ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕುಶಲ ಕರ್ಮಿಗಳು ಸರ್ಕಾರದ ಸೌಲಭ್ಯ ಬಳಿಸಿಕೊಂಡು ಜೀವನ ಮಟ್ಟವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದಸ್ವಾಮಿ ಹೇಳಿದರು.
ತಾಲ್ಲೂಕಿನ ಗಂಗರಗಾನಪಲ್ಲಿ ಗ್ರಾಮದಲ್ಲಿ ಸಣ್ಣ ಕೈಗಾರಿಕೆ ಹಾಗೂ ಮೀನು ಸಾಕಾಣಿಕೆ ಇಲಾಖೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕುಶಲ ಕರ್ಮಿಗಳಿಗೆ ವಿವಿಧ ಸೌಲಭ್ಯ ವಿತರಣಾ ಸಮಾರಂಭದಲಿ ಮಹಿಳೆಯರಿಗೆ ಹೊಲಿಗೆ ಯಂತ್ರ, ಇತರರಿಗೆ ವಿವಿಧ ಸಲಕರಣೆಗಳನ್ನು ವಿತರಿಸಿ ಮಾತನಾಡಿದ ಅವರು, ಬದಲಾದ ಪರಿಸ್ಥಿತಿಯಲ್ಲಿ ಕುಶಲ ಕರ್ಮಿಗಳು ವೈಜ್ಞಾನಿಕ ವಿಧಾನ ಅನುಸರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ 20 ಮಹಿಳಾ ಫಲಾನುಭವಿಗಳಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. 10 ಮಂದಿ ಮೀನುಗಾರರಿಗೆ ಬಲೆ ಮತ್ತಿತರ ಸಲಕರಣೆ ಖರೀದಿಸಲು ತಲಾ ರೂ.10 ಸಾವಿರ ನೀಡಲಾಯಿತು. 5 ಮಂದಿ ಗಾರೆ ಕೆಲಸದವರು, 5 ಮಂದಿ ಕಲ್ಲು ಕುಟಿಕರಿಗೆ ಅಗತ್ಯವಾದ ಉಪಕರಣ ನೀಡಲಾಯಿತು. ಸವಿತಾ ಸಮಾಜ ಸೇರಿದಂತೆ ಹಲವು ಪ್ರಕಾರರದ ಕುಶಲ ಕರ್ಮಿಗಳನ್ನು ಗುರುತಿಸಿ ವಿವಿಧ ಸೌಲಭ್ಯ ವಿತರಿಸಲಾಯಿತು.
ತಾಲ್ಲೂಕು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮುನೆಯ್ಯ, ಕೈಗಾರಿಕಾ ವಿಸ್ತರಣಾಧಿಕಾರಿ ಉಮಾಕಾಂತ್ ಇದ್ದರು.
