ಕುಂದಾಪುರ, ಮಾ. 12: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಇಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕಿ ಡಾ ಪಾರ್ವತಿ ಜಿ ಐತಾಳ್ ಅವರು ಮಹಿಳಾ ದಿನಾಚರಣೆ ಹೇಗೆ ಎಲ್ಲಿ ಆರಂಭವಾಯಿತು ಎಂದು ತಿಳಿಸುವುದರ ಜೊತೆಗೆ ಹಿಂದಿನ ಕಾಲದಲ್ಲಿ ಮಹಿಳೆಯರ ಜೀವನ ಹಾಗೂ ಇಂದಿನ ಮಹಿಳೆಯರ ಜೀವನದಲ್ಲಿ ಬಹಳಷ್ಟು ಸುಧಾರಿಸಿದೆ ಎಂದು ಹೇಳಿದರು. ಇನ್ನಷ್ಟು ಮಹಿಳೆಯರ ಅಭಿವೃದ್ಧಿಗೆ ಪುರುಷರು ಜೊತೆಗೂಡಬೇಕು. ಗಂಡು ಹೆಣ್ಣು ಜೊತೆಯಾಗಿ ಸಮಾಜವನ್ನು ಮುನ್ನಡಿಸಿ ಹೋಗಬೇಕು. ಮಹಿಳೆಯರಿಗೆ ಜ್ಞಾನ , ಆತ್ಮವಿಶ್ವಾಸ, ಆತ್ಮಗೌರವವೇ ಸೌಂದರ್ಯ ಸಾಮಾಗ್ರಿಗಳು ಆಗಬೇಕು ಅನ್ನುವ ಸಂದೇಶವನ್ನು ನೀಡಿದರು. ಅವರನ್ನು ಸನ್ಮಾನಿಸಲಾಯಿತು.
ಎಸ್ ಸಿ ಡಿ ಸಿ ಸಿ ಬ್ಯಾಂಕಿನ ಅಧ್ಯಕ್ಷರಾದ ಶಿವರಾಮ ಶೆಟ್ಟಿ ಮಾತಾನಾಡಿ ಇಂದಿರಾಗಾಂಧಿ ಅವರನ್ನು ನೆನೆದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಚಂದ್ರಶೇಖರ ಖಾರ್ವಿ, ಪ್ರದಾನ ಕಾರ್ಯದರ್ಶಿ ವಿನೋದ್ ಕ್ರಾಸ್ತಾ ಮಹಿಳೆಯರಿಗೆ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಪ್ರಭಾವತಿ ಶೆಟ್ಟಿ, ರೇವತಿ ಶೆಟ್ಟಿ, ವಾಣೆ ಆರ್ ಶೆಟ್ಟಿ, ಜಾನಕಿ ಬಿಲ್ಲವ, ವಸಂತಿ ಮೊಗವೀರ ಕೋಣಿ, ಸುಶೀಲ ಪೂಜಾರಿ, ಡಾ.ಫೋಡಿಲ್ ಕ್ರಾಸ್ಟೊ, ವೇಲಾ ಬ್ರಗಾಂಜ, ಮೀನಾಕ್ಷಿ, ಲತಾ, ಜಯ, ವೀಣಾ ಎನ್ ರಾವ್, ಸಿಂತಿಯಾ ಡಿಮೊಲ್ಲೊ, ಲೀಲಾ, ಮುತ್ತಕ್ಕ, ಲಲಿತಾ, ಮುಕಾಂಬಿಕಾ, ಜೂಲಿಯೆಟ್ ಪಾಯ್ಸ್, ವೈಲೇಟ್ ಡಿಸೋಜಾ, ವಿನಯ ಡಿಕೋಸ್ತಾ, ಸೀಮಾ ಪೂಜಾರಿ ,ನೇತ್ರಾವತಿ, ಮೈಮುನಾ ಹಾಜರಿದ್ದರು.
ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಮಹಿಳಾ ಬ್ಲಾಕ್ ಅಧ್ಯಕ್ಷೆ ದೇವಕಿ ಸಣ್ಣಯ್ಯ ಅವರು ಸ್ವಾಗತಿಸಿ, ಪ್ರಭಾವತಿ ಶೆಟ್ಟಿ ಬೇಳೂರು ಅತಿಥಿಯವರ ಕಿರು ಪರಿಚಯ ಮಾಡಿದರು. ಆಶಾ ಕರ್ವಾಲ್ಲೊ ಕಾರ್ಯಕ್ರಮ ನಿರೂಪಿಸಿ, ಶೋಭಾ ಸಚ್ಚಿದಾನಂದ ವಂದಿಸಿದರು.