

ಕುಂದಾಪುರ : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಂ ಹಾಗೂ ವಿಕೆಆರ್ ಶಾಲೆಗಳ ಟೀಚರ್ ಟ್ರೈನಿಂಗ್ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ 25.09.2024 ರಂದು ಪ್ರಿಸ್ಕೂಲ್ ವಿದ್ಯಾರ್ಥಿಗಳಿಗೆ ಸುಂದರ ಕೈಬರಹ ಎನ್ನುವ ವಿಷಯದ ಕುರಿತು ಕಾರ್ಯಾಗಾರ ನೆರವೇರಿತು.
ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕಿ ಹಾಗೂ ಕೈಬರಹ ಪರಿಣಿತರಾಗಿರುವ ಶ್ರೀಮತಿ ಕವಿತಾ ಪಿ ಅವರು ಶಾಲಾ ಪೂರ್ವ ಮಕ್ಕಳ ಭಾವನಾತ್ಮಕ ಕೈಬರಹದ ಕುರಿತು ಮಾಹಿತಿ ಹಾಗೂ ಪ್ರಾತ್ಯಕ್ಷಿತಾ ನೀಡಿದರು.
ಸಂಸ್ಥೆಯ ಪ್ರಾಂಶುಪಾಲೆ ಆಗಿರುವ ಡಾ. ಚಿಂತನಾ ರಾಜೇಶ್ ಹಾಗೂ ವಿಷಯ ಶಿಕ್ಷಕರು ಉಪಸ್ಥಿತರಿದ್ದರು.
ಶಿಕ್ಷಕ ವಿದ್ಯಾರ್ಥಿನಿಯರಾದ ನಾಗಶ್ವೇತ, ಶ್ರುತಿ, ಚೈತ್ರ ಮತ್ತು ದೀಪಿಕಾ ಕಾರ್ಯಕ್ರಮವನ್ನು ನಿರೂಪಿಸಿದರು.
