ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಸಂ.ಕ.ಸಮಾಚಾರ, ರಾಯಲ್ಪಾಡು 1 : ಮಹಿಳೆಯರು ಸ್ತ್ರೀ ಶಕ್ತಿ , ಸ್ವ ಸಹಾಯ ಸಂಘಗಳ ಮೂಲಕ ಸರಕಾರದ ಸೌಲಭ್ಯಗಳನ್ನು ಸದ್ಭಳಸಿಕೊಂಡು ಅರ್ಥಿಕ ಅಭಿವೃದ್ದಿ ಹೊಂದಬೇಕು ಎಂದು ಶಾಸಕರಾದ ಕೆ.ಆರ್.ರಮೇಶ್‍ಕುಮಾರ್ ತಿಳಿಸಿದರು.
ಲಕ್ಷ್ಮೀಪುರ ಗ್ರಾ.ಪಂ. ಬಳಿ ಡಿಸಿಸಿ ಬ್ಯಾಂಕ್ ವತಿಯಿಂದ 4ಕೋಟಿ 10ಲಕ್ಷ ಸಾಲವನ್ನು 82 ಸ್ತ್ರೀ ಶಕ್ತಿ ಸಂಘಗಳಿಗೆ ಶನಿವಾರ ವಿತರಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿನ ಮಹಿಳೆಯರು ಬ್ಯಾಂಕ್‍ವತಿಯಿಂದ ಸಾಲವನ್ನು ಪಡೆದ ಹಣದಿಂದ ಕುಟುಂಬವನ್ನು ಅರ್ಥಿಕ ಸಭಲಾಗಲು ಬೇಕಾಗುವ ರೀತಿಯಲ್ಲಿ ಹಣವನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದರು.
ಪ್ರಾರಂಭದ ಹಂತದಲ್ಲಿ ಡಿಸಿಸಿ ಬ್ಯಾಂಕ್‍ವತಿಯಿಂದ ಒಂದು ಸಂಘಕ್ಕೆ 3ಲಕ್ಷ ರೂ ಸಾಲವನ್ನು ವಿತರಣೆ ಮಾಡುತ್ತಿದ್ದವು. ಈಗ 5ಲಕ್ಷ ರೂ ಗಳನ್ನು ವಿತರಣೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಒಂದು ಸಂಘಕ್ಕೆ 10ಲಕ್ಷರೂ ಸಾಲವನ್ನು ನೀಡುವುಕ್ಕೆ ಬೇಕಾದ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಹಿಂದಿನ ಕಾಲದಲ್ಲಿ ಸಾಲವನ್ನು ಪಡೆಯಲು ಸಾಲವನ್ನು ನೀಡುವವರ ಮನೆಯಂಗಳಕ್ಕೆ ಬಳಿ ಅನೇಕ ಬಾರಿ ಓಡಾಡಿದರೂ ಹೆಚ್ಚಿನ ಬಡ್ಡಿಯನ್ನು ನೀಡಿ ಸಾಲವನ್ನು ಪಡೆಯಲು ಸಾಲವನ್ನು ನೀಡುವವರ ಕೈಕಾಲು ಹಿಡಿಯಬೇಕು ಆದರೆ , ಆದರೆ ಈಗ ಡಿಸಿಸಿ ಬ್ಯಾಂಕಿನ ವತಿಯಿಂದ ದೊಡ್ಡದಾದ ಪೆಂಡಾಲ್‍ಹಾಕಿ ಗೌರವದೊಂದಿಗೆ ಕೋಟಿ ಕೋಟಿ ಹಣವನ್ನು ನೀಡುತ್ತಿರುವುದು ಶ್ಲಾಘನೀಯವೆಂದರು.
ಡಿಸಿಸಿ ಬ್ಯಾಂಕ್‍ಗೆ ಒತ್ತಡವನ್ನು ಹಾಕಿ ಇತರೆ ತಾಲೂಕಿಗಿಂತ ಹೆಚ್ಚು ಸಾಲವನ್ನು ಸ್ತ್ರೀ ಶಕ್ತಿ ಸಂಘಗಳಿಗೆ ಹಾಗೂ ರೈತಾಪಿ ವರ್ಗಕ್ಕೆ ಸಾಲವನ್ನು ನೀಡುತ್ತಿದ್ದು, ಸಾಲವನ್ನು ಪಡೆದ ಸ್ತ್ರೀ ಶಕ್ತಿ ಸಂಘದ ಸದಸ್ಯರು ಬ್ಯಾಂಕ್ ನಿಗದಿ ಸಮಯದೊಳಗೆ ಮರುಪಾವತಿ ಮಾಡಬೇಕು . ನೀವು ಮರುಪಾವತಿ ಮಾಡುವ ಹಣವನ್ನು ಬೇರೆ ಸಂಘಗಳಿಗೆ ಸಾಲವನ್ನು ನೀಡಲು ಆನುಕೂಲವಾಗುತ್ತದೆ ಆದ್ದರಿಂದ ಸಾಲವನ್ನು ನಿಗಧಿ ಸಮಯದಲ್ಲಿ ಮರುಪಾವತಿ ಮಾಡುವಂತೆ ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್‍ವತಿಯಿಂದ ಬಡ ಕುಟುಂಬಗಳಿಗೆ ಹಾಗೂ ಬಡ ರೈತಾಪಿ ವರ್ಗಕ್ಕೆ ನೀಡುತ್ತಿರುವುದಕ್ಕೆ ಕೆಲವರಿಗೆ ಬಾಧೆಯಾಗಿದೆ ತೆಲುಗಿನ ನಾನ್ನುಡಿಯಂತೆ ಗುರ್ರಂ ವಚ್ಚಿ ಗುಗ್ಗಿಲ್ಲು ತಿಂಟೆ ಗಾಡಿದಿಕಿ ಕಡುಪು ನಪ್ಪಂಟ್ಟ ಎನ್ನುವಂತೆ ಇದೆ ಎಂದು ವಿರೋಧ ಪಕ್ಷದವರಿಗೆ ಟಾಂಗ್ ನೀಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ,ಕೋಮುಲ್ ಮಾಜಿ ಅಧ್ಯಕ್ಷ ಕೋಮಡಸಂದ್ರ ಶಾವಾರೆಡ್ಡಿ,ತಾ.ಪಂ.ಮಾಜಿ ಸದಸ್ಯ ಕೆ.ಕೆ.ಮಂಜು, ಲಕ್ಷ್ಮೀಪುರ ವಿಎಸ್‍ಎಸ್ ಅಧ್ಯಕ್ಷ ಕೃಷ್ಣಾರೆಡ್ಡಿ,ಕಾರ್ಯದರ್ಶಿ ಶಂಕರರೆಡ್ಡಿ,ಗ್ರಾ.ಪಂ.ಅಧ್ಯಕ್ಷ ಚಾನ್‍ಬಾಷ, ಮುಖಂಡ ಟಿ.ವಿ.ನಾರಾಯಣಸ್ವಾಮಿ,ಪೇಪರ್ ವೆಂಕಟೇಶ್ ,ಜಾಮೀಲ್‍ಪಾಷ,ಮುನಯ್ಯ ಹಾಗು ಇತರರು ಇದ್ದರು.