ಶ್ರೀನಿವಾಸಪುರ: ಗ್ರಾಮೀಣ ಪ್ರದೇಶದ ಮಹಿಳೆಯರು ಉದ್ಯಮಶೀಲತಾ ತರಬೇತಿ ಶಿಬಿರದ ಲಾಭ ಪಡೆದು, ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಕ್ಷುಸಾಬ್ ಹೇಳಿದರು.
ತಾಲ್ಲೂಕಿನ ಗೌನಿಪಲ್ಲಿ ಗ್ರಾಮದ ಮಾಲಿಕ್ ಫಂಕ್ಷನ್ ಹಾಲ್ನಲ್ಲಿ. ಬೆಂಗಳೂರಿನ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಶುಕ್ರವಾರ ಮಹಿಳೆಯರಿಗಾಗಿ ಏರ್ಪಡಿಸಿದ್ದ ಕಿರು ಉದ್ಯಮಶೀಲತಾ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ಆರ್ಥಿಕ ಸಂಸ್ಥೆಗಳಿAದ ಪಡೆದುಕೊಂಡ ಸಾಲ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು.
ಯಾವುದಾದರೂ ಉದ್ಯಮ ಪ್ರಾರಂಭಿಸಿ ಮಾದರಿಯಾಗಿ ಹಾಗೂ ಲಾಭದಾಯಕವಾಗಿ ಬೆಳೆಸಬೇಕು ಎಂದು ಹೇಳಿದರು.
ಇಡಿಐಐ ಸಂಸ್ಥೆಯಿಂದ ಮಹಿಳೆಯರಿಗೆ ಉಚಿತ ತರಬೇತಿ ದೊರೆಯುತ್ತಿದೆ. ನಾನು ಬಹಳ ಹಿಂದಿನಿಂದಲೂ ಸಂಸ್ಥೆಯ ಆರ್ಥಿಕ ಚಟುವಟಿಕೆಗಳನ್ನು ಗಮನಿಸುತ್ತಾ ಬಂದಿದ್ದೇನೆ. ತರಬೇತಿ ಪಡೆದಿರುವ ಅನೇಕ ಮಹಿಳೆಯರು ಸಣ್ಣ ಉದ್ಯಮ ನನ್ನು ಪ್ರಾರಂಭಿಸಿ ತಮ್ಮ ಜೀವನವನ್ನು ರೂಪಿಸಿ ಕೂಂಡಿದ್ದಾರೆ ಎಂದು ಹೇಳಿದರು.
ಇಡಿಐಐ ಸಂಸ್ಥೆಯ ಯೋಜನಾಧಿಕಾರಿ ಎಸ್.ಚೇತನ್ ಮಾತನಾಡಿ, ಗ್ರಾಮೀಣ ಮಹಿಳೆಯರಿಗೆ ಪ್ರಾರಂಭದಲ್ಲಿ 16 ದಿನಗಳ ಕಾಲ ಅಣಬೆ ಬೇಸಾಯ ಹಾಗೂ ಸ್ಯಾನಿಟರಿ ಪ್ಯಾಡ್ ತಯಾರಿಕೆಯಲ್ಲಿ ಉದ್ಯಮಶೀಲತಾ ತರಬೇತಿ ನೀಡಲಾಗಿದ್ದು. ಈಗ 6 ದಿನಗಳ ಕಾಲ ಕೈ ಹಿಡಿದು ನಡೆಸುವ ಕಾರ್ಯಾಗಾರವನ್ನು ನೀಡಲಾಗುತ್ತಿದೆ. ಅಣಬೆಗೆ ಎಲ್ಲ ಕಾಲದಲ್ಲೂ ಒಳ್ಳೆ ಬೇಡಿಕೆ ಇರುತ್ತದೆ. ಒಳ್ಳೆ ಬೆಲೆಯೂ ಸಿಗುತ್ತದೆ.
ಸ್ವಚ್ಛತಾ ಪ್ಯಾಡ್ ಬಳಕೆ ಹೆಚ್ಚುತ್ತಿರುವ ಈ ದಿನಗಳಲ್ಲಿ, ಅವುಗಳನ್ನು ಗೃಹ ಕೈಗಾರಿಕೆಯಂತೆ ತಯಾರಿಸಿ ಲಾಭಗಳಿಸಬಹುದಾಗಿದೆ ಎಂದು ಹೇಳಿದರು.
ಉದ್ಯಮ ಶೀಲತಾ ತರಬೇತಿ ಪಡೆದ ಅರ್ಹ ಫಲಾನುಭವಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಉದ್ಯಮಕ್ಕೆ ಅನುಗುಣವಾಗಿ ಸಾಲ ಸೌಲಭ್ಯ ವ್ಯವಸ್ಥೆ ಯಾರನ್ನು ಮಾಡಲಾಗುವುದು ಮಹಿಳೆಯರು ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕೌಶಲ್ಯ ಗಳಿಸಬೇಕು ಎಂದು ಹೇಳಿದರು.