ಮಹಿಳೆಯರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ; ನಾಗವೇಣಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ ಮಾ 8 : ಮಹಿಳೆಯರನ್ನು ಗಂಡು ಹೆಣ್ಣು ಎಂಬ ಭೇದಭಾವ ಮಾಡದೆ ಸಮಾನ ದೃಷ್ಟಿಯಲ್ಲಿ ನೋಡಿದಾಗ ಮಾತ್ರ ಸಮಾಜ ಉನ್ನತ ಮಟ್ಟದಲ್ಲಿರುತ್ತದೆ ಹೀಗಾಗಿ ಮಹಿಳೆಯರು ಕೇವಲ ಕುಟುಂಬಕಷ್ಟೇ ಸೀಮಿತವಾಗದೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ಪ್ರಾಂಶುಪಾಲರಾದ ಡಿ.ನಾಗವೇಣಿ ತಿಳಿಸಿದರು.
ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ , ತಮಗೆ ನೀಡಿದ ಆತ್ಮೀಯ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು .
ಈಗ ಪೈಪೋಟಿ ಯುಗವಾಗಿರುವುದರಿಂದ ಪುರುಷ ಮಹಿಳೆ ಸಮಾನವಾಗಿ ದುಡಿದಾಗ ಮಾತ್ರ ನೆಮ್ಮದಿಯ ಬದುಕು ಸಾಗಿಸಬಹುದು ವಿಶ್ವ ಮಹಿಳಾ ದಿನಾಚರಣೆ ಆಚರಿಸಿ ಕೊಳ್ಳುವಷ್ಟು ಮಹಿಳೆ ಮುಂದುವರಿದಿದ್ದರೂ ಶೋಷಣೆ ನಿರಂತರವಾಗಿ ನಡೆಯುತ್ತಿದೆ ಇದು ನಿಂತಾಗ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥ ಸಿಗುತ್ತದೆ ಎಂದರು .
ದೇಶದ ಸವಾರ್ಂಗೀಣ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಶ್ಲಾಘನೀಯವಾಗಿದ್ದು, ಕ್ರೀಡೆ ಸಿನಿಮಾ ರಾಜಕೀಯ ಶೈಕ್ಷಣಿಕ ಕ್ಷೇತ್ರಗಳಲ್ಲೂ ಮಹಿಳೆ ಪುರುಷನಿಗೆ ಸರಿಸಮಾನವಾಗಿ ನಿಂತಿದ್ದಾಳೆ. ಈಗ ಕಾಲ ಬದಲಾಗಿದೆ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಎಲ್ಲ ರಂಗಗಳಲ್ಲಿಯೂ ಮುಂಚೂಣಿಯಲ್ಲಿ ಇದ್ದಾಳೆ ಎಂದು ತಿಳಿಸಿದರು .
ಮುಖ್ಯ ಅತಿಥಿಗಳಾಗಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಶಿಕ್ಷಣಾಧಿಕಾರಿ ಸಿ ಆರ್ ಅಶೋಕ್ ಮಾತನಾಡಿ ಲಿಂಗ ಸಮಾನತೆ ರೂಪಿಸುವಲ್ಲಿ ನಮ್ಮ ನಿಮ್ಮೆಲ್ಲರ ಪ್ರಮುಖ ಪಾತ್ರವಿದೆ ಎಂದು ವಿಶ್ಲೇಷಿಸಿದರು .ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾದ್ಯಾಯ ಜಿ.ಶ್ರೀನಿವಾಸ್ ವಹಿಸಿದ್ದು, ಪಟ್ನಾ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ನಾಗರಾಜ್ ಶಾಲಾ ಸಹ ಶಿಕ್ಷಕರುಗಳಾದ ಗೋವಿಂದಪ್ಪ ಸೊಣ್ಣೇಗೌಡ ಮುನಿಯಪ್ಪ ಮೀನಾ ಮಮತಾ ಉಪಸ್ಥಿತರಿದ್ದರು
.