ಶ್ರೀನಿವಾಸಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಪಟ್ಟಣದ ಪೋಸ್ಟ್ ಆಫೀಸ್ ಹಿಂಭಾಗದಲ್ಲಿರುವ ಸರ್ಕಾರಿ ಉನ್ನತೀಕೃತ ಶಾಲೆಯಲ್ಲಿ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮವನ್ನು ತಾಲ್ಲೂಕು ದಂಡಾಧಿಕಾರಿಗಳಾದ ಸುಧೀಂದ್ರ,ತಾಲ್ಲೂಕಿನ ಶಾಸಕರಾಗಿರುವ ಜಿಕೆ ವೆಂಕಟಶಿವಾರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಿದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮಕ್ಕೆ ದೀಪ ಬೇಳಗುವ ಮೂಲಕ ಚಾಲನೆ ನೀಡಿ ಮಾತನಾಡಿದ ಶಾಸಕ ಜಿಕೆ ವೆಂಕಟಶಿವಾರೆಡ್ಡಿ ಮಹಿಳೆಯರು ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಸ್ವಾವಲಂಬಿ ಬದುಕು ಸಾಗಿಸಲು ಸಶಕ್ತರನ್ನಾಗಿ ಮಾಡುವಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಶ್ಲಾಘನೀಯವಾಗಿದೆ, ಹಿಂದಿನ ಕಾಲದಲ್ಲಿ ಮಹಿಳೆಯರು ಕೇವಲ ಮೂರು ಗೋಡೆಗಳ ಮಧ್ಯೆದ ಮನೆಯಲ್ಲಿ ವಾಸಮಾಡುವ ಸಮಸ್ಯೆ ಇದ್ದಿತ್ತು. ಆದರೇ ಅದು ಇತ್ತೇಚ್ಚಿಗೆ ತಪ್ಪಿದಂತಾಗಿದೆ. ಭಾರತೀಯ ಸನಾತನ ಸಂಸ್ಕøತಿಯಲ್ಲಿ ಮಹಿಳೆಯರಿಗೆ ಉನ್ನತವಾದ ಹಾಗು ಗೌರವಯುತ ಸ್ಥಾನವಿದೆ. ಮಮತೆ, ಕರುಣೆ, ವಾತ್ಸಲ್ಯ, ತಾಳ್ಮೆ, ಇವೆಲ್ಲ ಹೆಣ್ಣಿಗೆ ಗರ್ಭದಿಂದ ಬಂದ ಆಭರಣಗಳು. ಪೃಕೃತಿಗೂ ಮಹಿಳೆಗೂ ಅವಿನೋಭಾವ ಸಂಭ್ರಮವಿದೆ. ನಮ್ಮ ಸಂಸ್ಕೃತಿ, ಕುಟುಂಬ ನಿರ್ವಹಣೆ, ಸಮಾಜ, ದೇಶ, ಆರೋಗ್ಯಕರ ಮನೋಭಾವನೆಯಿಂದ ಮುನ್ನಡೆದು ಉನ್ನತಿ ಹೊಂದಲು ಉತ್ತಮ ಮಹಿಳೆಯರ ಪಾತ್ರ ಅತ್ಯಗತ್ಯವಾಗಿದೆ. ಇಂದಿನ ದಿನಗಳಲ್ಲಿ ಮಹಿಳೆಯರು ಪ್ರತಿಯೊಂದು ವಿಭಾಗಗಳಲ್ಲಿ ನಮಗೆ ದೊರಕುತ್ತಾರೆ. ಇಂದಿನ ಮಹಿಳೆಯರು ಅಬಲೆಯರಾಗದೇ ತನ್ನ ಕಾಲ ಮೇಲೆ ತಾನು ನಿಂತು ಸಬಲೆಯರಾಗಿ ಸ್ವಾವಲಂಭಿ ಜೀವನ ನಡೆಸುತ್ತಿದ್ದಾರೆ. ಇದಕ್ಕೇ ಪೂರಕವೆಂಬಂತೆ ಧರ್ಮಸ್ಥಳ ಯೋಜನೆ ಇವರಿಗೆ ವರದಾನವಾಗಿ ಪರಿಣಮಿಸಿದೆ. ಮಹಿಳೆಯರು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದೆಂದರು.
