ಕುಂದಾಪುರ : ಶಂಕರನಾರಾಯಣದ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮುಡುಬಿದಿರೆಯ ಆಳ್ವಾಸ್ ಕಾಲೇಜಿನ ವಿಷುಯಲ್ ಆರ್ಟ್ಸ್ ವಿಭಾಗದ ವಿದ್ಯಾರ್ಥಿಗಳಿಂದ ಒಂದು ದಿನದ ದೃಶ್ಯಕಲೆ ಕುರಿತು ಕಾರ್ಯಾಗಾರ ನಡೆಯಿತು 5ರಿಂದ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳಿಗೆ ಮುಂಜಾನೆ ಚಿತ್ರಕಲೆ ಸ್ಪರ್ಧೆ ಹಾಗೂ ಅಪರಾಹ್ನ ದೃಶ್ಯಕಲೆಯ ಪ್ರಾತ್ಯಕ್ಷಿಕೆ ನಡೆಯಿತು. ಆಳ್ವಾಸ್ ವಿದ್ಯಾರ್ಥಿಗಳಾದ ಅಂಜನಾ
ಮಣಿಪುರ ಮತ್ತು ಅಚ್ಚುತ್ ಹೆಗ್ಡೆ ಶಿರಸಿ ಇವರಿಂದ ಲೈವ್ ಮದರ್ ತೆರೇಸಾರವರ ಚಿತ್ರ ಬಿಡಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ದೃಶ್ಯ, ಶಿಲ್ಪ ಮತ್ತು ಚಿತ್ರಕಲೆಯ ಕುರಿತು ಆಸಕ್ತಿ ಮೂಡಿಸಿದರು
ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಹಳೆವಿದ್ಯಾರ್ಥಿಗಳಾದ ನಂದನ್ ಮತ್ತು ಪ್ರಸನ್ನ ಇವರು ವಯಕ್ತಿಕ ಆಸಕ್ತಿಯಿಂದ ತಮ್ಮ ಕಾಲೇಜಿನ ತಂಡದೊಂದಿಗೆ ಆಗಮಿಸಿದ್ದರು
ಚಿತ್ರಕಲೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತಾಧಿಕಾರಿ ಕುಮಾರಿ ಶಮಿತಾ ರಾವ್ ಆಳ್ವಾಸ್ ಸಂಸ್ಥೆಯ ನಗದು ಬಹುಮಾನ ಮತ್ತು ಪಾರಿತೋಷಕ ವಿತರಿಸಿದರು ಮುಖ್ಯಶಿಕ್ಷಕರು, ವಿದ್ಯಾರ್ಥಿಗಳು,ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಆಳ್ವಾಸ್ ಬಿ ವಿ ಎ ಕಾಲೇಜಿನ ಉಪನ್ಯಾಸಕರಾದ ಶರತ್ ಕುಮಾರ್ ಶೆಟ್ಟಿ ಮತ್ತು ಪರಮೇಶ್ವರ್ ಎನ್ ಪಿ ಉಪಸ್ಥಿತರಿದ್ದರು
ಚಿತ್ರಕಲೆಯಲ್ಲಿ ವಿಜೇತ ವಿದ್ಯಾರ್ಥಿಗಳ ಯಾದಿ :
1.ಆಕಾಂಕ್ಷಾ 7ನೇ ತರಗತಿ ‘ಬಿ’ ಪ್ರಥಮ
2.ಎ ವರ್ಷ 8ನೇ ತರಗತಿ ‘ಬಿ’ ದ್ವಿತೀಯ
3.ಶ್ರೀರಕ್ಷಾ ದ್ವಿತೀಯ ಪಿಯುಸಿ ವಾಣಿಜ್ಯ ಪ್ರಥಮ
4.ಮಾನ್ಯ ಆರ್ ಪ್ರಥಮ ಪಿಯುಸಿ ವಾಣಿಜ್ಯ ದ್ವಿತೀಯ