ಕೋಲಾರ,ನ.22: ಆದಾಯ ತೆರಿಗೆ ನಿರ್ದೇಶನಾಲಯ (ಇಂಟೆಲಿಜೆನ್ಸ್ ಅಂಡ್ ಇನ್ವೆಸ್ಟಿಗೇಷನ್) ಮತ್ತು ಕೋಲಾರ ಜಿಲ್ಲಾ ತೆರಿಗೆ ಪ್ರಾಕ್ಟೀಸ್ನರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಇತ್ತೀಚಿನ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆ ತಂದಿರುವ ಹಲವು ಹೊಸ ಕಾರ್ಯಕ್ರಮಗಳ ಮತ್ತು ತೆರಿಗೆದಾರರಿಗೆ “ಇ ಪರಿಶೀಲನೆ” ಮತ್ತು ಪೂರಕ ಕ್ರಮಗಳ ಬಗ್ಗೆ ನಗರದ ಪತ್ರಕರ್ತರ ಭವನದಲ್ಲಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಹಿರಿಯ ಸದಸ್ಯರಾದ ಬಿ.ಆರ್.ಪ್ರಸಾದ್ ಹಾಗೂ ದೇವರಾಜ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಉಶಸ್ವಿಯಾಗಿ ನಡೆದಿದ್ದು, ಆದಾಯ ತೆರಿಗೆ ಇಲಾಖೆಯ ಅಪರ ನಿರ್ದೇಶಕ ಪಿ.ಸುರೇಶ್ ರಾವ್ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಆದಾಯ ತೆರಿಗೆ ಇಲಾಖೆಯ ಅಪರ ನಿರ್ದೇಶಕ ಪಿ.ಸುರೇಶ್ ರಾವ್, ಆದಾಯ ತೆರಿಗೆ ಅಧಿಕಾರಿಗಳಾದ ದಿನೇಶ್ ಹಾಗೂ ಬೆರ್ನಾರ್ಡ್, ಕೋಲಾರದ ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘದ ಅಧ್ಯಕ್ಷ ಬಿ.ಸುರೇಶ್, ತೆರಿಗೆ ಪ್ರಾಕ್ಟೀಸ್ನರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಜಕುಮಾರ್, ಹಿರಿಯ ಸದಸ್ಯರಾದ ಬಿ.ಆರ್.ಪ್ರಸಾದ್ ಹಾಗೂ ದೇವರಾಜ್, ತೆರಿಗೆ ಸಲಹೆಗಾರರ ಸಂಘದ ಸದಸ್ಯರು ಉಪಸ್ಥಿತರಿದ್ದು, ಕೋಲಾರ ಜನರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿತು.