

ವಿಶ್ವ ರಕ್ತಧಾನಿಗಳ ದಿನ: ಮೂಡ್ಲುಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಯೋಗದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ರಕ್ತಧಾನಿಗಳ ದಿನದ ಅಂಗವಾಗಿ ರಕ್ತದಾನ ಶಿಬಿರ ಜರಗಿತು.
ಮುಖ್ಯ ಅತಿಥಿಯವರಾದ ಶ್ರೀಯುತ ವೈ .ಸೀತಾರಾಮ್ ಶೆಟ್ಟಿ (ಕಾರ್ಯದರ್ಶಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ) ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಒದ್ದಾಟಿಸಿ ,ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವವನ್ನು ತಿಳಿಸುತ್ತಾ ರಕ್ತ ಸಂಗ್ರಹಣೆ , ಪರಿಷ್ಕರಣೆಯ ಬಗ್ಗೆ ತಿಳಿಸಿ
ಮುಖ್ಯ ಅತಿಥಿಯವರಾದ ಶ್ರೀಯುತ ವೈ .ಸೀತಾರಾಮ್ ಶೆಟ್ಟಿ (ಕಾರ್ಯದರ್ಶಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ) ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಒದ್ದಾಟಿಸಿ,ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವವನ್ನು ತಿಳಿಸುತ್ತಾ ರಕ್ತ ಸಂಗ್ರಹಣ, ಪರಿಷ್ಕರಣೆಯ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಶ್ರೀಯುತ ಶಿವರಾಮ ಶೆಟ್ಟಿ (ಕೋಶಾಧಿಕಾರಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ),ಪ್ರಾಂಶುಪಾಲೆಯವರಾದ ಜನಿಫರ್ ಫ್ರೀಡ ಮೆನೇಜಸ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಶರೀಲ್ ಸಾರಾ ಕಾರ್ಯಕ್ರಮವನ್ನು ನಿರೂಪಿಸಿದರು, ನಿತ್ಯ ಪಿ ಸ್ವಾಗತಿಸಿ, ಭಾಗ್ಯಶ್ರೀ ಕಾರ್ಯಕ್ರಮವನ್ನು ವಂದಿಸಿದರು.
