JANANUDI.COM NETWORK
ಕುಂದಾಪುರ.ಮಾ.14: ಕುಂದಾಪುರ ರೋಜರಿ ಮಾತಾ ಚರ್ಚಿನ ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆ ಮತ್ತು ಸ್ವಸಹಾಯ ಪಂಗಡಗಳಿಂದ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮೊದಲು ಫಾ|ವಿಜಯ್ ಡಿಸೋಜಾ ಮತ್ತು ಪ್ರಾಂಶುಪಾಲ ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಇವರ ಯಾಜಕತ್ವದಲ್ಲಿ ಚರ್ಚಿನಲ್ಲಿ ಕ್ರತಜ್ಞತಾ ಬಲಿ ಪೂಜೆಯನ್ನು ಅರ್ಪಿಸಿದ ತರುವಾಯ ಚರ್ಚ್ ಸಭಾ ಭವನದಲ್ಲಿ ಸಭಾ ಕಾರ್ಯ ಕ್ರಮದ ನಡೆಯಿತು
ಅಧ್ಯಕ್ಷತೆ ವಹಿಸಿದ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ‘ಮಹಿಳೆ ತ್ಯಾಗ, ಪ್ರೀತಿ, ವಿಶ್ವಾಸ, ಮಮತೆ ಆರೈಕೆಯಲ್ಲಿ ಮತ್ತು ಪಾಲನೆ ಪೋಷಣೆಯಲ್ಲಿ ಮುಂದು,ನಾವು ನಮ್ಮ ಚರ್ಚಿನ 450 ವರ್ಷಗಳ ಸಂಬ್ರಮಾಚರಣೆಯಲ್ಲಿದ್ದೆವೆ, ಮಹಿಳೆಯರಿಂದ ನಮಗೆ ಸಹಕಾರ ಬೇಕು, ಮಹಿಳೆ ಎಲ್ಲದರಲ್ಲೂ ಸಯ್ ಎಂದು ಸಮಾಜಕ್ಕೆ ತೋರಿಸಿದ್ದಾರೆ, ನೀವು ನಿಮ್ಮ ಪ್ರತಿಭೆಗಳನ್ನು ಸಾಕಾರಗೊಳಿಸಿ’ ಎಂದು ಅವರು ಶುಭ ಹಾರೈಸಿದರು. ಸ್ತ್ರೀ ಸಂಘಟನೆಯ ಸಚೇತಕಿ ಭಗಿನಿ ಆಶಾ ಶುಭ ನುಡಿದರು. ಅತಿಥಿಗಳಾಗಿ ಕುಂದಾಪುರ ವಲಯ ಅಧ್ಯಕ್ಷೆ ನೋರಾ ಡಿಸೋಜಾ, ವಲಯದ ಕೋಶಾಧಿಕಾರಿ ಕೆರೋಲ್ ಗೊನ್ಸಾಲ್ವಿಸ್ ಆಗಮಿಸಿದ್ದರು. ಈ ವೇಳೆ ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಉಪಾಧ್ಯಕ್ಷೆ ವಿನಯಾ ಡಿಕೋಸ್ತಾ, ಕಾರ್ಯದರ್ಶಿ ಸಂಗೀತ ಪಾಯ್ಸ್, ಸಹ ಕಾರ್ಯದರ್ಶಿ ಜೂಲಿಯಾನ ಮಿನೇಜೆಸ್, ಖಚಾಂಚಿ ವೀಣಾ ಡಿಆಲ್ಮೇಡಾ, ವಲಯ ಪ್ರತಿನಿಧಿ ವಿಕ್ಟೋರಿಯಾ ಡಿಸೋಜಾ, ಮೊತಿಯಾಂ ಪತ್ರದ ಪ್ರತಿನಿಧಿ ವೈಲೆಟ್ ಡಿಸೋಜಾ, ಶಾಂತಿ ರಾಣಿ ಬಾರೆಟ್ಟೊ, ಜೂಲಿಯೆಟ್ ಪಾಯ್ಸ್, ಇತರ ಪದಾಧಿಕಾರಿಗಳು, ಹಾಗೂ ಸ್ವಸಹಾಯ ಪಂಗಡಗಳ ಅಧ್ಯಕ್ಷರುಗಳು, ಸದಸ್ಯರು ಉಪಸ್ಥಿತರಿದ್ದರು. ಸ್ತ್ರೀ ಸಂಘಟನೇಯ ಅಧ್ಯಕ್ಷೆ ಶಾಂತಿ ಕರ್ವಾಲ್ಲೊ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು ಜೂಲಿಯಾನ ಮಿನೇಜೆಸ್ ವಂದಿಸಿದರು.