

ಕುಂದಾಪುರ: “ಮಹಿಳೆಯರಿಗೆ ಗೌರವ ಕೊಟ್ಟಿದ್ದೆ ಕಾಂಗ್ರೆಸು. ಇದು ಸಾಧ್ಯವಾಗಿದ್ದು ಭಾರತದ ಸಂವಿದಾನದಿಂದ. ಬಿಜೆಪಿ ಭಾರತದ ನಕಾಶೆಯ ಚಿತ್ರ ಬರೆದು ಕಿರೀಟ ಮತ್ತು ವೇಷ ತೊಟ್ಟ ಮಹಿಳೆಯ ಕೈಯಲ್ಲಿ ರಾಷ್ಟ್ರಧ್ವಜವನ್ನು ತೋರಿಸಿ ಭಾರತ ಮಾತೆ ಎನ್ನುತ್ತದೆ. ಆದರೆ ಕಾಂಗ್ರೆಸ್ ನಮ್ಮ ದೇಶದ ಪ್ರತಿಯೊಬ್ಬ ಹೆಣ್ಣು ಮಗಳನ್ನೂ ಭಾರತಮಾತೆ ಎಂದು ಗೌರವಿಸುತ್ತದೆ, ಈ ವಂವಿಧಾನದಿಂದ ಭಾರತದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾದರು, ಇಂದಿರಾ ಗಾಂಧಿ ಮಹಿಳೆಯಾಗಿ ಕ್ರಾಂತಿಕಾರಿ ಅಭಿವ್ರದ್ದಿಗಳನ್ನು ಮಾಡಿದರು, ಎಂದು ಕಾಂಗ್ರೆಸ್ ಮುಖಂಡೆ, ಮಂಗಳೂರು ಮಹಾನಗರ ಪಾಲಿಕೆಯ ಮಾಜೀ ಸದಸ್ಯೆ ಪ್ರತಿಭಾ ಕುಳಾಯಿ ಹೇಳಿದರು.
ಅವರು ಕುಂದಾಪುರದ ಅಂಕದಕಟ್ಟೆಯಲ್ಲಿರುವ ಸಹನಾ ಕನ್ವೆನ್ಷನ್ ಸೆಂಟರ್ ನಲ್ಲಿ ಇಂದು ಬೆಳಿಗ್ಗೆ ನಡೆದ ಮಹಿಳಾ ಕಾಂಗ್ರೆಸ್ ಬ್ರಹತ್ ಸಮಾವೇಶದಲ್ಲಿ ಮಹಿಳೆಯರನ್ನುದ್ಧೇಶಿಸಿ ಆವರು ಮಾತನಾಡಿದರು.
“ಬಿಜೆಪಿ ಯವರು ಕೇವಲ ಅಧಿಕಾರಕ್ಕಾಗಿ ಜಾತಿಯ ಧರ್ಮದ ವೀಷ ಬೀಜ ಬಿತ್ತಿ ಕೋಮು ಗಲಭೆ ಮಾಡುಸುತ್ತಾರೆ. ಮತ್ತು ಬಡವರ ಮಕ್ಕಳ ಸಾವಿಗೆ ಕಾರಣಾಗುತ್ತಾರೆ, ಆದರೆ ಅವರ ಮುಖಂಡರ ಮಕ್ಕಳು ವಿದೇಶದಲ್ಲಿ, ಶಿಕ್ಷಣ, ಕೆಲಸಮಾಡಿಕೊಂಡು ಹಾಯಾಗಿದ್ದಾರೆ. ಅವರಿಗೆ ಶವ ಸಿಕ್ಕಿದರೆ ಸಾಕು, ಅವರು ಶವದ ಮೇಲೆ ರಾಜಕೀಯ ಮಾಡುತ್ತಾರೆ. ಕಾಂಗ್ರೆಸ್ ಭಾರತವನ್ನು ಅಭಿವ್ರದ್ದಿ ಪಡಿಸಿತ್ತು, ಆದರೆ ಅದನ್ನು ಬಿಜೆಪಿ ಮಾರಾಟ ಮಾಡಿದೆ, ಇನ್ನು ಬಿಜಿಪಿ ಗೆ ಮತ ಹಾಕುವರನ್ನು ಮಾರಲು ಮಾತ್ರ ಬಾಕಿಯಿದೆ, ಕಾಂಗ್ರೆಸ್ ಯಾವತ್ತೂ ಬಡವರ ಪರ ಸರ್ವ ಧರ್ಮೀಯರ ಪರ” ಎಂದು ಹೇಳಿದರು.