ನಂತರ ಮಾತನಾಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಮಾಯಾಬಾಲಚಂದ್ರ ಮಾತನಾಡಿ “ಬಲಿಯಾಗದಿರುವ ಮನವೇ ಮೊಬೈಲ್ ಎಂಬ ಮಾಯೆಗೆ”ಎಂಬ ವಿಚಾರವಾಗಿ ಮಾತನಾಡಿ ಇಂದಿನ ಯುಗದಲ್ಲಿ ಮೊಬೈಲ್ ಇಲ್ಲದ ಅಥವಾ ಮೊಬೈಲ್ ಬಳಸದೇ ಇರುವವರು ಬಹಳ ಕಡಿಮೆ. ಇತ್ತೀಚಿನ ದಿನಗಳಲ್ಲಿ, ಮೊಬೈಲ್ ಪ್ರತಿಯೊಬ್ಬರ ಜೀವನದಲ್ಲಿ ಆದ್ಯತೆಯಾಗಿದೆ, ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ದೈನಂದಿನ ಜೀವನದಲ್ಲಿ ಸಂವಹನ, ವ್ಯಾಪಾರ ಉದ್ದೇಶಗಳು ಮತ್ತು ಇತರ ಚಟುವಟಿಕೆಗಳಿಗೆ ಬಳಸುತ್ತಾರೆ. ಇಂದಿನ ಜಗತ್ತಿನಲ್ಲಿ, ಮೊಬೈಲ್ ಫೋನ್ ವ್ಯಕ್ತಿಯ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿದೆ.ಪ್ರತಿಯೊಂದೂ ತನ್ನದೇ ಆದ ಪರಿಣಾಮಗಳನ್ನು ಹೊಂದಿದೆ, ಒಳ್ಳೆಯದು ಅಥವಾ ಕೆಟ್ಟದು ಎಂದು ನಮಗೆ ತಿಳಿದಿದೆ. ಮೊಬೈಲ್ ಫೋನ್ಗಳಿಗೆ ಅದೇ ರೀತಿ, ಹೇಗಾದರೂ ಇದು ಅದ್ಭುತ ಆವಿಷ್ಕಾರವಾಗಿದೆ, ಮತ್ತು ಮತ್ತೊಂದೆಡೆ, ಇದು ಅದರೊಂದಿಗೆ ಕೆಟ್ಟ ವಿಷಯಗಳನ್ನು ಒಳಗೊಂಡಿದೆ. ಸರಿಯಾದ ದೃಷ್ಟಿಕೋನದಿಂದ, ಮೊಬೈಲ್ ಫೋನ್ ಮಾನವರಿಗೆ ಅಸಾಧಾರಣ ಆವಿಷ್ಕಾರವಾಗಿದೆ, ಆದರೆ ಅದನ್ನು ನಿರಂತರವಾಗಿ ಹಲವಾರು ಗಂಟೆಗಳ ಕಾಲ ಬಳಸುವುದರಿಂದ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ.ಕೆಲವೊಮ್ಮೆ ಮೊಬೈಲ್ ಒಂದು ಗೊಂದಲದ ಸಾಧನವಾಗಿದ್ದು ಅದು ನಿಮ್ಮ ಕೆಲಸದ ನಡುವೆ ಗೊಂದಲವನ್ನು ಉಂಟುಮಾಡುತ್ತದೆ. ಮೊಬೈಲ್ಗಳ ಕಾರಣದಿಂದಾಗಿ ತಮ್ಮ ಅಧ್ಯಯನದಿಂದ ಸುಲಭವಾಗಿ ವಿಚಲಿತರಾಗುವ ವಿದ್ಯಾರ್ಥಿಗಳಲ್ಲಿ ಇದು ಕಂಡುಬರುತ್ತದೆ, ಏಕೆಂದರೆ ಸಾಧನವು ತಮ್ಮ ಸಾಫ್ಟ್ವೇರ್ ಅನ್ನು ಆನಂದಿಸಲು ಬಳಕೆದಾರರನ್ನು ಆಕರ್ಷಿಸುವ ಅಪ್ಲಿಕೇಶನ್ಗಳನ್ನು ಒಳಗೊಂಡಿದೆ. ಅಂತಹ ಅಪ್ಲಿಕೇಶನ್ಗಳಲ್ಲಿ ಒಂದೆರೆಡು ದಿನಗಳಲ್ಲಿ ಆಡಲಾಗುವ ವಿವಿಧ ಮೊಬೈಲ್ ಗೇಮ್ಗಳು ಜನರನ್ನು ವ್ಯಸನಿಯಾಗುವಂತೆ ಮಾಡುತ್ತದೆ ಮತ್ತು ಅವರ ಗುರಿಗಳಿಂದ ವಿಚಲಿತರಾಗುವಂತೆ ಮಾಡುತ್ತದೆ. ಅವಶ್ಯಕತೆಗೆ ತಕ್ಕಂತೆ ಮಾತ್ರ ಬಳಕೆ ಮಾಡಬೇಕು ಎಂದು ತಿಳಿಸಿದರು. ಇನ್ನು ಈ ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿಗಳಾದ ಸುಧೀಂದ್ರ ,ಜಿಲ್ಲಾ ಜಾಗೃತಿ ವೇದಿಕೆ ಸದಸ್ಯರಾದ ಗಿರಿಜಾ ವೇಣುಗೋಪಾಲ್ ರಾವ್, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಮಾಯಾಬಾಲಚಂದ್ರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಜಿಲ್ಲಾ ನಿರ್ದೇಶಕರಾದ ಪದ್ಮಯ್ಯ, ಸರ್ಕಾರಿ ಮಾದರಿ ಉನ್ನತಿಕೃತ ಶಾಲೆಯ ಮುಖ್ಯೋಪಾಧ್ಯಾಯರಾದ ಬೈರೇಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜಣಾಧಿಕಾರಿ ಪ್ರಕಾಶ್ ಕುಮಾರ್, ಸಮಾಜ ಸೇವಕರಾದ ಕಾಂತರಾಜ್ ಸೇರಿ ಹಲವು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.