ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ : ಶ್ರೀಭಗವಾನ್ ಸತ್ಯ ಸಾಯಿ ಬಾಬಾ ರವರ ಆಶೀರ್ವಾದದಿಂದ ಇಷ್ಟೆಲ್ಲಾ ಅಭಿವೃದ್ಧಿ ಕೆಲಸಗಳು ಮಾಡಲು ನನ್ನಿಂದ ಸಾಧ್ಯ ಎಂದು ಮಾಜಿ ಸ್ವೀಕರ್ ಹಾಲಿ ಶಾಸಕ ಕೆ . ಆರ್ . ರಮೇಶ್ ಕುಮಾರ್ ತಿಳಿಸಿದರು .
ತಾಲ್ಲೂಕಿನ ರಾಯಲ್ಪಾಡು ಹೋಬಳಿ ಸುಣ್ಣಕಲ್ಲು ಅರಣ್ಯ ಪ್ರದೇಶದಲ್ಲಿ ವಿನೂತನವಾಗಿ ಪ್ಯಾರಾ ಗೈಡರ್ ಮುಖಾಂತರ ಬಿತ್ತನೆ ಬೀಜ ಹಾಗೂ ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೆ.ಆರ್ . ರಮೇಶ್ ಕುಮಾರ್ ಈಗ ಹಾಕುತ್ತಿರುವ ಬಿತ್ತನೆ ಬೀಜಕ್ಕೆ ಗೊಬ್ಬರ , ನೀರು , ಹಾಕುವಂತಿಲ್ಲ ಪ್ರಕೃತಿಯಿಂದ ಬರುವ ಮಳೆಯಿಂದಾಗಿ ಗಿಡಗಳು ಬೆಳೆಯುತ್ತವೆ . ಪರಿಸರ ಅಚ್ಚು ಹಸಿರಾಗಿ ಕಾಣುತ್ತವೆ . ಕಳೆದ ನಾಲ್ಕು ವರ್ಷಗಳಿಂದ ಬರಗಾಲ ಇತ್ತು ಪ್ರಾಣಿ ಪಕ್ಷಿಗಳಿಗೂ ಸಹ ನೀರು ಸಿಗದಂತಾಗಿತ್ತು . ಈಗ ದೇವರ ದಯದಿಂದ ಉತ್ತಮ ಮಳೆಯಾಗುತ್ತದೆ .
ಮಳೆಗಾಲದ ಕಾರಣದಿಂದ ಈ ಬಿತ್ತನೆ ಬೀಜಗಳ ಕಾರ್ಯ ಮಾಡುತ್ತಿದ್ದೇವೆ . ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ನನಗೆ ಸಾಯಿ ಬಾಬಾ ಆಶೀರ್ವಾದಿಂದ ಈ ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ಮಾಡುತ್ತಿದ್ದೇನೆ ಎಂದರು .
ಅಂದ್ರ ಪ್ರದೇಶದ ಮಾಜಿ ಮುಖ್ಯ ಮಂತ್ರಿ ದಿವಂಗತ ಎನ್.ಟಿ ರಾಮರಾವ್ ರವರು ತಿರುಪತಿ ಬೆಟ್ಟದಲ್ಲಿ ಕೂದಲು ಕೊಟ್ಟು ಬರುವಾಗ ಅವರಿಗೆ ಆಲೋಚನೆ ಬಂತು ಈ ಬೆಟ್ಟದಲ್ಲಿ ಯಾಕೆ ನಾವು ಬಿತ್ತನೆ ಬೀಜ ಮಾಡಬಾರದು ಎಂದು ತಿಳಿದು ಆಗ ಬಿತ್ತನೆ ಬೀಜ ಕಾರ್ಯಮಾಡಿದರು ಈಗ ತಿರುಪತಿಯ ಬೆಟ್ಟಗುಡ್ಡಗಳಲ್ಲಿ ಅಚ್ಚು ಹಸಿರಾಗಿ ಗಿಡಮರಗಳು ಬೆಳದಿದೆ . ಮಹಾನುಭಾವ ಮಾಡಿರುವ ಕಾರ್ಯವೇ ಇಂದು ನನಗೆ ಸೂತಿಯಾಗಿದೆ . ಈಗಾಗಿ ಬಿತ್ತನೆ ಬೀಜ ಕಾರ್ಯ ಮಾಡುತ್ತಿದ್ದೇವೆ ಎಂದರು .
