

ಕುಂದಾಪುರ : ಶಂಕರನಾರಾಯಣದ ಮದರ್ ತೆರೇಸಾಸ್ ಪಿ ಯು ಕಾಲೇಜಿನ ದ್ವಿತೀಯ ಪಿ ಯು ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಒಂದು ದಿನದ “ವೃತ್ತಿ ಮಾರ್ಗದರ್ಶನ ಮತ್ತು ಆಪ್ತಸಲಹೆ” ಕಾರ್ಯಾಗಾರ ನಡೆಯಿತು ಮದರ್ ತೆರೇಸಾಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಕುಮಾರಿ ಶಮಿತಾರಾವ್ ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಾಗಾರವನ್ನು
ಉದ್ಘಾಟಿಸಿದರು
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀ ಮಿತೇಶ್ ಮೂಡುಕೊಣಾಜೆ (ಸ್ಥಾಪಕರು, ರಾಷ್ಟೀಯ ಪದವೀಪೂರ್ವ ವಿದ್ಯಾರ್ಥಿ, ಶಿಕ್ಷಕರ ಮತ್ತುಪಾಲಕರ ಸಂಘ ) ಇವರು ಕಾರ್ಯಾಗಾರದಲ್ಲಿ ಇಂದಿನ
ತಂತ್ರಜ್ಞಾನದ ಯುಗದಲ್ಲಿ ಉದ್ಯೋಗಕೌಶಲ್ಯ ಮತ್ತು ವೃತ್ತಿ ಕೌಶಲ್ಯ ಅಗತ್ಯವಾಗಿದೆ
ಜಾಗತೀಕರಣದ ಪ್ರಸ್ತುತ ಸಂದರ್ಭದಲ್ಲಿ ಬಹು ಕೌಶಲ್ಯ ಕಾರ್ಮಿಕರ ಬೇಡಿಕೆ ಹೆಚ್ಚಾಗಿದೆ ಭಾರತದಂತಹ ಅಭಿವೃದ್ಧಿಹೊಂದುತ್ತಿರುವ ರಾಷ್ಟ್ರದಲ್ಲಿ ಗುಣಮಟ್ಟದ ಕೌಶಲ್ಲ್ಯಾಭಿವೃದ್ಧಿ ಮತ್ತು ತರಬೇತಿ ಅಗತ್ಯ, ತಮ್ಮವೃತ್ತಿ ಆಯ್ಕೆಗಳನ್ನು ಗುರುತಿಸಲು ಮತ್ತು ಅಪೇಕ್ಷಿತ ವೃತ್ತಿಯನ್ನು ಆಯ್ಕೆಮಾಡಲು ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಅತೀ ಅವಶ್ಯಕವಾಗಿದೆ ಎಂದು ವಿದ್ಯಾರ್ಥಿಗಳಿಗೆ ನೀಟ್, ಸಿ ಇ ಟಿ ಪರೀಕ್ಷಾಮಾಹಿತಿ,
ಪರೀಕ್ಷಾದ್ವಂದ್ವಗಳು, ಭವಿಷ್ಯದಲ್ಲಿ ವೃತ್ತಿಯೋಜನೆ, ಕೋರ್ಸ್ಆಯ್ಕೆ, ವೃತ್ತಿಪರಿವರ್ತನೆ,
ಸ್ವಯಂನಿರ್ಧಾರ, ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸವಾಲುಗಳು,
ಉದ್ಯೋಗಾವಕಾಶಗಳು ಇತ್ಯಾದಿಗಳ ಕುರಿತು ಹಲವು
ಪ್ರಾತ್ಯಕ್ಷಿಕೆಗಳ ಮೂಲಕ ಮನವರಿಕೆ ಮಾಡಿ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವನ್ನು ಮೂಡಿಸಿದರು ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು,ಉಪನ್ಯಾಸಕರು ಮತ್ತು ಬೋಧಕೇತರ ವರ್ಗ ಉಪಸ್ಥಿತರಿದ್ದರು ಉಪನ್ಯಾಸಕಿ ಭವ್ಯಶ್ರೀ ಸ್ವಾಗತಿಸಿ ಶ್ವೇತಾ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.





