ಬೈಂದೂರು ಇನ್ನರ್ ವೀಲ್ ಕ್ಲಬ್ ಮತ್ತು ಬ್ರಹ್ಮಾಕುಮಾರಿ, ಸಂಯುಕ್ತಾಶ್ರಯದಲ್ಲಿ ಮಹಿಳಾ ದಿನಾಚರಣೆ

JANANUDI.COM NETWORK

ಬೈಂದೂರು ಇನ್ನರ್ ವೀಲ್ ಕ್ಲಬ್ ಮತ್ತು ಬ್ರಹ್ಮಾಕುಮಾರಿ, ಸಂಯುಕ್ತಾಶ್ರಯದಲ್ಲಿ ಮಹಿಳಾ ದಿನಾಚರಣೆ ನಡೆಯಿತು. ಬೈಂದೂರು ತಹಸೀಲ್ದಾರ್ ಶೋಭಾ ಲಕ್ಷ್ಮಿ,ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು. ಬೈಂದೂರು ತಹಸೀಲ್ದಾ ಮಹಿಳಾ ಉಪನ್ಯಾಸಕಿ, ಜೇಸಿ ಅಧ್ಯಕ್ಷೆ, ಮಹಿಳಾ ಪುರಸಭಾ ಸದಸ್ಯೆ ಇತರ ಭಾಷಣಕಾರರು. ಮಹಿಳೆಯರು ಸಮಾಜಕ್ಕೆ ನಮ್ಮ ಸಾಮಾಜಿಕ ಬದ್ಧತೆಗಳ ಬಗ್ಗೆ ಮಾತನಾಡಿದರು.
ಇನ್ನರ್ ವೀಲ್ ಪ್ರೆಸಿಡೆಂಟ್ ಶಾಂತಿ ಪಿರೇರಾ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಇನ್ನರ್ ವೀಲ್ ಸಂಘಟನೆ ಮಹಿಳೆಯರು ಸಮಾಜದಲ್ಲಿ ಹಿಂದುಳಿದ ಕಷ್ಟದಲ್ಲಿ ಇರುವ ಬಡ ಶಿಕ್ಷಣ ವಂಚಿತ ರಾದ ಯುವತಿಯರನ್ನು, ಮಕ್ಕಳನ್ನು ಹಾಗೂ ಮಹಿಳೆಯರನ್ನು ಸಮಾಜದಲ್ಲಿ ಎಲ್ಲರೂ ಗುರುತಿಸುವಂತೆ ಅವರನ್ನು ಆರ್ಥಿಕವಾಗಿ ಸುಧ್ರಡ ಗೊಳಿಸಲು ಸಹಕರಿಸುವುದೇ ದ್ಯೇಯ” ಎಂದು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶಾಂತಿ ಪಿರೇರಾ ತಿಳಿಸಿದರು.
ವೇದಿಕೆಯಲ್ಲಿ ಬ್ರಹ್ಮಕುಮಾರಿ ಸಹೋದರಿ ವಿನೋದ ಸರಕಾರ ಪದವಿ ಕಾಲೇಜು ಬೈಂದೂರು ಸಹಾಯಕ ಪ್ರಾಧ್ಯಾಪಕಿ ಮೀನಾಕ್ಷಿ ಅಶೋಕ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಗೌರಿ ದೇವಾಡಿಗ, ಜೆ.ಸಿ.ಐ. ಬೈಂದೂರು ಪ್ರೆಸಿಡೆಂಟ್ ಸವಿತಾ ದಿನೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.