ನನ್ನ ಆಸೆಗಳು ಬೆಟ್ಟ ದಷ್ಟು ಇದೆ ಅವಕಾಶ ಸಿಕ್ಕಿದಾಗ ನನ್ನ ಕನಸುನ್ನು ನೆನಸು ಮಾಡಲು ಕೆಲಸ ಮಾಡುತ್ತಿದ್ದೇನೆ ಈ ತಾಲ್ಲೂಕಿನ ಜನರು ಬಹಳ ಹೃದಯವಂತರು . ನಾವು ಮಾಡುವ ಕೆಲಸಗಳಿಂದ ನಾವು ಮಾತನಾಡುವ ಭಾಷೆಯಿಂದ ಜನರು ನಮ್ಮ ಪ್ರೀತಿ ವಿಶ್ವಾಸವನ್ನುಗಳಿಸಬಹುದು ಈ ಒಂದು ಕಾರ್ಯಕ್ರಮಕ್ಕೆ ಬಿಳಿ ಪಂಚೆ , ಟವಲ್ ಹಾಕಿಕೊಂಡು ಬಂದಿರುವ ಉದ್ದೇಶ ನಮ್ಮ ಹಿಂದು ಸಂಪ್ರದಾಯ ಪ್ರಕಾರ ಯಾವುದೊಂದು ಶುಭ ಕಾರ್ಯವನ್ನು ಮಾಡಿದಾಗ ಬಿಳಿ ವಸ್ತ್ರವನ್ನು ಧರಿಸುವುದು ಶುಭ ಸೂಚನೆ ಎಂದ ಇವರು ನಮ್ಮದು ಪ್ರಾಕೃತಿಕವಾಗಿ ಸಂಪದ್ಭರಿತ ದೇಶ ಬ್ರಿಟಿಷರ್ ಕಾಲದಿಂದಲೂ ನಮ್ಮ ಪ್ರಾಕೃತಿಕ ಸಂಪತ್ನ್ನು ದರಾಳವಾಗಿ ಉಪಯೋಗಿಸಲಾಗುತ್ತಿದ್ದು , ಹೇರಳವಾದ ಈ ಸಂಪತ್ ಒ ೦ ದು ಕಾಲಕ್ಕೆ ಮುಗಿಯದ ಅಕ್ಷಯ ಪಾತ್ರೆಯಂತೆ ಇತ್ತು ಇಂತಹ ಅಕ್ಷಯ ಭಂಡಾರ ಕ್ಷಯವಾಗದಂತೆ ಮುಂದಿನ ಪೀಳಿಗೆಗೆ ಇದನ್ನು ಉಳಿಸುವ ಬೆಳಸುವ ಕಾರ್ಯವನ್ನು ನಾವು ನೀವು ಎಲ್ಲರೂ ಮಾಡಬೇಕು . ಮರ ಗಿಡ , ಗಿಡಮೂಳಕೆ ಉಳಿದರೆ ಪ್ರಕೃತಿ ಸಮತೋಲನವಾಗಿ ಜೀವ ಜಗತ್ತೂ ಕೂಡಾ ನೆಮ್ಮದಿಯ ಬದಕು ಕಾಣಲು ಸಾಧ್ಯ . ಈ ಭೂಮಿ , ಪರಿಸರ ನಮಗಾಗಿ ಅಲ್ಲ , ಮುಂದಿನ ಪೀಳಿಗೆಗಾಗಿ ಎಂದರು . ಜೀವನ ಪರ್ಯಾಂತ ನೆನಸಿಕೊಳ್ಳುವ ಕೆಲಸಗಳು ಮಾಡುವ ಉದ್ದೇಶ ನನಗೆ ಇದೆ ಕಷ್ಟದಲ್ಲಿ ನೆರವಾಗಿದ್ದವರನ್ನು ನೆನಸಿಕೊಳ್ಳಬೇಕು ನನ್ನ 50 ವರ್ಷಗಳ ಸಾರ್ವಜನಿಕ ಜೀವನ 45 ವರ್ಷಗಳ ಸಂಸದೀಯ ಜೀವನ ನೋಡಿದ್ದೇನೆ . ಈ ತಾಲ್ಲೂಕಿನ ಜನರು ನನಗೆ ಆಶೀರ್ವಾದ ಮಾಡುತ್ತಾ ಬ ೦ ದಿದ್ದಾರೆ . ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ನಾನು ನನ್ನ ಜೀವನ ಇರುವವರಿಗೂ ಶಕ್ತಿ ಏರಿ ಶ್ರಮಿಸುತ್ತೇನೆ ಎಂದರು.
