ಮಹಿಳಾ ಕ್ರೀಡಾಪಟುಗಳು ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ತೊರೀಸಿ ವಿಶ್ವ ಕ್ರೀಡೆಗಳಲ್ಲಿ ದೇಶದ ಹೆಗ್ಗಳಿಕೆಗೆ ಕಾರಣರಾಗುತ್ತಿದ್ದಾರೆ: ಯಡಗಾನಪಲ್ಲಿ ವೈ.ಬಿ.ರವಿ

ಶ್ರೀನಿವಾಸಪುರ : ಇತ್ತೀಚಿನ ದಿನಗಳಲ್ಲಿ ಪುರಷ ಕ್ರೀಡಾಪಟುಗಳಿಗಿಂತ, ಮಹಿಳಾ ಕ್ರೀಡಾಪಟುಗಳು ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ಇದ್ದು, ಅದರಂತೆ ವಿಶ್ವ ಕ್ರೀಡೆಗಳಲ್ಲಿ ದೇಶದ ಹೆಗ್ಗಲಿಕೆ ಕಾರಣರಾಗುತ್ತಿದ್ದಾರೆ ಎಂದು ದಾನಿ ಯಡಗಾನಪಲ್ಲಿ ವೈ.ಬಿ.ರವಿ ಹೇಳಿದರು.
ತಾಲೂಕಿನ ರಾಯಲ್ಪಾಡು ಗ್ರಾಮದ ಸರ್ಕಾರಿ ಪ್ರೌಡಶಾಲೆಯಲ್ಲಿ ಹಮ್ಮಿಕೊಳ್ಳಲಾದ ಹೋಬಳಿ ಮಟ್ಟದ ಕ್ರೀಡಾಕೂಟಗಳಲ್ಲಿನ ಮಹಿಳಾ ವಿಭಾಗದ ಕ್ರೀಡಾಕೂಟಗಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿನೀಯರು ಒಳ್ಳೇಯ ಚಾಕುಚಕೈತೆ ಇರುವಂತಹ ಪ್ರತಿಭೆ ಇರುವಂತಹ ವಿದ್ಯಾರ್ಥಿನೀಯರಿದ್ದು, ಅಂತಹ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ , ಮಾರ್ಗದರ್ಶನವನ್ನು ನೀಡಿದಾಗ ತಾಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹೆಸರು ತರುವಂತವಾರಗುತ್ತಾರೆ ಎಂದು ಹೇಳುತ್ತಾ ಕ್ರೀಡಾಪಟುಗಳಿಗೆ ಶುಭಹಾರೈಸಿದರು.
ಮುಖಂಡ ಯರ್ರಂವಾರಿಪಲ್ಲಿ ಶಿವಾರೆಡ್ಡಿ ಮಾತನಾಡಿ ಮಾನಸಿಕ , ದೈಹಿಕ ಸದೃಡತೆ ಕಾಯ್ದುಕೊಳ್ಳಲು ಹಾಗೂ ದೇಹದ ಕ್ರೀಯಶೀಲತೆಯನ್ನು ಹೆಚ್ಚಿಸಲು ಸಹಕಾರಿಯಾಗುವ ಕ್ರೀಡೆಗಳು ಪ್ರತಿಯೊಬ್ಬರ ದಿನನಿತ್ಯ ಚಟುವಟಿಕೆಯಾಗಬೇಕಾಗಿದೆ ಎಂದು ಸಲಹೆ ನೀಡಿದರು.
ಗ್ರಾ.ಪಂ ಮಾಜಿ ಸದಸ್ಯ ಸಿಮೆಂಟ್‍ನಾರಾಯಣಸ್ವಾಮಿ, ಸಿಆರ್‍ಪಿ ವರದರೆಡ್ಡಿ, ಶಿಕ್ಷಕರಾದ ಎಂ.ಕೆ.ವೆಂಕಟರಮಣ, ಮಹೇಶ್ ,ರಾಮಾಂಜಿ, ಸುದರ್ಶನ, ಭಾಗ್ಯಲಕ್ಷ್ಮಿ ಇದ್ದರು.