ಕುಂದಾಪುರ : ‘ ಈ ಭೂಮಿಗೆ ನಾವು ತಾಯಿಯ ಗರ್ಭದಿಂದ ಹೊರಗೆ ಬಂದಾಗ ಒಂದು ಹೆಣ್ಣಾಗಿ ಬಂದಿದ್ದಕ್ಕೆ ಯಾವತ್ತೂ ದೇವರಲ್ಲಿ ಚಿರಋಣಿಯಾಗಿರಬೇಕು’ ಎಂದು ಡಾ. ಸೋನಿ ಡಿಕೋಸ್ಟ ಅವರು ಹೇಳಿದರು. ಅವರು ಇತ್ತೀಚಿಗೆ ಇಲ್ಲಿನ ಭಂಡಾರಕಾರ್ಸ್ ಕಾಲೇಜಿನ ಮಹಿಳಾ ವೇದಿಕೆಯವರು ಆಯೋಜಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಾರ್ಚ್ 8ನೇ ತಾರೀಕು ಬಂದಾಗ ನಾವು ಪೇಪರಲ್ಲಿ, ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಂ ಎಲ್ಲಾ ಕಡೆಯಲ್ಲೂ ಮಹಿಳಾ ದಿನದ ಸೆಲೆಬ್ರೇಶನ್ ನೋಡಬಹುದು. ವರ್ಷದ 365 ದಿನಗಳಲ್ಲಿ ಒಂದು ದಿನ ಮಾತ್ರ ಹೆಣ್ಣಿಗೆ ಮಹತ್ವವನ್ನು ಕೊಡುತ್ತಾರೆ. ಆದರೆ ಹೆಣ್ಣಾಗಿ ಹುಟ್ಟಿದ ನಾವೆಲ್ಲರೂ ನಿಜವಾಗಿ ನಮ್ಮನ್ನೇ ನಾವು ಅಭಿನಂದಿಸಿಕೊಳ್ಳಬೇಕು. ನಮ್ಮಲ್ಲಿಯೇ ಒಂದು ರೀತಿಯ ಹೆಮ್ಮೆ ಇರಬೇಕು. ಹತ್ತು ಇಪ್ಪತ್ತು ವರ್ಷಗಳ ಹಿಂದೆ ಹೋದರೆ ಪುರುಷ ಪ್ರಧಾನ ಸಮಾಜ ಇತ್ತು. ಆದರೆ ಈಗ ಒಂದು ಹೆಣ್ಣು ಎಲ್ಲಾ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಕ್ಕೆ ಹೋಗಿದ್ದಾಳೆ. ಹೆಣ್ಣು ಮಕ್ಕಳು ಯಾವಾಗಲೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎನ್. ಪಿ ನಾರಾಯಣ್ ಶೆಟ್ಟಿ,ಪ್ರಾಂಶುಪಾಲರು ಭಂಡಾರಕಾರ್ಸ್ ಕಾಲೇಜು ಕುಂದಾಪುರ ಇವರು ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಡಾ. ಶುಭಕರ್ ಆಚಾರ್ಯ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ, ಮತ್ತು ಮಹಿಳಾ ರಕ್ಷಣಾ ವೇದಿಕೆಯ ಸಂಯೋಜಕರಾದ ಪ್ರೊ. ಮೀನಾಕ್ಷಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಇವರು ಉಪಸ್ಥಿತರಿದ್ದರು.
700ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರೊ. ಮೀನಾಕ್ಷಿ ಸ್ವಾಗತಿಸಿ, ಉಪನ್ಯಾಸಕಿ ಓಂಶ್ರೀ, ವಾಣಿಜ್ಯ ವಿಭಾಗ ನಿರೂಪಿಸಿ, ಉಪನ್ಯಾಸಕಿ ವಿಜಯಲಕ್ಷ್ಮಿ ಗಣಕ ವಿಜ್ಞಾನ ವಿಭಾಗ ಪರಿಚಯಿಸಿ , ಉಪನ್ಯಾಸಕಿ ಮಮತಾ, ವಾಣಿಜ್ಯ ವಿಭಾಗ ವಂದಿಸಿ ಕಾರ್ಯಕ್ರಮ ನಿರ್ವಹಿಸಿದರು.