ವಲಯ ಅರಣ್ಯಾಧಿಕಾರಿ ಸುರೇಶ್ ಬಾಬು ಮಾತನಾಡಿ ಈ ತಾಲ್ಲೂಕಿನಲ್ಲಿ ಒಟ್ಟು 43 ಸಾವಿರ ಎಕರೆ ಅರಣ್ಯ ಪ್ರದೇಶವಿದೆ ಈ ರಾಯಲ್ಪಾಡು ಭಾಗದಲ್ಲಿ 20 ಸಾವಿರ ಅರಣ್ಯ ಪ್ರದೇಶ ಇದೆ ಈಗ 9 ಸಾವಿರ ಎಕರೆ ಅರಣ್ಯ ಪ್ರದೇಶದಲ್ಲಿ ಬಿತ್ತನೆ ಬೀಜ ಪ್ರಸರಣ ಮಾಡುತ್ತಿದ್ದೇವೆ . ಶಾಸಕರ ಅದೇಶದಂತೆ ಈ ಅರಣ್ಯ ಪ್ರದೇಶದಲ್ಲಿ ಎಲ್ಲಾ ರೀತಿಯ ಜಾತಿಯ ಬೀಜಗಳನ್ನು ಹಾಕುತ್ತಿದ್ದೇವೆ . ಈ ಒಂದು ಬಿತ್ತನೆ ಬೀಜ ಕಾರ್ಯ ಎರಡು ದಿನಗಳ ಕಾಲ ನಡೆಯಲಿದೆ ಎಂದರು .
ಈ ವನಮಹೊತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ , ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ , ಉಪಾಧ್ಯಕ್ಷ ಕೋಡಿಪಲ್ಲಿ ಸುಬ್ಬರೆಡ್ಡಿ ಕೂರಿಗೇಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರೆಡ್ಡಿ , ರಾಯಲಾಡು ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ಸಂಜಯ್ರೆಡ್ಡಿ , ಡಿಸಿಎಫ್ ಶಿವಶಂಕರ್ , ಎಸಿಎಫ್ ಸಹನಕುಮಾರ್ ಸಾಮಾಜಿಕ ವಲಯ ಅರಣ್ಯಾಧಿಕಾರಿ ಬಾಲುಚಂದ್ರ , ಮುದಿಮಡಗು ಅಮರನಾರಾಯಣ , ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಬಗ್ಗಳಗಟ್ಟ ಶ್ರೀನಿವಾಸರೆಡ್ಡಿ , ಪೆದ್ದ ರೆಡ್ಡಿ , ಮುಖಂಡರಾದ ಪಾತೂರು ನಾಗರಾಜ್ , ಶಂಕರರೆಡ್ಡಿ , ಆಲವಾಟ ಮಂಜುನಾಥರೆಡ್ಡಿ , ಬೋರವೆಲ್ ಕೃಷ್ಣಾರೆಡ್ಡಿ ದಿಂಬಾಲ ವೆಂಕಟಾದಿ , ಇನ್ನೂ ಹಲವಾರು ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .