರ ಸ್ಥಿತಿಸ್ಥಾಪಕತ್ವ” ವನ್ನು ಒತ್ತಿಹೇಳುತ್ತಾ, ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ತಮ್ಮ ಪರಿಸರವನ್ನು ರಕ್ಷಿಸಲು ವಿನಂತಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಖ್ಯಾತ ಕನ್ನಡ ಕೊಂಕಣಿ ಸಾಹಿತಿ, ಜನನುಡಿ ಸುದ್ದಿ ಸಂಸ್ಥೆಯ ಸಂಪಾದಕ ಬರ್ನಾಡ್ ಡಿಕೋಸ್ತಾ ಅವರು ಸಸಿ ನೆಟ್ಟು, “ನಮ್ಮ ಪರಿಸರವನ್ನು ಹಿರಿಯರು ಕಾಪಾಡಿಕೊಂಡು ಬಂದಿದ್ದರು, ಮಳೆಗೂ ವಿಶ್ವ ಪರಿಸರದ ದಿನಾಚರಣೆಗೂ ತಾಳೆಯಾಗುತ್ತೆ, ಮಳೆ ಬಂದಾಕ್ಷಣ ಕಳೆದ ವರ್ಷದ ಗೀಡ ಬಳ್ಳಿಗಳ್ಗೆ ಜೀವ ಬರುತ್ತದೆ, ಮಳೆಗಾಲದಲ್ಲಿ ಗೀಡಗಳನ್ನು ನೆಟ್ಟರೆ, ಗೀಡಗಳು ಬೆಳೆದು ನಮ್ಮ ಪರಿಸರಕ್ಕೆ ಸಹಕಾರಿಯಾಗುತ್ತದೆ, ಮುಂದಿನ ಪೀಳಿಗೆಗಾಗಿ ಗೀಡ ಮರಗಳನ್ನು ನೆಡಬೇಕಾಗಿದೆ, ಆವಾಗ ಮುಂದಿನ ಪೀಳಿಗೆಯ ಮಕ್ಕಳಿಗೆ ಅದರ ಲಾಭವಾಗುತ್ತೆ” ಎಂದು ಪರಿಸರ ದಿನದ ಅರ್ಥಪೂರ್ಣ ತಿಳುವಳಿಕೆಯನ್ನು ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಅಂಗನವಾಡಿ ಶಿಕ್ಷಕಿ ಶ್ರೀಮತಿ ವಿದ್ಯಾಲಕ್ಷ್ಮಿ ಮಾತನಾಡಿ, ವಿದ್ಯಾರ್ಥಿಗಳು ನೆಟ್ಟ ಗಿಡಗಳನ್ನು ಆರೈಕೆ ಮಾಡಿ ಪೋಷಣೆ ಮಾಡುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.
ಶಾಲಾ ಸಂಚಾಲಕಿ ಶ್ರೀಮತಿ ಐರಿನ್ ಸಾಲಿನ್ಸ್ ಅವರು ಗೀಡ ನೆಟ್ಟು, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾನವರು ಪರಿಸರವನ್ನು ಹಾಳುಮಾಡುವ ಕಹಿ ಸತ್ಯದ ಬಗ್ಗೆ ವಿಷಾದಿಸಿದರು ಮತ್ತು ವಿದ್ಯಾರ್ಥಿಗಳು ಪರಿಸರದ ಬಗ್ಗೆ ಕಾಳಜಿ ವಹಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪರಿಸರ ದಿನದ ಹಾಡು, ಭಾಷಣ, ನೃತ್ಯ, ಮತ್ತು ಪರಿಸರ ದಿನದಂದು ರೇಖಾಚಿತ್ರಗಳಂತಹ ಸಾಂಸ್ಕೃತಿಕ ವಸ್ತುಗಳನ್ನು ಪ್ರಸ್ತುತಪಡಿಸಿದರು.
ಶಾಲಾ ಆವರಣದಲ್ಲಿ “ಸ್ವಚ್ಛತಾ ಅಭಿಯಾನ”ದಲ್ಲಿ ಪ್ರಾಂಶುಪಾಲರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡರು. ಶಾಲಾ ಆವರಣದಲ್ಲಿ ಗಣ್ಯರು, ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿ ಹಲವು ಸಸಿಗಳನ್ನು ನೆಟ್ಟರು.
ಕಾರ್ಯಕ್ರಮದ ಸಂಯೋಜಕಿ, ಶಿಕ್ಷಕಿ ಶ್ರೀಮತಿ ಉಜ್ವಲಾ ಸ್ವಾಗತಿಸಿದರು. ಸಹಾಯಕ ಶಿಕ್ಷಕಿ ಶ್ರೀಮತಿ ಪ್ರಿಯಾಂಕಾ ವಂದಿಸಿದರು. ಸಹಶಿಕ್ಷಕಿ ಶ್ರೀಮತಿ ಲತಾ ಕಾರ್ಯಕ್ರಮ ನಿರೂಪಿಸಿದರು. ಸಂರಕ್ಷಣೆಯ ಪ್ರತಿಜ್ಞೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.