ಶಂಕರನಾರಾಯಣ : ಶಿಕ್ಷಣ ಕ್ಷೇತ್ರದಲ್ಲಿ ಸದಾ ನಾವಿನ್ಯತೆಯನ್ನು ಅಳವಡಿಸಿ ಶಿಕ್ಷಕರಲ್ಲಿ ವೃತ್ತಿಪರ ಮನೋಸ್ಥೈರ್ಯವನ್ನು
ಬಲಪಡಿಸಿ ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಶ್ರಮಿಸುತ್ತಿರುವ ಮದರ್ ತೆರೇಸಾ ಎಜುಕೇಶನ್ ಟ್ರಸ್ಟ್ ಶಂಕರನಾರಾಯಣ ದಿನಾಂಕ 18/11/2024 ರ ಸೋಮವಾರದಂದು ಎಲ್ ಕೆ ಜಿ ಯಿಂದ ಹತ್ತನೇ ತರಗತಿ ಶಿಕ್ಷಕರಿಗೆ ಒಂದು ದಿನದ ವ್ಯಕ್ತಿತ್ವ ವಿಕಸನ ಮತ್ತು ವೃತ್ತಿಪರ ಬೆಳವಣಿಗೆ ಕಾರ್ಯಾಗಾರವನ್ನು ಆಯೋಜಿಸಿತು
ಸಂಸ್ಥೆಯ ಆಡಳಿತಾಧಿಕಾರಿ ಕುಮಾರಿ ಶಮಿತಾ ರಾವ್ ದೀಪ ಬೆಳಗಿಸುವುದರ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿದರು ರಾಷ್ಟ್ರಮಟ್ಟದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮನೋಜ್ ಎಮ್ ಭಟ್, (ಪ್ರಾಂಶುಪಾಲರು ಎನ್ ಆಯ್ ಈ ಎಸ್ ರೋಟರಿ ಪಬ್ಲಿಕ್ ಸ್ಕೂಲ್ ಹುಬ್ಬಳ್ಳಿ ) ಹಲವು ಪ್ರಾತ್ಯಕ್ಷಿಕೆಗಳ ಮೂಲಕ ಶಿಕ್ಷಕರಿಗೆ ಚಟುವಟಿಕೆಗಳನ್ನು ನಡೆಸಿದರು ವಿದ್ಯಾರ್ಥಿಗಳಲ್ಲಿ ಹೇಗೆ ಸಾಮಾಜಿಕ ಜವಾಬ್ದಾರಿ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸಲು ನೈತಿಕ ಪ್ರಜ್ಞೆಯನ್ನು ಬೆಳೆಸಬಹುದು, ಸಂಕೇತಗಳು, ಮಾರ್ಗದರ್ಶನ, ನಾಯಕತ್ವದ ಕೌಶಲ್ಯ, ಹೊಸ ಹೊಸ ಆಲೋಚನೆ, ಆತ್ಮವಿಶ್ವಾಸ,
ದೇಹಭಾಷೆ, ವಿಷಯಜ್ಞಾನ, ಚರ್ಚೆ, ಕೀಳರಿಮೆ, ಕಲಿಕೆಯ ಆಸಕ್ತಿ, ಮುಂತಾದ ವಿಷಯಗಳ ಕುರಿತು ಸುಧೀರ್ಘ ಚರ್ಚೆ ನಡೆಸಿದರು ಎಲ್ಲಾ ಶಿಕ್ಷಕರಲ್ಲಿ ವೃತ್ತಿಗೌರವವನ್ನು ಬೆಳೆಸಿಕೊಳ್ಳುವಂತೆ ತಿಳಿಸಿದರು ಭಯಮುಕ್ತರಾಗಿ ಮಕ್ಕಳಲ್ಲಿ ಹುದುಗಿರುವ ವಿಭಿನ್ನ ಕಲಿಕಾಸಕ್ತಿಯನ್ನು ಗುರುತಿಸಿ ಅವರನ್ನು ಕಲಿಕೆಯಲ್ಲಿ ಪ್ರೆರೇಪಿಸುವಂತೆ ಶಿಕ್ಷಕರು ಸದಾ ಸಿದ್ದರಾಗಿರಬೇಕು ವರ್ತಮಾನವನ್ನು ಚೆನ್ನಾಗಿ ಆನಂದಿಸುವ ಮಕ್ಕಳಿಗೆ ತರಗತಿ ಕೋಣೆಯಲ್ಲಿ ಕಲಿಕಾವಾತಾವರಣ ನಿರ್ಮಿಸಬೇಕು ಹಾಗೂ ಸಮಾಜದಲ್ಲಿ ನಡೆಯುತ್ತಿರುವ ವಿಷಯಗಳ ಬಗ್ಗೆ ಅರಿವು ಮೂಡಿಸಬೇಕು ಶಿಕ್ಷಕರು ಬೋಧನೆಯಲ್ಲಿ ನಾವಿನ್ಯತೆಯನ್ನು ಅಳವಡಿಸಿ ವರ್ತಮಾನದ ಸ್ಥಿತಿಗತಿಗೆ ತಮ್ಮನ್ನು ತಾವು ನಿರಂತರವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು ಕಾರ್ಯಾಗಾರದಲ್ಲಿ ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ, ಸತೀಶ್ ಶೆಟ್ಟಿ ( ASM ಮ್ಯಾಕ್ಮಿಲನ್ ) ಬೋಧಕ ಮತ್ತು ಬೋಧಕೇತರ ವೃಂದ ಹಾಜರಿದ್ದರು
ಶಿಕ್ಷಕಿ ಅವಿನಾ ಸ್ವಾಗತಿಸಿ ನಿರೂಪಿಸಿದರು ಶಿಕ್ಷಕಿ ದೀಪಾ ವಂದಿಸಿದರು.