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ “ಇಲ್ಲಿ ಜನಸಾಗರ ನೋಡಿದರೆ ರಾಜ್ಯ ಮಟ್ಟದ ಸಮಾವೇಶವೆಂಬಂತ್ತೆ ಕಂಡು ಬರುತ್ತೆ ಎಂದು ಹೇಳುತ್ತಾ ಕಾಂಗ್ರೆಸ್ ಸರಕಾರ ಕೊಟ್ಟ ಎಲ್ಲಾ ಆಶ್ವಾಸನೆಗಳನ್ನು ಇಡೇರಿಸಿದೆ, ನುಡಿದಂತೆ ನಡೆದ ಪಕ್ಷ ಇದು. ಇಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮಾಡಿದ ಯೋಜನೆಗಳನ್ನು ದುಸ್ಥಿಗೆ ತಂದಿದ್ದಾರೆ. ಬಿಜೆಪಿ ಬೆಲೆಯೇರಿಸುತ್ತ ಇದೆಯೆಂದು ಹೇಳಿದರೆ ಪ್ರತಿ ಮನೆಯಲ್ಲೂ ನಾಲ್ಕು ವಾಹನಗಳಿವೆ, ಬಡವರು ಯಾರೂ ಇಲ್ಲ ಎನ್ನುತ್ತಿದೆ. ಭಾರತದ ಬಡ ಮಹಿಳೆಯರು ಬಿಜೆಪಿ ಕಣ್ಣಿಗೆ ಕಾಣುತ್ತಿಲ್ಲ. ಕೆಲವು ಕಡೆ ಜನರು ಎರಡು ಹೊತ್ತು ಹೊಟ್ಟೆಗಾಗಿ ಬಡವರ ತೆರಿಗೆ ಹಣದಲ್ಲಿ ಶ್ರೀಮಂತರನ್ನು ಸಾಕುತ್ತಿದೆ. ಹಾಗಾಗಿ ಬಿಜೆಪಿ ಏನಿದ್ದರೂ ಶ್ರೀಮಂತರ ಪಕ್ಷ ಎಂದ ಅವರು, ಜಿಲ್ಲೆಯ ಮಹಿಳೆಯರು ಈ ಬಾರಿ ಬಿಜೆಪಿಗೆ ತಕ್ಕ ಉತ್ತರ ನೀಡುತ್ತಾರೆ” ಎಂದು ಹೇಳಿದರು.
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸಿನ ಮಾಜೀ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೋ ಮಾತನಾಡಿ, ಕುಂದಾಪುರದಲ್ಲಿ ಮೊದಲ ಬಾರಿಗೆ ಮಹಿಳೆಯರು ಬ್ರಹತ ಮಟ್ಟದ ಸಮಾವೇಶಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದೆ. ಕೊರೊನಾದಂತಹಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಿದ್ಧರಾಮಯ್ಯ ಆರಂಭಿಸಿದ ಅನ್ನಭಾಗ್ಯ ನಮ್ಮ ಕೈ ಹಿಡಿದಿದೆಯೇ ಹೊರತು ಬಿಜೆಪಿ ನಾಯಕರು ಬಾರಿಸಿದ ಗಂಟೆ ಜಾಗಟೆಗಳಲ್ಲ ಎನ್ನುವುದನ್ನು ಅರಿತುಕೊಳ್ಳಬೇಕಿದೆ. ಈಗ ಅದನ್ನೂ ಕಿತ್ತುಕೊಂಡಿರುವ ಬಿಜೆಪಿ ಸರ್ಕಾರ 5 ಕೆಜಿಗಳಿಗೆ ಕಡಿತ ಮಾಡಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದರೆ 200 ಯುನಿಟ್ ಉಚಿತ ವಿದ್ಯುತ್, ಪ್ರತೀ ಕುಟುಂಬದ ಮಹಿಳಾ ಯಜಮಾನಿಯ ಖಾತೆಗೆ ಪ್ರತೀ ತಿಂಗಳು 2000 ರೂಪಾಯಿಗಳು ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ವ್ಯಕ್ತಿಗೆ ಮಾಸಿಕ 10 ಕೆಜಿ ಅಕ್ಕಿ ನೀಡುವ ಕಾಂಗ್ರೆಸಿನ ಮೂರು ಗ್ಯಾರೆಂಟಿಗಳನ್ನು ಘೋಷಿಸಿದರು.
ಕುಂದಾಪುರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುರಸಭೆಯ ಸದಸ್ಯೆ ದೇವಕಿ ಸಣ್ಣಯ್ಯ ಸಮಾವೇಶದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ ತಮ್ಮ ಸಂದೇಶ ನೀಡಿದರು. ಕೆಪಿಸಿಸಿ ಸದಸ್ಯ ಎಂ.ಎ.ಗಫೂರ್, ಕಾಂಗ್ರೆಸಿನ ಸಾಧನೆಗಳನ್ನು ತಿಳಿಸಿ “ಯಾರು ಇಂತಹದೇ ಧರ್ಮದಲ್ಲಿ ಜನಿಸ ಬೇಕೆಂದು ಅರ್ಜಿ ಹಾಕಿ ಜನ್ಮವೆತ್ತುವುದಿಲ್ಲಾ, ಯಾವ ಧರ್ಮದಲ್ಲಿ ಜನಿಸಿದರೂ, ಈ ಭಾರತ ಭೂಮಿಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಸಮಾನವಾಗಿ ಕಾಣುತ್ತೆ. ಆದರೆ ಬಿ.ಜೆಪಿ. ಧರ್ಮಾಧರಿತ ರಾಜಕಾರಣ ಮಾಡುತ್ತೆ’ ಎಂದು ಹೇಳಿದರು. ನಗರ ಯೋಜನ ಪ್ರಾಧಿಕಾರದ ಮಾಜೀ ಅಧ್ಯಕ್ಷ ವಿಕಾಸ್ ಹೆಗ್ಡೆ ಕಾಂಗ್ರೆಸ್ ಮಾಡಿದ ಸಾಧನೆ ಬಗ್ಗೆ ವಿಸ್ತಾರವಾಗಿ ಮಾತನಾಡಿದರು. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಶ್ಯಾಮಲಾ ಭಂಡಾರಿ, ಮಾತನಾಡಿ ಮಹಿಳೆಯರಿಗಾಗಿಯೇ ಕೆಲವೊಂದು ಯೋಜನೆಗಳು ಅಶ್ವಾಸನೆಯಲ್ಲಿ ಸೇರಿಸಲು ಚಿಂತಿಸಲಾಗಿದೆಯೆಂದರು.
ರೇಖಾ ಪೂಜಾರಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಅಶೋಕ್ ಪೂಜಾರಿ ಬೀಜಾಡಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಕುಂದಾಪುರ ಪುರಸಭೆಯ ಕಾಂಗ್ರೆಸ್ ಸದಸ್ಯರು, ಗ್ರಾಮ ಪಂಚಾಯತ್ ಗಳ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಕುಂದಾಪುರ ಬ್ಲಾಕ್ ಮಂಡಳದ ಮಹಿಳಾ ಆಶಾ ಕರ್ವಾಲ್ಲೋ ವಂದಿಸಿದರು. ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

































