ಬೆಳಗಾವಿ : ಬೆಳಗಾವಿ ತಾಲೂಕಿನ ಹೊಸ ಪಂಟಮೂರಿ ಗ್ರಾಮದಲ್ಲಿ ನಿನ್ನೆ ಮಧ್ಯರಾತ್ರಿ ಮಗಳು ಪ್ರಿಯಕರನೊಂದಿಗೆ ಪರಾರಿಯಾಗಿದ್ದಕ್ಕೆ ಇಂದು ನಸುಕಿನ ಜಾವ 1 ಘಂಟೆಗೆ ರಾಕ್ಷಸ ರೂಪದಲ್ಲಿರುವ ಕೇಲ ಆರೋಪಿಗಳು ಹುಡುಗಿ ಪ್ರೀತಿಸಿದವನ ಜೊತೆ ರಾತೋರಾತ್ರಿ ನಿನ್ನ ಹುಡಗನೊಂದಿಗೆ ಷರಾರಿಯಾಗಿದ್ದಾಳೆ ಎಂದು ಪ್ರೀಯಕರನ ಮನೆಗೆ ಸುಗ್ಗಿ ಅವನ ಕುಟುಂಬದವರ ಮೇಲೆ ಹಲ್ಲೆ ಮಾಡಿ ಯುವಕನ ತಾಯಿಯೊಂದಿಗೆ ದೌರ್ಜನ್ಯ
ನಡೆಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಆಕೆಯನ್ನು ಬೆತ್ತಲಾಗಿಸಿ ನಡು ಬಿದಿಯಲ್ಲಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿ ದುಷ್ಟ ಕ್ರೌರ್ಯ ಮೆರೆದಿದ್ದಾರೆ.
ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ, ಮಹಿಳೆಯನ್ನು ಬೆತ್ತಲೆಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹೊಡೆದಿದ್ದ ಸ್ಥಳ ಪರಿಶೀಲಿಸಿದರು. ಈ ವೇಳೆ ಸಚಿವರ ಕಾಲಿಗೆ ಬಿದ್ದ ಯುವಕನ ಅಜ್ಜಿ ‘ನಮಗೇನೂ ಗೊತ್ತಿಲ್ಲ, ನಮ್ಮನ್ನು ಕಾಪಾಡಿ’ ಎಂದು ಕಾಲಿಗೆ ಬಿದ್ದು ಬೇಡಿಕೊಂಡರು.
ಗ್ರಾಮದ ಯುವಕ ದುಂಡಪ್ಪ ಹಾಗೂ ಪ್ರಿಯಾಂಕ ಪ್ರೀತಿಸಿ, ಭಾನುವಾರ ರಾತ್ರಿ ಓಡಿ ಹೋಗಿದ್ದಾರೆ. ಸಿಟ್ಟಿಗೆದ್ದ ಯುವತಿ ಮನೆಯವರು ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದರು. ಈ ಹಿನ್ನೆಲೆಯಲ್ಲಿ ಊರಿಗೆ ಬಂದ ಡಾ.ಪರಮೇಶ್ವರ, ಮಹಿಳೆಯ ಮನೆಗೆ ಆದ ಹಾಗೂ ಹಲ್ಲೆ ಮಾಡಿದ ಸ್ಥಳಗಳನ್ನು ಪರಿಶೀಲಿಸಿದರು. ಮನೆಯ ಮುಂದೆ ಕಣ್ಣೀರು ಹಾಕುತ್ತ ಕುಳಿತಿದ್ದ ಯುವಕನ ಅಜ್ಜಿಗೆ ಸಮಾಧಾನ ಹೇಳಿದರು.
ಸಚಿವರ ಮುಂದೆ ಗೋಳು ತೋಡಿಕೊಂಡ ಅಜ್ಜಿ, ‘ನಮಗೆ ಈ ವಿಷಯ ಏನೂ ಗೊತ್ತಿಲ್ಲಪ್ಪ. ಮೊಮ್ಮಗ ನಿನ್ನೆ ಮನೆಯಲ್ಲೇ ಮಲಗಿದ್ದ. ಯಾವಾಗ ಆ ಹುಡುಗಿ ಕರೆದಳೋ ಯಾವಾಗ ಹೋದನೋ ಗೊತ್ತಿಲ್ಲ. ಆಕೆಯ ಮನೆಯವರು ಬಂದು ಏಕಾಏಕಿ ಹೊಡೆಯಲು ಶುರು ಮಾಡಿದರು. ನಮಗೆ ಜೀವ ಭಯ ಉಂಟಾಗಿದೆ. ನಮ್ಮನ್ನು ಕಾಪಾಡಿ ತಂದೆ’ ಎನ್ನುತ್ತ ಅಜ್ಜಿ ಪರಮೇಶ್ವರ ಅವರ ಕಾಲಿಗೆ ಬಿದ್ದರು.
ಇಂತಹ ಹೇಯ ಘಟನೆ ನಡೆದಿದಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಆಕ್ರೋಷವನ್ನು ವ್ಯಕ್ತಪಡಿಸಿದ್ದಾರೆ. ಸಮಾಜ ತಲೆ ತಗ್ಗಿಸುವಂತ ಘಟನೆ ಇದು ಎಂದು, ತಪ್ಪಿಸ್ತರಿಗೆ ತಕ್ಕ ಶಿಕ್ಷೆಯಾಗಲು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.