

ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ 7ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್ ಕಾಲೇಜಿನ ವೈದ್ಯರಿಂದ ಕಾರ್ಯಾಗಾರ ನಡೆಯಿತು ಹಲವು ಪ್ರಾತ್ಯಕ್ಷಿಕೆಗಳಿಂದ ಡಾ II ಶ್ರೀನಿಧಿ, ಡಾ II ಸ್ಫೂರ್ತಿ ಮತ್ತು ಡಾ II ರಚನಾರವರು ವಿದ್ಯಾರ್ಥಿಗಳಿಗೆ ಡಯಟ್, ವ್ಯಾಯಾಮ, ಮಾಲಿಶ್, ನಿಯಮಿತ ಆಹಾರ ಸೇವನೆ,ಪ್ರಕೃತಿ ಚಿಕಿತ್ಸೆ ಮತ್ತು ಯೋಗ, ಉಪವಾಸ, ಸ್ಮರಣೆ,ಸಮತೋಲಿತ ದೈಹಿಕ ಮತ್ತು ಮಾನಸಿಕ ಆರೋಗ್ಯ ಕ್ಷೇಮ ಇತ್ಯಾದಿಗಳ ಕುರಿತು ಮೂರು ಹಂತಗಳಲ್ಲಿ ವಿವರಣೆ ನೀಡಿ ನಂತರ ವಿದ್ಯಾರ್ಥಿಗಳೊಂದಿಗೆ
ಪ್ರಶ್ನೋತ್ತರದಲ್ಲಿ ಪಾಲ್ಗೊಂಡು ಅವರ ಸಂಶಯವನ್ನು ನಿವಾರಿಸಿದರು ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ ಪ್ರಸ್ತಾವಿಸಿ ಶಿಕ್ಷಕಿ ದೀಪಾ ಸ್ವಾಗತಿಸಿ ನಿರೂಪಿಸಿದರು ಶಿಕ್ಷಕಿ ಶಾಂತಿ ವಂದಿಸಿದರು
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.





